ಬುಧವಾರ, ಜೂನ್ 18, 2025
HomeCrimeStudent Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Student Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -

ಹೈದ್ರಾಬಾದ್‌ : ಇಬ್ಬರು ಅಪ್ತಾಪ್ತ ಬಾಲಕರು ಸೇರಿದಂತೆ ಐವರು ವ್ಯಕ್ತಿಗಳು ಸೇರಿಕೊಂಡು 10 ನೇ ತರಗತಿ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ (Student Gang Rape) ಎಸಗಿ, ನಂತರ ವಿಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೈದ್ರಾಬಾದ್‌ನ ಖಾರ್ಖಾನಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಬಾಲಕಿಯನ್ನು ಬೆದರಿಸಿ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿ 10 ನೇ ತರಗತಿಯಲ್ಲಿ ಓದುತ್ತಿದ್ದಳು. ತನ್ನದೇ ತರಗತಿಯ ವಿದ್ಯಾರ್ಥಿಯ ಜೊತೆಗೆ ಸ್ನೇಹ ಉಂಟಾಗಿತ್ತು. ನಂತರ ಬಾಲಕಿಯನ್ನು ಪುಸಲಾಯಿಸಿದ ಬಾಲಕ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ.

10th class student Gang Rape in Hyderabad

ತಾವು ಏಕಾಂತವಾಗಿರುವ ವೇಳೆಯಲ್ಲಿ ಪೋಟೋ ಹಾಗೂ ವಿಡಿಯೋವನ್ನು ಚಿತ್ರೀಕರಿಸಿಕೊಂಡು ನಂತರದಲ್ಲಿ ಬಾಲಕಿಗೆ ನಿರಂತರವಾಗಿ ಬೆದರಿಕೆಯೊಡ್ಡುವುದಕ್ಕೆ ಆರಂಭಿಸಿದ್ದಾನೆ. ಅಲ್ಲದೇ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ.

10th class student Gang Rape in Hyderabad

ಬಾಲಕಿ ಕೊನೆಗೂ ನಡೆದ ವಿಚಾರವನ್ನು ತನ್ನ ಪೋಷಕರ ಬಳಿಯಲ್ಲಿ ಹೇಳಿಕೊಂಡಿದ್ದಾಳೆ. ಖಾರ್ಖಾನಾ ಠಾಣೆಯ ಪೊಲೀಸರು ಬಾಲಕಿಯ ತಂಡ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ವನಸ್ಥಲಿಪುರಂ ಮತ್ತು ಎಲ್ಬಿನಗರ ಪ್ರದೇಶದ ಇಬ್ಬರು ಅಪ್ರಾಪ್ತ ಬಾಲಕರು ಮತ್ತು ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ

ಭವಿಷ್ಯದ ಪ್ರಜೆಗಳನ್ನು ರೂಪಿಸುವಂತಹ ದೊಡ್ಡ ಮಟ್ಟದ ಜವಾಬ್ದಾರಿಯು ಶಿಕ್ಷಕರ ಮೇಲಿರುತ್ತದೆ. ಶಾಲೆಗೆ ಬರುವ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬೋಧನೆಯನ್ನು ಮಾಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಮಾರ್ಗವನ್ನು ತೋರಿಸುವ ಕಾರ್ಯ ಶಿಕ್ಷಕರದ್ದಾಗಿರುತ್ತದೆ. ಆದರೆ ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಮಕ್ಕಳ ಎದುರಲ್ಲೇ ಗಡ್ಡದಾಗಿ ನಿದ್ದೆ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ, ಈ ವಿಡಿಯೋವನ್ನು ಬಿಹಾರದ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಶಿಕ್ಷಕಿಯು ತನ್ನ ಕುರ್ಚಿಯ ಮೇಲೆ ಆರಾಮಾಗಿ ಕುಳಿತು ಗಾಢ ನಿದ್ದೆ ಮಾಡುತ್ತಿದ್ದರೆ ಶಾಲಾ ವಿದ್ಯಾರ್ಥಿನಿ ಯೋರ್ವಳು ಬೀಸಣಿಕೆಯಲ್ಲಿ ಮಲಗಿದ್ದ ಶಿಕ್ಷಕಿಗೆ ಗಾಳಿ ಬೀಸುತ್ತಿದ್ದಾಳೆ. ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಸುಮ್ಮನೇ ಕುಳಿತಿರುವುದನ್ನು ಕಾಣಬಹುದಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಿ ಪುರೈನಾ ಗ್ರಾಮದ ಕತರ್ವಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಕೆಲಸದ ಸ್ಥಳದಲ್ಲಿ ನಿದ್ದೆ ಮಾಡಿರುವ ಶಿಕ್ಷಕಿಯ ವರ್ತನೆಗೆ ಹಿಡಿಶಾಪ ಹಾಕಿದ್ದಾರೆ. ಇಂತಹ ಶಿಕ್ಷಕಿಯನ್ನು ಅಮಾನತು ಗೊಳಿಸಬೇಕೆಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆಯು ಎಂದಿಗೂ ಸುಧಾರಿಸುವುದಿಲ್ಲ ಎಂದು ತೋರುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ .

ಇದನ್ನೂ ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

ಇದನ್ನೂ ಓದಿ : kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

10th class student Gang Rape in Hyderabad

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular