ಇಸ್ರೇಲ್ : ಕೊರೊನಾ ಮಾಹಾಮಾರಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬೆನ್ನುಬಿಡದೇ ಕಾಡುತ್ತಿದೆ. ಹೀಗಾಗಿ ಎಲ್ಲ ದೇಶಗಳು ಶಕ್ತಿ ಮೀರಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿವೆ. ಈ ಹೋರಾಟದಲ್ಲಿ ಸದ್ಯ ಇಸ್ರೇಲ್ ಮುಂದಿದೆ. ಹಲವು ಮುಂದುವರಿದ ರಾಷ್ಟ್ರಗಳೇ ಮುಂಜಾಗ್ರತಾ ಕ್ರಮ ಜರುಗಿಸಲು ವಿಫಲವಾಗಿದ್ದವು. ಆದರೆ, ಈ ರಾಷ್ಟ್ರ ಕೊರೊನಾ ಲಸಿಕೆಯ ನಾಲ್ಕನೇ ಡೋಸ್ ಬಗ್ಗೆ ಮಾತನಾಡುತ್ತಿದೆ.
ಇಸ್ರೇಲ್ ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ, ಕೊರೊನಾ ಲಸಿಕೆಯ ನಾಲ್ಕನೇ ಡೋಸ್ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯದ ಮಾಹಿತಿ ಯಂತೆ ಇಸ್ರೇಲ್ ತನ್ನ ಎಲ್ಲ ನಾಗರಿಕರಿಗೆ ಕೊರೊನಾ ವೈರಸ್ ನ ಬೂಸ್ಟರ್ ಶಾಟ್ ಗಳನ್ನು ನೀಡಲು ಆರಂಭಿಸಿದೆ. ಎಲ್ಲಾ ಇನ್ನಿತರ ದೇಶಗಳು ದುರ್ಬಲ ಜನರಿಗೆ ಲಸಿಕೆ ಹಾಕುವವರೆಗೆ ಬೂಸ್ಟರ್ ಕಾರ್ಯಕ್ರಮ ಆರಂಭಿಸುವುದು ಬೇಡ ಎಂದು ಡಬ್ಲ್ಯೂಎಚ್ ಓ ಮನವಿ ಮಾಡಿದೆ.
ಇದನ್ನೂ ಓದಿ: 2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ
ಈ ಕುರಿತು ಮಾತನಾಡಿದ ಇಸ್ರೇಲ್ ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ, ಕೊರೊನಾ ಹಲವು ರೂಪಾಂತರ ಗಳಲ್ಲಿ ಹೊರ ಬರುತ್ತಿದೆ. ಡೆಲ್ಟಾ ರೂಪಾಂತರ ಪ್ರಕರಣ ಗಳು ವೇಗವಾಗಿ ಹೆಚ್ಚುತ್ತಿವೆ. ಹಚ್ಚಿನ ಸಾವಿಗೆ ಇದು ಕಾರಣ ವಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ನಾಲ್ಕನೇ ಡೋಸ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೂಸ್ಟರ್ ಶಾಟ್ ಗಳು ಕೊರೊನಾ ರೂಪಾಂತರಿ ಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಸದ್ಯ ಎಲ್ಲೆಡೆ ಡೆಲ್ಟಾ ರೂಪಾಂತರ ಹಾವಳಿ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಬೂಸ್ಟರ್ ಶಾಟ್ ಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕೊರೊನಾ ನಾಲ್ಕನೇ ಅಲೆಯಿಂದ ತಪ್ಪಿಸಿಕೊಳ್ಳಲು ಕನಿಷ್ಠ 6 ತಿಂಗಳ ಅಥವಾ ಒಂದು ವರ್ಷದಲ್ಲಿ ಬೂಸ್ಟರ್ ಶಾಟ್ ಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
(4th dose of corona vaccine inevitable: Do you know what the Advice of Israeli experts is?)