Drumstick Pickle : ನುಗ್ಗೆಕಾಯಿ ಉಪ್ಪಿನಕಾಯಿ ಎಂದಾದರೂ ಸವಿದಿದ್ದೀರಾ? ಇಲ್ಲವಾದರೆ ಈ ನುಗ್ಗೆಕಾಯಿ ಸೀಸನ್‌ನಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ

ಊಟದ ರುಚಿ ಹೆಚ್ಚಿಸುವುದೇ ಈ ಉಪ್ಪಿನಕಾಯಿಗಳು(Pickles). ಕೆಲವರಿಗೆ ವಿವಿಧ ಬಗೆಯ ಉಪ್ಪಿನಕಾಯಿಗಳ ರುಚಿ ಸವಿಯಲು ಬಹಳ ಇಷ್ಟ. ಸಾಮಾನ್ಯವಾಗಿ ಮಾವಿನಕಾಯಿ, ಲಿಂಬು, ಬೆಳ್ಳುಳ್ಳಿ, ಶುಂಠಿ, ಟೊಮೆಟೋ, ಹಾಗಲಕಾಯಿ, ತೊಂಡೆಕಾಯಿ, ಕ್ಯಾರೆಟ್‌, ಮಿಕ್ಸ್ಡ್‌ ಉಪ್ಪಿನಕಾಯಿಗಳನ್ನು ಎಲ್ಲರೂ ಕೇಳಿರುತ್ತೀರಲ್ಲವೇ? ಎಂದಾದರೂ ನುಗ್ಗೆಕಾಯಿ ಉಪ್ಪಿನಕಾಯಿ (Drumstick Pickle) ಸವಿದಿದ್ದೀರಾ? ಈಗಂತೂ ನುಗ್ಗೆಕಾಯಿ ಸೀಸನ್‌. ಈ ಸೀಸನ್‌ನಲ್ಲಿ ಒಮ್ಮೆ ಟ್ರೈ ಮಾಡಿ. ಹಾಗಾದರೆ, ಈ ನುಗ್ಗೆಕಾಯಿ ಉಪ್ಪಿನಕಾಯಿ ಮಾಡುವುದಾದರೂ ಹೇಗೆ?

ನುಗ್ಗೆಕಾಯಿ ಪೋಷಕಾಂಶಗಳ ಆಗರ. ಇದು ಝಿಂಕ್‌, ಕ್ಯಾಲ್ಸಿಯಂ, ವಿಟಾಮಿನ್‌ ಎ, ಬಿ1, ಬಿ2, ಬಿ3, ಮ್ಯಾಗ್ನೆಸಿಯಂ, ಪೊಟ್ಯಾಸಿಯಂ, ಫೊಲೇಟ್, ಐರನ್‌, ಫಾಸ್ಪರಸ್‌ ಹೀಗೆ ಮುಂತಾದ ಖನಿಜಾಂಶಗಳನ್ನು ಹೊಂದಿದೆ. ಅಧಿಕ ರಕ್ತದೊತ್ತಡ, ಮಧುಮೇಹಗಳನ್ನು ತಡೆಯಲು ಸಹಾಯಮಾಡುತ್ತದೆ. ಬರೀ ನುಗ್ಗೆ ಕಾಯಿಯನ್ನಷ್ಟೇ ಅಲ್ಲ, ಅದರ ಎಲೆ, ಹೂವು ಸಹ ಬಹಳ ಪ್ರಯೋಜನಕಾರಿ. ಎಲೆಯಿಂದ ಪಲ್ಯ, ಸಾಂಬಾರು, ಪಕೋಡಾಗಳನ್ನೂ ಮಾಡುತ್ತಾರೆ.

ಎಳೆಯ ನುಗ್ಗೆಕಾಯಿ ಉಪಯೋಗಿಸಿ ಮಾಡಿದ ಉಪ್ಪಿನಕಾಯಿಯಂತೂ (Drumstick Pickle) ಊಟದ ರುಚಿ ಖಂಡಿತವಾಗಿಯೂ ಹೆಚ್ಚಿಸಬಲ್ಲದು. ಹಾಗಾದರೆ, ನುಗ್ಗೆಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳಾವವು ಎಂದು ತಿಳಿಯೋಣ ಬನ್ನಿ.

ನುಗ್ಗೆಕಾಯಿ ಉಪ್ಪಿನಕಾಯಿಯನ್ನು (Drumstick Pickle) ಹಲವು ವಿಧಾನಗಳಿಂದ ತಯಾರಿಸುತ್ತಾರೆ. ಆದರೆ ನಾವು ನಿಮಗೆ ಸರಳ ವಿಧಾನ ಹೇಳುತ್ತೇವೆ.

