Omicron : ಕೋವಿಡ್ 19 ಸಾಂಕ್ರಾಮಿಕವು ದಿನಕ್ಕೊಂದು ಆತಂಕಗಳನ್ನು ಹುಟ್ಟು ಹಾಕುತ್ತಲೇ ಇದೆ. ಅದರಲ್ಲೂ ಈಗ ಬಂದಿರುವ ಓಮಿಕ್ರಾನ್ ರೂಪಾಂತರಿಯು ಹರಡುವ ವೇಗವನ್ನು ನೋಡುತ್ತಿದ್ದರೆ ಭಯವಾಗುತ್ತೆ. ಅಂತದ್ರಲ್ಲಿ ಕೊರೊನಾ ರೂಪಾಂತರಿಯ ಬಗ್ಗೆ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಓಮಿಕ್ರಾನ್ ರೂಪಾಂತರಿಯು ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಾಗಿ ಇರಲಿದೆ ಹಾಗೂ ಪ್ಲಾಸ್ಟಿಕ್ ಮೇಲೆ 8 ದಿನಗಳ ಕಾಲ ಇರಲಿದೆ ಎಂದು ಅಧ್ಯಯನವು ಹೇಳಿದೆ. ಇದೇ ಕಾರಣದಿಂದಲೇ ಓಮಿಕ್ರಾನ್ ರೂಪಾಂತರಿಯು ಇಷ್ಟೊಂದು ವೇಗದಲ್ಲಿ ಹರಡುತ್ತಿದೆ ಎನ್ನಲಾಗಿದೆ .
ಜಪಾನ್ನ ಕ್ಯೋಟೋ ಪ್ರಿಫೆಕ್ಚುವಲ್ ಯೂನಿವರ್ಸಿಟಿ ಆಫ್ ಮೆಡಿಸಿನ್ನಲ್ಲಿ ನಡೆಸಲಾದ ಅಧ್ಯಯನದಲ್ಲಿ ವುಹಾನ್ನಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ನ ಎಲ್ಲಾ ರೂಪಾಂತರಗಳ ಬಗ್ಗೆ ಸಂಶೋಧನೆ ಮಾಡಲಾಗಿದೆ.
ಆಲ್ಪಾ. ಬೀಟಾ, ಡೆಲ್ಟಾ ಹಾಗೂ ಓಮಿಕ್ರಾನ್ ರೂಪಾಂತರಿಗಳು ಪ್ಲಾಸ್ಟಿಕ್ ಹಾಗೂ ಚರ್ಮದ ಮೇಲೆ ಮೂಲ ವೈರಸ್ ಇರುವುದಕ್ಕಿಂತ ಎರಡುಪಟ್ಟು ದೀರ್ಘಾವದಿಯ ಬದುಕುಳಿಯುವಿಕೆಯನ್ನು ಪ್ರದರ್ಶಿಸಿವೆ ಎಂದು ಪ್ರಿಪಿಂಟ್ ರೆಪೊಸಿಟರಿಯಲ್ಲಿ ಇತ್ತೀಚಿಗೆ ಪ್ರಕಟಿಸಲಾದ ಅಧ್ಯಯನದಲ್ಲಿ ತಿಳಿದು ಬಂದಿದೆ.
ಪರಿಸರದಲ್ಲಿ ಈ ವೈರಸ್ಗಳು ಹೆಚ್ಚಿನ ಅವಧಿಗಳ ಕಾಲ ಸ್ಥಿರತೆಯನ್ನು ಹೊಂದಿರುವದರಿಂದಲೇ ಅಪಾಯ ಹೆಚ್ಚಾಗಿದೆ ಹಾಗೂ ಅವುಗಳ ಹರಡುವಿಕೆ ಇನ್ನಷ್ಟು ಹೆಚ್ಚಿನ ವೇಗವನ್ನು ಪಡೆದುಕೊಂಡಿವೆ ಎಂದು ಅಧ್ಯಯನದ ಪ್ರಮುಖ ಲೇಖಕರು ಹೇಳಿದ್ದಾರೆ .
ಓಮಿಕ್ರಾನ್ ರೂಪಾಂತರಿಯು ಪರಿಸರದಲ್ಲಿ ಅತ್ಯಧಿಕ ಸ್ಥಿರತೆಯನ್ನು ತೋರಿಸಿದೆ ಎಂದು ಈ ಅಧ್ಯಯನವು ಸಾಬೀತುಪಡಿಸಿದೆ. ಇದು ಡೆಲ್ಟಾ ರೂಪಾಂತರಿಯ ಜಾಗವನ್ನು ಓಮಿಕ್ರಾನ್ ಆಕ್ರಮಿಸಲು ಅತ್ಯಂತ ಪ್ರಮುಖ ಕಾರಣವಾಗಿದೆ. ಹಾಗೂ ಇದೇ ಕಾರಣಕ್ಕಾಗಿ ಓಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ.
Omicron stays on skin for over 21 hours, more than 8 days on plastic: Study
ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು
ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?