ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಎದುರಾಗಿರುವ ಬೆನ್ನಲ್ಲೇ ಮತ್ತೊಮ್ಮೆ ಓಮಿಕ್ರಾನ್ ಆತಂಕ ಕೂಡ ತಲೆದೋರಿದೆ. ದೇಶದ ಮೊದಲು ಎರಡು ಓಮಿಕ್ರಾನ್ ಪ್ರಕರಣಗಳು ( Omicron Variant Bangalore) ಬೆಂಗಳೂರಿನಲ್ಲಿ ಪತ್ತೆಯಾದ ಬೆನ್ನಲ್ಲೇ ಮೂರನೇ ಓಮಿಕ್ರಾನ್ ಪ್ರಕರಣ ವೂ ಬೆಂಗಳೂರಿನಲ್ಲಿ ದಾಖಲಾಗಿದ್ದು ರಾಜ್ಯ ಸರ್ಕಾರ ಸೇರಿದಂತೆ ರಾಜ್ಯವೇ ಮತ್ತೊಮ್ಮೆ ಬೆಚ್ಚಿಬಿದ್ದಿದೆ.
ಡಿಸೆಂಬರ್ 2 ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 34 ವರ್ಷದ ಸಾಫ್ಟವೇರ್ ಇಂಜೀನಿಯರ್ ಗೆ ಓಮಿಕ್ರಾನ್ ಸೋಂಕು ತಗುಲಿದೆ. ಬೊಮ್ಮಳ್ಳಿ ಮೂಲದ ಸಾಫ್ಟವೇರ್ ಇಂಜಿನಿಯರ್ ಒಂದು ವಾರದ ಕಾಲದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಜಿನೋಮಿಕ್ ಸಿಕ್ವೆನ್ಸ್ ಟೆಸ್ಟ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಗೆ ಓಮಿಕ್ರಾನ್ ಧೃಡಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸೋಂಕಿತನನ್ನು ನಗರದ ಬೌರಿಂಗ್ ಹಾಸ್ಪಿಟಲ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಮೂರನೇ ಓಮಿಕ್ರಾನ್ ಪ್ರಕರಣ ( Omicron Variant Bangalore ) ದಾಖಲಾಗಿರೋ ಸಂಗತಿಯನ್ನು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. 34 ವರ್ಷದ ದಕ್ಷಿಣ ಅಫ್ರಿಕಾದಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ. ಇದು ಮೂರನೇ ಪ್ರಕರಣವಾಗಿದ್ದು , ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಐವರು ಹಾಗೂ ೧೫ ಸೆಕೆಂಡರಿ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಮಾಹಿತಿನೀಡಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಗೆ ಸೋಂಕಿನ ಭೀತಿ ಎದುರಾಗಿದ್ದರಿಂದ ಅವರನ್ನು ಖಾಸಗಿಯಾಗಿ ಐಸೋಲೇಶನ್ ನಲ್ಲಿ ಇಡಲಾಗಿತ್ತು. ಸೋಂಕಿತನು ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡದಂತೆ ಕಾಳಜಿ ವಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಯಮ ರೂಪಿಸಿದ್ದು ರೋಗಿಗಳ ಆಗ್ರಹದ ಮೇರೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಓಮಿಕ್ರಾನ್ ಸೋಂಕಿತರ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ.
Third case of #Omicron has been detected in Karnataka. A 34-year-old male returning from South Africa has tested positive. He is isolated and being treated in a govt hospital. 5 primary and 15 secondary contacts have been traced and samples sent for testing. @BSBommai #COVID19
— Dr Sudhakar K (@mla_sudhakar) December 12, 2021
ಮಾತ್ರವಲ್ಲ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಓಮಿಕ್ರಾನ್ ರೋಗಿಗಳ ಚಿಕಿತ್ಸೆ ಮತ್ತು ಡಿಸ್ಚಾರ್ಜ್ ಗೆ ಅನುಸರಿಸಬೇಕಾದ ನಿಯನಗಳ ಪಟ್ಟಿಯನ್ನು ಮಾರ್ಗ ಸೂಚಿಯನ್ನು ರಿಲೀಸ್ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರು ಸೇರಿದಂತೆ ಹೈರಿಸ್ಕ್ ದೇಶಗಳ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲು ಏರ್ಪೋರ್ಟ್ ಆಡಳಿತ ಮಂಡಳಿ ಕಠಿಣ ನಿಯಮ ರೂಪಿಸಿದೆ. ಅಲ್ಲದೇ ಸೋಂಕಿತರಿಗೆ ಸೂಕ್ತ ಆಸ್ಪತ್ರೆ ಹಾಗೂ ಐಸೋಲೇಶನ್ ಒದಗಿಸಲು ಏರ್ಪೋರ್ಟ್ ಅಥಾರಿಟಿ ಸರ್ಕಾರ ಹಾಗೂ ಜಿಲ್ಲಾಢಳಿತದ ಸಹಕಾರದೊಂದಿಗೆ ಯೋಜನೆ ರೂಪಿಸಿದೆ.
( Omicron Variant Bangalore Shock to Karnataka, Another Case Found in Bangalore )