Chikoo health benefits: ಚಿಕ್ಕದಾದರೂ ಚಿಕ್ಕು ಹಣ್ಣಿನ ಆರೋಗ್ಯ ಗುಣಗಳು ಅಪಾರ; ಚಿಕ್ಕು ಹಣ್ಣಿನ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ನೀವೂ ಅಚ್ಚರಿಪಡ್ತಿರಾ!

ಉತ್ತಮ ಆರೋಗ್ಯಕ್ಕಾಗಿ ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು(seasonal fruits and vegetables) ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಭಾರತದಲ್ಲಿ ಪ್ರತಿಯೊಂದು ಹಣ್ಣುಗಳೂ ವಿಭಿನ್ನ ಕಾಲಮಂಗಳಲ್ಲಿ ಬೆಳೆಯುತ್ತವೆ.ಈ ಹಣ್ಣುಗಳು ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯದ ವಿಷಯಗಳಲ್ಲೂ ಪ್ರಸಿದ್ಧಿ ಪಡೆದಿವೆ.ಅದು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುತ್ತದೆ. ಅಂತೆಯೇ, ಆರೋಗ್ಯಕರ ಮತ್ತು ಹೈಡ್ರೇಟೆಡ್ ಆಗಿ ಉಳಿಯಲು ಇದು ಸಹಾಯ ಮಾಡುತ್ತದೆ. ಅಂತಹ ಸೀಸನಲ್ ಹಣ್ಣುಗಳಲ್ಲಿ ಚಿಕ್ಕು ಹಣ್ಣು(chikoo) ಸಹ ಒಂದು. ಇದು ಆಕಾರ ಹಾಗು ವಿಶಿಷ್ಟ ಸುವಾಸನೆಯಿಂದ ಹೆಸರುವಾಸಿ ಆಗಿದೆ (chikoo health benefits ).

‘ಸಪೋಡಿಲ್ಲಾ’ ಅಥವಾ ‘ಸಪೋಟಾ’ ಎಂದೂ ಕರೆಯಲ್ಪಡುವ ಚಿಕೂ ಒಂದು ