ಮಾರ್ಚ್ 3 ರಂದು ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ

0

ನವದೆಹಲಿ : ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಹೊಸದಾಗಿ ಡೆತ್ ವಾರೆಂಟ್ ಜಾರಿ ಮಾಡಿದೆ. ನಾಲ್ವರೂ ಆರೋಪಿಗಳು ಮಾರ್ಚ್ 3 ರಂದು ಮುಂಜಾನೆ 6 ಗಂಟೆಗೆ ನೇಣಿಗೆ ಕೊರಳೊಡ್ಡಲಿದ್ದಾರೆ.
ಪವನ್ ಗುಪ್ತಾ, ವಿನಯ್ ಶರ್ಮಾ, ಮುಕೇಶ್ ಸಿಂಗ್, ಅಕ್ಷಯ್ ಕುಮಾರ್ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಾಗಿದ್ದಾರೆ. ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಎರಡು ಮುಂದೂಡಿಕೆಯಾಗಿತ್ತು. ದೆಹಲಿ ನ್ಯಾಯಲಯ ಜನವರಿ 17ರಂದು ಅಪರಾಧಿಗಳನ್ನು ಫೆ.1 ರಂದು ಗಲ್ಲಿಗೇರಿಸುವಂತೆ ಆದೇಶಿಸಿತ್ತು. ಆದರೆ ಜನವರಿ 31ರಂದು ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಇಂದು ವಿಚಾರಣೆ ನಡೆಸಿರೊ ಪಟಿಯಾಲಾ ನ್ಯಾಯಾಲಯ ಅಪರಾಧಿಗಳಿಗೆ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ ಎಂದು ಹೇಳಿದೆ. ಮಾತ್ರವಲ್ಲ ಮಾರ್ಚ್ 3 ರಂದು ಗಲ್ಲಿಗೇರಿಸುವಂತೆ ಡೆತ್ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

Leave A Reply

Your email address will not be published.