- Advertisement -
ಪುತ್ತೂರು : ಅಕ್ರಮವಾಗಿ ಇರಿಸಲಾಗಿದ್ದ ಸ್ಪೋಟಕ ಸಿಡಿದು ಹಸುವಿನ ದವಡೆ ಒಡೆದು ಹೋಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೇರಾಜೆಯ ಸಂಪಡ್ಕದಲ್ಲಿ ನಡೆದಿದೆ. ಸಂಪಡ್ಕ ನಿವಾಸಿಯಾಗಿರೋ ಬಾಲಚಂದ್ರ ಎಂಬವರಿಗೆ ಸೇರಿದ ಹಸುವಾಗಿದೆ.

ಕಿಡಿಗೇಡಿಗಳು ಸ್ಪೋಟಕವನ್ನು ಇರಿಸಿದ್ದು ಹಸು ಸ್ಪೋಟಕವನ್ನು ಬಾಯಿಯಲ್ಲಿ ಕಚ್ಚುತ್ತಿದ್ದಂತೆಯೇ ಸ್ಫೋಟಗೊಂಡು ದವಡೆ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.