ಚಿತ್ರದುರ್ಗ : ಚಿಕಿತ್ಸೆಗೆ ಹಣವಿಲ್ಲವೆಂದು ಬಾಲಕಿಯನ್ನ ಆಸ್ಪತ್ರೆಯಿಂದ ಹೊರಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದ ಬಾಲಕಿ ಅರ್ಚನಾಳನ್ನ ಚಳ್ಳಕೆರೆ ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೈಫಾಯಿಡ್ ನಿಯಂತ್ರಣಕ್ಕೆ ವೈದ್ಯರು ಗ್ಲೂಕೋಸ್ ಹಾಕಿ ಒಂದೇ ದಿನಕ್ಕೆ 3 ಸಾವಿರ ಬಿಲ್ ಪಾವತಿಸುವಂತೆ ಸೂಚಿಸಿದ್ದಾರೆ. ಅಷ್ಟು ಹಣ ಇಲ್ಲದಕ್ಕೆ ಗ್ಲೂಕೋಸ್ ಬಾಟಲಿ ಸಮೇತ ಆಸ್ಪತ್ರೆಯಿಂದ ಹೊರ ಹಾಕಿದ್ದಾರೆ.

ಕೈಯಲ್ಲಿ ಡ್ರಿಪ್ ಬಾಟಲ್ ಹಿಡಿದು ಬಾಲಕಿ ವಾಪಸ್ ಊರಿಗೆ ಹೊರಟಿದ್ದಾಳೆ. ಚಳ್ಳಕೆರೆ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನ ಕಂಡ ಸಾರ್ವಜನಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.