ಭಾನುವಾರ, ಏಪ್ರಿಲ್ 27, 2025
HomeCorona UpdatesStudents Corona vaccine : ಏಪ್ರಿಲ್ 1 ರಿಂದ ಶಾಲೆಯಲ್ಲೇ ಕೊರೋನಾ ಲಸಿಕೆ : ಸರ್ಕಾರದ...

Students Corona vaccine : ಏಪ್ರಿಲ್ 1 ರಿಂದ ಶಾಲೆಯಲ್ಲೇ ಕೊರೋನಾ ಲಸಿಕೆ : ಸರ್ಕಾರದ ಪರಿಷ್ಕೃತ ಸುತ್ತೂಲೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೆ ಅಲೆಯ ಪ್ರಭಾವ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿಲ್ಲ.‌ ಹೀಗಾಗಿ ವಯಸ್ಕರ ಲಸಿಕೆ ಸೇರಿದಂತೆ ಮಕ್ಕಳ ಲಸಿಕೆ ಯವರೆಗೆ (Students Corona vaccine) ಸರ್ಕಾರದ ಅಭಿಯಾನ ಮುಂದುವರೆದಿದೆ. ಈ ಮಧ್ಯೆ ಈಗಾಗಲೇ‌ ಕಾರ್ಯಾರಂಭ ಮಾಡಿರುವ 12-14 ವರ್ಷದ ಮಕ್ಕಳ ಲಸಿಕೆ ಅಭಿಯಾನ ನೀರಿಕ್ಷಿತ ಗುರಿ ತಲುಪದ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ಶಾಲೆಯಲ್ಲೇ ಲಸಿಕೆ ಅಭಿಯಾನ ಆರಂಭವಾಗಲಿದೆ.

ಈಗಾಗಲೇ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ 12 – 14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕಾ‌ ಅಭಿಯಾನ‌ ಆರಂಭಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭಿಸಿ ರಾಜ್ಯದ ಎಲ್ಲೆಡೆ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಈವರೆಗೂ ಸರ್ಕಾರ ಮುನ್ನೆಚ್ಚರಿಕೆ ಕ್ರಮವಹಿಸಿ ಕೇವಲ ಆರೋಗ್ಯ ಕೇಂದ್ರದಲ್ಲಿ ಮಾತ್ರ ಲಸಿಕೆ‌ ನೀಡಲು ವ್ಯವಸ್ಥೆ ಕಲ್ಪಿಸಿತ್ತು. ಆದರೆ ಇದರಿಂದ ವೇಗವಾಗಿ ಲಸಿಕೆಯ ಗುರಿಮುಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಏಪ್ರಿಲ್1 ರಿಂದ ಶಾಲೆಗಳಲ್ಲೂ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಇಡೀ ರಾಜ್ಯದಲ್ಲಿ ಒಟ್ಟು 20.25 ಲಕ್ಷ ಮಕ್ಕಳು ಲಸಿಕೆ (Corona vaccine ) ಪಡೆಯಲು ಅರ್ಹರಾಗಿದ್ದಾರೆ. ಆದರೆ ಮಾರ್ಚ್ 16 ರಿಂದ ಈವರೆಗೆ 5.36 ಲಕ್ಷ‌ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಮಕ್ಕಳ ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಶಾಲೆಗಳಲ್ಲೂ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಹೀಗಾಗಿ ಏಪ್ರಿಲ್ 1 ರಿಂದ ಶಾಲೆಯಲ್ಲೂ ಮಕ್ಕಳಿಕೆ ಲಸಿಕೆ ನೀಡಲಾಗುತ್ತದೆ. ಈ ಹಿಂದೆ ಶೇಕಡಾ 100 ಕ್ಕೆ ನೂರರಷ್ಟು ಗುರಿ ಸಾಧಿಸುವ ಉದ್ದೇಶದಿಂದ ಮಕ್ಕಳ‌ ಲಸಿಕೆ ಆರಂಭಿಸಲಾಗಿತ್ತು.‌ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ‌

ಆದರೆ ಲಸಿಕೆ ಬಗೆಗಿನ ಭಯದಿಂದ ಲಕ್ಷಾಂತರ ಪೋಷಕರು ಲಸಿಕೆ ಹಾಕಿಸುವುದರಿಂದ ದೂರ ಉಳಿದಿದ್ದಾರೆ. ದೊಡ್ಡವರ ಲಸಿಕೆ ಪಡೆದ ಬಹುತೇಕರಲ್ಲಿ ತೀವ್ರ ಪ್ರಮಾಣದ ಜ್ವರ ಹಾಗೂ ತಲೆನೋವು ಕಾಣಿಸಿಕೊಂಡಿತ್ತು . ಈ ಹಿನ್ನೆಲೆಯಲ್ಲಿ ಈ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಲಸಿಕೆ ಕೊಡಿಸಿ ಅವರನ್ನು ಸಂಕಷ್ಟಕ್ಕೆ ಗುರಿಮಾಡಲು ಪೋಷಕರು ಸಿದ್ಧವಾಗು ತ್ತಿಲ್ಲ. ಇದೇ ಕಾರಣಕ್ಕೆ 12 ರಿಂದ 14 ವರ್ಷದ ಮಕ್ಕಳ ಲಸಿಕಾ ಅಭಿಯಾನ (Corona vaccine ) ನೀರಿಕ್ಷಿತ ಪ್ರಮಾಣದಲ್ಲಿ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಕಾರ್ಯಕರ್ತ ರೊಬ್ಬರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಒಂದರಲ್ಲೇ ಅಂದಾಜು ೮ ಲಕ್ಷ ಮಕ್ಕಳು ಲಸಿಕೆಯಿಂದ ದೂರ ಉಳಿದಿದ್ದಾರೆ.

ಹೀಗಾಗಿ ಈಗ ಬಹುತೇಕ ಪರೀಕ್ಷೆಗಳು ಮುಗಿದಿದ್ದು ಮಕ್ಕಳು ಬೇಸಿಗೆ ರಜೆಯ ಸಿದ್ಧತೆಯಲ್ಲಿದ್ದಾರೆ. ಈ ಲಸಿಕೆ ನೀಡಿದಲ್ಲಿ ಮುಂಬರುವ ಜೂನ್ ವೇಳೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಮುಕ್ತ ಸ್ಥಿತಿ ನಿರ್ಮಾಣವಾಗಲಿದೆ ಅನ್ನೋದು ಪೋಷಕರು ಹಾಗೂ ಸರ್ಕಾರದ ಲೆಕ್ಕಾಚಾರ.

ಇದನ್ನೂ ಓದಿ : Karnataka CET 2022 : ಜೂನ್ 16 -18 ಸಿಇಟಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ಒತ್ತಡಕ್ಕೆ ಒಳಗಾಗ ಬೇಡಿ : ಶಾಂತಿಯಿಂದ ಪರೀಕ್ಷೆ ಬರೆಯಿರಿ: ಮಕ್ಕಳಿಗೆ ಶಿಕ್ಷಣ ಸಚಿವರ ಮನವಿ

Students Corona vaccine in school from April 1 revised circular

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular