ಕರ್ನಾಟಕಕ್ಕೆ ಕೊರೊನಾ ನಾಲ್ಕನೇ ಅಲೆ ಭೀತಿ : ಸಚಿವ ಸುಧಾಕರ್‌

ಬೆಂಗಳೂರು : ವಿಶ್ವದ ಎಂಟು ರಾಷ್ಟ್ರಗಳಲ್ಲಿ ಕೊರೊನಾ ಹೊಸ ಅಲೆಯ ಸೋಂಕು (XE Covid -19 variant) ವೇಗವಾಗಿ ಹರಡುತ್ತಿದೆ. ಹೀಗಾಗಿ ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಯಾವುದೇ ನಿರ್ಲಕ್ಷ್ಯ, ಉದಾಸೀನತೆ ಬೇಡ. ಜನರು ಮಾಸ್ಕ್‌ ಮರೆತಿದ್ದಾರೆ. ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕೋರಿಯಾ, ಹಾಕಾಂಗ್‌, ಬ್ರಿಟನ್‌, ಜರ್ಮನಿ, ಚೀನಾ ಸೇರಿದಂತೆ ವಿಶ್ವದ ಎಂಟು ರಾಷ್ಟ್ರಗಳಲ್ಲಿ ಕೊರೊನಾ ಹೊಸ ಅಲೆಯ ಆರ್ಭಟ ಜೋರಾಗಿದೆ. ಹೀಗಾಗಿ ಇಂತಹ ದೇಶಗಳಿಂದ ಬರುವ ಜನರ ಮೇಲೆ ನಿಗಾ ಇರಿಸಲಾಗುತ್ತಿದೆ. ಅಲ್ಲದೇ ಶೀಘ್ರದಲ್ಲಿಯೇ ಕೊರೊನಾ ವೈರಸ್‌ ಸೋಂಕು ಹೆಚ್ಚಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದಿದ್ದಾರೆ.

ಕೊರೊನಾ ನಾಲ್ಕನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಏರ್‌ಪೋರ್ಟ್‌ಗಳಲ್ಲಿಯೇ ಪ್ರಯಾಣಿಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಐಐಟಿ ತಜ್ಞರ ವರದಿಯ ಪ್ರಕಾರ ಜೂನ್‌ ಹಾಗೂ ಜುಲೈನಲ್ಲಿ ಕೊರೊನಾ ನಾಲ್ಕನೇ ಅಲೆ ಉತ್ತುಂಗಕ್ಕೆ ಹೋಗುವ ಸಾಧ್ಯತೆಯಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ಕೊರೊನಾ ಹೊಸ ಅಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ ಎಂದಿದ್ದಾರೆ.

ರಾಜ್ಯದಲ್ಲಿ ಜನರು ಮಾಸ್ಕ್‌ ಹಾಕುವುದನ್ನು ಮರೆತಿದ್ದಾರೆ. ಈಗಾಗಲೇ 2 ಹಾಗೂ ೩ನೇ ಡೋಸ್‌ ಬಾಕಿ ಇರುವವರು ಕೂಡಲೇ ಹಾಕಿಸಿಕೊಳ್ಳಿ. ಬೂಸ್ಟರ್‌ ಡೋಸ್‌ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ದೆಹಲಿ, ಹರ್ಯಾಣದಲ್ಲಿಯೂ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದ್ದು, ಜನರು ಮಾಸ್ಕ್‌ ಮರೆತಿದ್ದಾರೆ. ಆದರೆ ಜನರು ಈ ಹಿಂದಿನಂತೆಯೇ ಮಾಸ್ಕ್‌ ಧರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ : ಕೋವಿಶೀಲ್ಡ್​, ಕೋವ್ಯಾಕ್ಸಿನ್ ಬೂಸ್ಟರ್​ ಡೋಸ್​ಗಳ ದರ ಇಳಿಕೆ

ಇದನ್ನೂ ಓದಿ : ಅಗಸ್ಟ್‌ನಲ್ಲಿ ಭಾರತದಲ್ಲಿ ಕೊರೊನಾ 4ನೇ ಅಲೆ ಸ್ಟೋಟ : ಐಐಟಿ ತಜ್ಞರ ಎಚ್ಚರಿಕೆ

XE Covid -19 variant effect fourth wave of fear for Karnataka: Minister Sudhakar

Comments are closed.