ಸೋಮವಾರ, ಏಪ್ರಿಲ್ 28, 2025
HomeCorona Updatesಕೊರೊನಾ ಲಸಿಕೆ ಪಡೆದುಕೊಂಡಿದ್ದ ನರ್ಸ್ ಸಾವು

ಕೊರೊನಾ ಲಸಿಕೆ ಪಡೆದುಕೊಂಡಿದ್ದ ನರ್ಸ್ ಸಾವು

- Advertisement -

ಪೋರ್ಚುಗಲ್ : ಕೊರೊನಾ ಲಸಿಕೆಯ ಅಭಿವೃದ್ದಿಗಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಶ್ರಮಿಸುತ್ತಿವೆ. ಇನ್ನೊಂದೆಡೆ ಲಸಿಕೆಯ ವಿಚಾರದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ಕೊರೊನಾ ಲಸಿಕೆ ಪಡೆದುಕೊಂಡಿದ್ದ ನರ್ಸ್ ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪೋರ್ಚುಗಲ್ ನಲ್ಲಿ ಘಟನೆ ನಡೆದಿದ್ದು, ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಮಕ್ಕಳ ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದ ಸೋನಿಯಾ ಅಜೆವೆಡೊ(41 ವರ್ಷ) ಎಂಬ ಮಹಿಳೆಯೇ ಸಾವನ್ನಪ್ಪಿದವರು.. ಫೈಝರ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಯ ಭಾಗವಾಗಿ ಆಕೆ ಲಸಿಕೆಯನ್ನು ತೆಗೆದುಕೊಂಡಿದ್ದು, ಎರಡು ದಿನಗಳ ನಂತರ ಆಕೆ ತೀರಿಕೊಂಡಿದ್ದಾರೆ.

ನರ್ಸ್ ಸೋನಿಯಾ ಅಜೆವೆಡೊ ಸಾವಿನ ಬೆನ್ನಲ್ಲೇ ಕೊರೊನಾ ಲಸಿಕೆಯ ವಿಚಾರದಲ್ಲಿ ಜಗತ್ತಿನಾದ್ಯಂತ ತೀವ್ರ ಚರ್ಚೆಗಳು ಶುರುವಾಗಿದೆ. ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಮತ್ತಷ್ಟು ಅನುಮಾನ, ಆತಂಕಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲದೇ ಸೋನಿಯಾ ತಂದೆ ಅಬಿಲಿಯೊ ಅಜೆವೆಡೊ ಕೂಡ ಕೊರೊನಾ ಲಸಿಕೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎರಡು ದಿನಗಳ ಹಿಂದೆ ಆಕೆ ಕೊರೋನಾ ವೈರಸ್ ಲಸಿಕೆ ತೆಗೆದುಕೊಂಡಿದ್ದಳು. ಆದರೆ ಆಕೆಗೆ ಕೊರೋನಾ ಸೋಂಕಿನ ಲಕ್ಷಣಗಳಿರಲಿಲ್ಲ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರಲಿಲ್ಲ, ಆದರೆ ಲಸಿಕೆ ಹಾಕಿಸಿಕೊಂಡ ಎರಡು ದಿನಗಳಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟಿದ್ದಾಳೆ. ನನ್ನ ಮಗಳು ಏಕೆ ಮೃತಪಟ್ಟಳು ಎಂಬುದು ಗೊತ್ತಾಗಬೇಕಿದೆ. ಅಷ್ಟು ಮಾತ್ರವಲ್ಲದೆ, ‘ ಸೋನಿಯಾ ಮದ್ಯದ ಚಟಕ್ಕೆ ಒಳಗಾಗಲಿಲ್ಲ ಮತ್ತು ಯಾವುದೇ ಹೊಸ ಆಹಾರ ತೆಗೆದುಕೊಂಡಿರಲಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ.

ನರ್ಸ್ ಸೋನಿಯಾ ಸಾವಿನ ಕುರಿತು ಕಾರಣ ಪತ್ತೆ ಹಚ್ಚಲು ಪೋರ್ಚುಗೀಸ್ ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದುವರೆಗೆ ಪೋರ್ಚುಗಲ್‌ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಝರ್ ಲಸಿಕೆ ನೀಡಲಾಗಿದೆ. ಅಲ್ಲದೇ ಹತ್ತು ದಶಲಕ್ಷ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ನಲ್ಲಿ 4,27,000 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 7,118 ಮಂದಿ ಸಾವನ್ನಪ್ಪಿದ್ದಾರೆ.

ಯಾವುದೇ ಲಸಿಕೆಯನ್ನು ಪರಿಣಾಮಕಾರಿಯ ಅಭಿವೃದ್ದಿ ಪಡಿಸಲು ಎರಡರಿಂದ ಮೂರು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಕೊರೊನಾ ಲಸಿಕೆಯ ವಿಚಾರದಲ್ಲಿ ಸರಕಾರಗಳು ನಿಬಂಧನೆಗಳನ್ನು ಸಡಿಲಿಸಿ, ಲಸಿಕೆ ಬಳಕೆಗೆ ಸಮರೋಪಾದಿಯಲ್ಲಿ ಅನುಮತಿಯನ್ನು ನೀಡುತ್ತಿವೆ. ಇದೀಗ ವಿಶ್ವಾದ್ಯಂತ ಒಟ್ಟು 3 ಲಸಿಕೆಗಳನ್ನು ತುರ್ತು ಬಳಕೆಗೆ ಅನುಮೋದನೆಯನ್ನು ನೀಡಲಾಗಿದೆ.

ಭಾರತದಲ್ಲಿ ಭಾರತ್ ಬಯೋಟೆಕ್ ಕೊರೋನಾ ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ ನೀಡಿದೆ. ಆದರೆ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಸಂದೇಹಗಳಿವೆ. ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುವಂತಹ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular