ಕುಂದಾಪುರ : ಭಾರೀ ಗಾಳಿ ಮಳೆಗೆ ಮಗುಚಿದ ದೋಣಿಗಳು : ಆರು ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ : ಭಾರೀ ಗಾಳಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ಎರಡು ದೋಣಿಗಳು ಮಗುಚಿ ಬಿದ್ದು ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಕಂಚುಗೋಡು ಬಳಿಯಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಕಂಚುಗೋಡು ಬಳಿಯಲ್ಲಿ ರಾಮ ಖಾರ್ವಿ ಅವರಿಗೆ ಸೇರಿದ ಓಂಕಾರ ಪ್ರಸನ್ನ ದೋಣಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆಯಲ್ಲಿ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಕಂಚುಗೋಡು ನಿವಾಸಿಗಳಾದ ರಾಮ ಖಾರ್ವಿ, ನಾಗರಾಜ ಖಾರ್ವಿ, ವಿನಯ ಖಾರ್ವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿ ಸಂಪೂರ್ಣವಾಗಿ ಮುಳುಗಡೆ ಯಾಗಿದ್ದು, ದೋಣಿಯಲ್ಲಿದ್ದ ಇಂಜಿನ್‌, ಬಲೆ ಸಂಪೂರ್ಣವಾಗಿ ಸಮುದ್ರ ಪಾಲಾಗಿದೆ ಎಂದು ದೂರು ನೀಡಿದ್ದಾರೆ.

ತ್ರಾಸಿಯ ಹೊಸಪೇಟೆಯ ಸಮೀಪದಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ನಾಗ ಖಾರ್ವಿ ಅವರಿಗೆ ಸೇರಿದ ಯಕ್ಷೇಶ್ವರಿ ದೋಣಿ ದುರಂತ ಸಂಭವಿಸಿದ್ದು, ದೋಣಿಯಲ್ಲಿದ್ದ ನಾಗ ಖಾರ್ವಿ, ನಿತ್ಯಾನಂತ ಖಾರ್ವಿ, ರೋಶನ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ದೋಣಿ ಸೇರಿದಂತೆ ದೋಣಿಯಲ್ಲಿದ್ದ ಎಲ್ಲಾ ಪರಿಕರಗಳು ನೀರುಪಾಲಾಗಿದೆ.

ಇದನ್ನೂ ಓದಿ : ಮಾದಕ ವಸ್ತು ಸೇವಿಸಿ ಸೌಮ್ಯ ಕೊಲೆ : ಸಂದೇಶ್‌ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ : ಕೊರೊನಾ ಲಸಿಕೆಯ 4ನೇ ಡೋಸ್ ಅನಿವಾರ್ಯ : ಇಸ್ರೇಲ್ ತಜ್ಞರು ಕೊಟ್ಟ ಸಲಹೆ ಏನು ಗೊತ್ತಾ ?

( Kundapur: Boats tragedy heavy winds: Save of six fishermen )

Comments are closed.