ಬೆಂಗಳೂರು : ರಾಜ್ಯದಲ್ಲೀಗ ಕೊರೊನಾ ವೈರಸ್ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕಳೆದ 15 ದಿನಗಳಲ್ಲಿ 177 ಹೊಸ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಈಗಾಗಲೇ ವೈರಲ್ ಫಿವರ್ ಕೂಡ ರಾಜ್ಯ ಸೇರಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು, ವೈರಲ್ ಫಿವರ್‌ಗೆ ಚಿಕಿತ್ಸೆಗಾಗಿ ದಾಖಲಾಗುತ್ತಿರುವವರಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರು ಹರಸಾಹಸ ಪಡುತ್ತಿರುವ ಈ ಸಮಯದಲ್ಲಿ ಡೆಂಗ್ಯೂ ಚಿಕಿತ್ಸೆ ನೀಡಲು ವೈದ್ಯರು ಇನ್ನಿಲ್ಲದ ಪರಿಪಾಡಲು ಪಡುತ್ತಿದ್ದಾರೆ.
ಈಗಾಗಲೇ ಡೆಂಗ್ಯೂ ಸೊಂಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಬಿಬಿಎಂಪಿ ಕೂಡ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಸೇರಿದಂತೆ ಸ್ವಚ್ಚತೆ ಬಗ್ಗೆ ಜನತೆಗೆ ತಿಳಿ ಹೇಳುತ್ತಿದ್ದು, ಫಾಗಿಂಗ್ ಯಂತ್ರದ ಮೂಲಕ ಹೊಗೆಯನ್ನು ಬಿಡಿಸುವುದು, ಜೊತೆಗೆ ನೀರು ನಿಂತ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಸಲಾಗುತ್ತಿದೆ ಅಂತ ತಿಳಿಸಿದೆ.
ಇದನ್ನೂ ಓದಿ: Covid Updates : ಕರ್ನಾಟಕದಲ್ಲಿ ತಗ್ಗಿದ ಕೊರೊನಾ ಅಬ್ಬರ : 264 ಹೊಸ ಕೇಸ್, 6 ಸಾವು
ಡೆಂಗ್ಯೂ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆ ಬಳಿ ರಕ್ತ ಕಣಗಳು ಕಡಿಮೆಯಾಗುತ್ತವೆ ಇದರಿಂದ ರೋಗ ಹರಡುತ್ತದೆ ಎಂದು ಹೇಳಿದ್ದಾರೆ. ಡೆಂಗ್ಯೂ ಜ್ವರದ ರೋಗ ಲಕ್ಷಣಗಳು: ತೀವ್ರ ಜ್ವರ, ಸಂದು ನೋವು, ವಿಪರೀತ ತಲೆನೋವು, ತಲೆಸುತ್ತು, ವಾಂತಿ, ವಿಪರೀತ ಚಳಿ, ಮೈಯಲ್ಲಿ ಗುಳ್ಳೆ, ಬಿಟ್ಟು ಬಿಡದೇ ಜ್ವರ ಕಾಣಿಸಿಕೊಳ್ಳುವುದು
ಈಡಿಸ್ ಸೊಳ್ಳೆ ಹಳೆಯ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. ಇದರಿಂದ ಡೆಂಗ್ಯೂ ಹರಡುವುದನ್ನು ತಪ್ಪಿಸಬಹುದು. ಡೆಂಗ್ಯೂ ಬಂದಾಗ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಿ ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ. ಆದರೂ ಜ್ವರ ಕಡಿಮೆಯಾಗದಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ. ದ್ರವ ಪದಾರ್ಥಗಳನ್ನೇ ಹೆಚ್ಚು ಸೇವಿಸಿ.
(177 dengue cases registered in 15 days)