The law of conversion : ಕಾಂಗ್ರೆಸ್ ವಿರೋಧದ ನಡುವೆಯೂ ಬಿಜೆಪಿ ಧೃಡ ನಿರ್ಧಾರ: ಜಾರಿಯಾಗಲಿದೆ ಮತಾಂತರ ಕಾನೂನು

ಬೆಂಗಳೂರು : ರಾಜ್ಯದಲ್ಲಿ ಅಲ್ಲಲ್ಲಿ ಮತಾಂತರ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಸರ್ಕಾರ ಮತಾಂತರ ತಡೆ ಕಾಯ್ದೆ ಜಾರಿಗೆ ತರುವ ತನ್ನ ನಿರ್ಧಾರಕ್ಕೆ ಬದ್ಧ ಎಂದಿದ್ದು, ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ ಕಾನೂನು ಜಾರಿಗೆ ಸಿದ್ಧವಾಗಿದೆ. ಯಾವುದೇ ಧರ್ಮಕ್ಕೂ ಆತಂಕ ಬೇಡ ಎನ್ನುವ ಮೂಲಕ ಸಿಎಂ ಹೋರಾಟಗಳಿಗೆ ಬಗ್ಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಹೀಗಾಗಿ ಸಮಾಜದ ಎಲ್ಲ ವರ್ಗ, ಧರ್ಮ, ಜಾತಿಯ ಜನರು ನೆಮ್ಮದಿಯಾಗಿ ಬದುಕುವ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ( The law of conversion ) ಜಾರಿಯಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಪುನರುಚ್ಛರಿಸಿದ್ದಾರೆ.

ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಹುಬ್ಬಳ್ಳಿಗೆ ಭೇಟಿ ನೀಡಿದ ಸಿಎಂ ಅಧಿವೇಶನದ ತಯಾರಿ ಬಗ್ಗೆ ಮಾತನಾಡಿದ್ದಲ್ಲದೇ ಈ ಅಧಿವೇಶನದಲ್ಲಿ ಮತಾಂತರ ತಡೆ ಕಾಯಿದೆ ಜಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದೂ,ಕ್ರಿಶ್ಚಿಯನ್,ಮುಸ್ಲಿಂ,ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿದೆ. ಅವರಿಗೆ ಯಾವುದೇ ಆತಂಕಬೇಡ. ಕಾನೂನಿನಿಂದ ಯಾವುದೇ ಧರ್ಮದ ಹಿತಾಸಕ್ತಿಗೆ ಧಕ್ಕೆಯಾಗಲ್ಲ. ಆದರೆ ಬಡತನ,ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು ಮತಾಂತರ ಮಾಡೋದು ತಪ್ಪು ‌. ದೇವರ ಹೆಸರಿನಲ್ಲಿ ಆಸೆ,ಆಮಿಶ ಒಡ್ಡಿ ಮತಾಂತರ ಮಾಡೋದಿಕ್ಕೆ ಅವಕಾಶವಿಲ್ಲ.

ಮತಾಂತರ ಕಾಯ್ದೆಗೂ ಚರ್ಚೆಗೂ ಮೊದಲೇ ಒಂದು ಕಮಿಟಿ ಮಾಡಿದ್ದೇವೆ. ಕಾನೂನು ಇಲಾಖೆಯ ಸಮಿತಿ ಈಗಾಗಲೇ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುತ್ತೇವೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ಬಳಿಕ ಬೆಳಗಾವಿ ಅಧಿವೇಶನದಲ್ಲೇ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಮತಾಂತರ ಯಾವ ಧರ್ಮಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇದಕ್ಕೆ ಬೇರೆ ಯಾವುದೇ ಧರ್ಮದವರೂ ಆತಂಕ ಪಡುವ ಅಗತ್ಯವಿಲ್ಲ.

ನನ್ನನ್ನು ಕೆಲ ಕ್ರಿಶ್ಚಿಯನ್ ಧರ್ಮದ ನಾಯಕರು ಭೇಟಿ ಮಾಡಿದ್ದಾರೆ. ಅವರಿಗೂ ನಾನು ಇದೇ ವಿಚಾರವನ್ನು ಹೇಳಿದ್ದೇನೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ನಮ್ಮ‌ ಕಾನೂನು ಆಸೆ,ಆಮಿಶ,ಅನಾರೋಗ್ಯದ ನೆಪದಲ್ಲಿ ನಡೆಯುವ ಕಾನೂನು ಬಾಹಿರ ಮತಾಂತರವನ್ನು ತಡೆಯುವುದಾಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರ ತರಲು ಯೋಚಿಸಿರುವ ಈ ಕಾನೂನಿಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯಕ್ಕೆ ಮತ್ತೆ ಹೊಸ ಸಿಎಂ : ಬೊಮ್ಮಾಯಿ ಹುದ್ದೆಗೆ ಕಂಟಕವಾಯ್ತು ಮಂಡಿನೋವು

ಇದನ್ನೂ ಓದಿ : ಬಿಟ್ ಕಾಯಿನ್ ಕಾನೂನುಬದ್ಧ: ಮೋದಿ ಅಕೌಂಟ್ ಹ್ಯಾಕ್ ಮಾಡಿ ಟ್ವೀಟ್

( The law of conversion, BJP’s bold decision in spite of opposition to Congress )

Comments are closed.