ನುಗ್ಗೆಕಾಯಿ ಉಪ್ಪಿನಕಾಯಿ (Drumstick Pickle) ಮಾಡಲು ಬೇಕಾಗುವ ಪದಾರ್ಥಗಳು :

ಎಳೆಯ ನುಗ್ಗಿಕಾಯಿ 6 ರಿಂದ 8
ಅಚ್ಚಖಾರದ ಪುಡಿ 5 ರಿಂದ 6 ಚಮಚ
ಅರಿಶಿಣ ಪುಡಿ 1–ಚಮಚ
ಸಾಸಿವೆ ಪುಡಿ 1–ಚಮಚ
ಮೆಂತ್ಯ ಮತ್ತು ಜೀರಿಗೆ 1– ಚಮಚ
ಹಿಂಗು 1/4 –ಚಮಚ
ಹುಣಸೆಹಣ್ಣಿನ ಪೇಸ್ಟ್‌ 2 ಚಮಚ
ಉಪ್ಪು –5 ರಿಂದ 6 ಚಮಚ
ಅಡುಗೆ ಎಣ್ಣೆ(ಸಾಸಿವೆ ಎಣ್ಣೆ ಉತ್ತಮ) ಒಂದು ಬಟ್ಟಲು
ಸಾಸಿವೆ 1 ಚಮಚ
ಕಡ್ಲೆ ಬೇಳೆ , ಉದ್ದಿನ ಬೇಳೆ 1– ಚಮಚ

ಇದನ್ನೂ ಓದಿ: Skin Care : ವಯಸ್ಸಾದಂತೆ ಚರ್ಮದ ಕಾಂತಿ ಕಡಿಮೆಯಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆಯೇ? ಚಿಂತಸಬೇಡಿ ಅದಕ್ಕೆ ಪರಿಹಾರ ಆಯುರ್ವೇದದಲ್ಲಿದೆ

Drumstick Pickle ಮಾಡುವ ವಿಧಾನ:

  • ಎಳೆಯ ನುಗ್ಗೆಕಾಯಿ ತೊಳೆದು ನೀರಿನ ಪಸೆ ಆರುವಂತೆ ಬಟ್ಟೆಯಿಂದ ಒರೆಸಿ. ನಂತರ ಅದರ ಮೇಲಿನ ಸಿಪ್ಪೆ(ನಾರು) ತೆಗೆಯಿರಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಅರ್ಧ ಗಂಟೆ ಬಿಡಿ.
  • ಒಂದು ಕಡಾಯಿಯಲ್ಲಿ 4 ರಿಂದ 5 ಚಮಚ ಎಣ್ಣೆ ಕಾಯಿಸಿ ಅದಕ್ಕೆ ನುಗ್ಗೆಕಾಯಿ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ.
  • ನುಗ್ಗೆಕಾಯಿಗಳನ್ನು ಬೇರೆ ಬಟ್ಟಲಿಗೆ ಹಾಕಿಟ್ಟುಕೊಳ್ಳಿ.
  • ಅದೇ ಕಡಾಯಿಯಲ್ಲಿ ಮತ್ತೆ ಸ್ವಲ್ಪ ಎಣ್ಣೆ ಸೇರಿಸಿ. ಅದಕ್ಕೆ ಸಾಸಿವೆ, ಹಿಂಗು, ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಹುರಿಯಿರಿ.
  • ಕಡಿಮೆ ಉರಿ ಮಾಡಿ, ಅಚ್ಚಖಾರದ ಪುಡಿ, ಅರಿಶಿಣ ಪುಡಿ, ಸಾಸಿವೆ ಪುಡಿ, ಮೆಂತ್ಯ –ಜೀರಿಗೆ ಪುಡಿ, ಹುಣಸೆ ಹಣ್ಣಿನ ಪೇಸ್ಟ್‌, ಉಪ್ಪು ಸೇರಿಸಿ. ಅದಕ್ಕೆ ಉಳಿದ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.
  • ನಂತರ ಹುರಿದಿಟ್ಟುಕೊಂಡ ನುಗ್ಗೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.
  • ಒಂದೆರಡು ದಿನ ಹಾಗೆ ಮುಚ್ಚಿಡಿ.
  • ನಂತರ ನುಗ್ಗೆಕಾಯಿ ಉಪ್ಪಿನಕಾಯಿಯನ್ನು ಊಟದಲ್ಲಿ ಉಪಯೋಗಿಸಿ.

ಬಾಯಿಯಲ್ಲಿ ನೀರೂರಿಸುವ ನುಗ್ಗೆಕಾಯಿ ಉಪ್ಪಿನಕಾಯಿಯನ್ನು ನೀವೂ ಟ್ರೈ ಮಾಡಿ ನೋಡಿ.

ಇದನ್ನೂ ಓದಿ: Benefits of Sweet Potatoes : ಗೆಣಸಿನ ಸೇವನೆಯಿಂದ ನಿಮ್ಮ ದೇಹಕ್ಕೆ ಸಿಗಲಿದೆ ಇಷ್ಟೆಲ್ಲ ಲಾಭ..!

(Drumstick Pickle How to make a drumstick pickle try this aromatic pickle)

Comments are closed.