ಕೋವಿಡ್ ಸೋಂಕು ವಿಶ್ವಕ್ಕೆ ಬಂದಪ್ಪಳಿಸಿ ಎರಡು ವರ್ಷಗಳ ಬಳಿಕ ಇದೀಗ ಕೊಂಚ ಶಾಂತ ರೀತಿಯಲ್ಲಿ ವರ್ತಿಸುತ್ತಿದೆ. ಕೊರೊನಾ ಮೂರನೇ ಅಲೆಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರಿಯು ಅಷ್ಟೇನು ಗಂಭೀರ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳನ್ನು ತೋರಿಸದ ಹಿನ್ನೆಲೆಯಲ್ಲಿ ಜನತೆ ಇನ್ಮುಂದೆ ಕೋವಿಡ್ ಕಾಟ ನಮಗೆ ಇರೋದಿಲ್ಲ ಎಂಬ ಭಾವನೆಯಲ್ಲೇ ಇದ್ದಾರೆ. ಆದರೆ ಓಮಿಕ್ರಾನ್ ರೂಪಾಂತರಿಯ ಬಳಿಕ ಜಗತ್ತು ಸಹಜ ಸ್ಥಿತಿಗೆ ಮರಳುವುದಿಲ್ಲ. ಬದಲಿಗೆ ಹೊಸ ಕೋವಿಡ್ ರೂಪಾಂತರಿಯು ಮತ್ತಷ್ಟು ವೇಗವಾಗಿ ಹರಡುತ್ತದೆ . ಅಲ್ಲದೇ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ಮಾರಕವಾಗಿ ಇರುತ್ತದೆ (Next Covid-19 variant) ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ .
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞೆ ಹಾಗೂ ಕೋವಿಡ್ 19 ತಾಂತ್ರಿಕ ಪ್ರಮುಖರಾದ ಡಾ. ಮಾರಿಯಾ ವ್ಯಾನ್ ಕೆರ್ಖೋವ್ ಕೊರೊನಾ ಸಾಂಕ್ರಾಮಿಕವು ಸದ್ಯದಲ್ಲಿ ಅಂತೂ ಸಂಪೂರ್ಣ ಮುಕ್ತವಾಗುವ ಮಾತೇ ಇಲ್ಲ. ಇದರ ಭವಿಷ್ಯದ ರೂಪಾಂತರಗಳು ಓಮಿಕ್ರಾನ್ಗಿಂತ ಹೆಚ್ಚು ಅಪಾಯಕಾರಿಯಾಗಿರಲಿದೆ ಎಂದು ಹೇಳಿದರು.
ಮುಂದಿನ ರೂಪಾಂತರಿಯು ಹೆಚ್ಚು ಭಯಾನಕವಾಗಿ ಇರೋದ್ರಿಂದ ಅದು ರೋಗನಿರೋಧಕ ಶಕ್ತಿಯನ್ನೂ ಸೋಲಿಸುತ್ತದೆ. ಹೀಗಾಗಿ ಈಗಲೇ ಕೊರೊನಾ ಲಸಿಕೆಗಳ ಮೂರನೇ ಡೋಸ್ಗಳನ್ನು ಸ್ವೀಕರಿಸುವುದು ಹೆಚ್ಚು ಸುರಕ್ಷಿತ ಎಂದು ಡಾ. ಮಾರಿಯಾ ವ್ಯಾನ್ ಕೆರ್ಖೋವ್ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗಬಹುದು ಎಂದು ನಾವೆಲ್ಲ ನಿರೀಕ್ಷೆ ಮಾಡುತ್ತಿದ್ದೇವೆ. ಆದರೆ ಮುಂಬರುವ ಕೋವಿಡ್ ರೂಪಾಂತರಿಗಳು ಓಮಿಕ್ರಾನ್ಗಳಿಗಿಂತ ಹೆಚ್ಚು ಮಾರಕವಾಗಿ ಇರಲಿದೆ. ಇದು ದುರ್ಬಲ ವರ್ಗದ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಮಾರಣಾಂತಿಕ ಪರಿಣಾಮವನ್ನು ಬೀರಬಲ್ಲದು. ಹೀಗಾಗಿ ಇನ್ನೂ ಕೊರೊನಾ ಲಸಿಕೆಗಳನ್ನು ಕೊರೊನಾ ಡೋಸ್ಗಳನ್ನು ಕೂಡಲೇ ಸ್ವೀಕರಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
Next Covid-19 variant will be more infectious than Omicron, possibly deadlier, warns WHO
ಇದನ್ನು ಓದಿ : ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ : Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?