ಅಂಡರ್ 19 ವಿಶ್ವಕಪ್ : ಜೆಸ್ವಾಲ್ ಭರ್ಜರಿ ಶತಕ, ಪಾಕ್ ಮಣಿಸಿ ಫೈನಲ್ ಪ್ರವೇಶಿಸಿದ ಕಿರಿಯರು

0

ಪೊಷೆಫ್ ಸ್ಟ್ರೂಮ್ : ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಭಾರತ ಕಿರಿಯರ ತಂಡದ ಭರವಸೆಯ ಆಟಗಾರ ಯಶಸ್ವಿ ಜೆಸ್ವಾಲ್ ಭರ್ಜರಿ ಶತಕದಿಂದ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಬದ್ದವೈರಿ ಪಾಕಿಸ್ತಾವನ್ನು ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಸುಶಾಂತ್ ಮಿಶ್ರಾ ಹಾಗೂ ರವಿ ಬಿಶ್ನೋಯಿ ಆರಂಭ ಆಘಾತ ನೀಡಿದ್ರು. ಆರಂಭಿಕ ಮೊಹಮ್ಮದ್ ಹಾಗೂ ಫಹಾದ್ ಮುನಿರ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ನಂತರ ಹೈದರ್ ಆಲಿಗೆ ಜೊತೆಯಾದ ನಾಯಕ ನಝೀರ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಹೈದರ್ ಆಲಿ 56 ರನ್ ಗಳಿಸಿದ್ರೆ, ರೋಹಿಲ್ ನಝೀರ್ 62 ರನ್ ಗಳಿಸಿದ್ರು. ನಂತರ ಭಾರತೀಯ ಬೌಲರ್ ಗಳು ಪಾಕಿಸ್ತಾನ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದರು. ಹೀಗಾಗಿ ಪಾಕಿಸ್ತಾನ ತಂಡ 43.1 ಓವರ್ ಗಳಲ್ಲಿ 10 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಗಿತ್ತು. ಸುಶಾಂತ್ ಮಿಶ್ರಾ 3, ಕಾರ್ತಿಕ್ ತ್ಯಾಗಿ 2, ರವಿ ಬಿಶ್ನೋಯಿ 2 ಹಾಗೂ ಅಥರ್ವ ಅಂಕೋಲೆಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ 1 ವಿಕೆಟ್ ಪಡೆದುಕೊಂಡ್ರು.

ಪಾಕಿಸ್ತಾನ ನೀಡಿದ್ದ 172 ರನ್ ಬೆನ್ನತ್ತಿದ ಭಾರತಕ್ಕೆ ಯಶಸ್ವಿ ಜೇಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಭರ್ಜರಿ ಆರಂಭವೊದಗಿಸಿದ್ರು. ಪಾಕಿಸ್ತಾನದ ಬೌಲರ್ ಗಳನ್ನು ಮನಸೋ ಇಚ್ಚೆ ದಂಡಿಸಿದ ಜೇಸ್ವಾಲ್ 113 ಬೌಲ್ ಗಳನ್ನು ಎದುರಿಸಿ 105 ರನ್ ಗಳಿಸಿದ್ರೆ, ಸಕ್ಸೇನಾ 99 ಎಸೆತಗಳಲ್ಲಿ 59 ರನ್ ಗಳಿಸಿದ್ರು.

35.2 ಓವರ್ ಗಳಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ ಭಾರತ 176 ರನ್ ಗಳಿಸೋ ಮೂಲಕ ಗೆಲುವಿನ ನಗೆ ಬೀರಿದೆ. ಒಟ್ಟು ನಾಲ್ಕನೇ ಬಾರಿ ವಿಶ್ವಕಪ್ ಗೆದ್ದಿರೋ ಭಾರತ ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದೆ, ಅಲ್ಲದೇ ಸತತ ಎರಡನೇ ಬಾರಿಗೆ ಭಾರತ ಫೈನಲ್ ಪ್ರವೇಶಿಸಿದೆ.

Leave A Reply

Your email address will not be published.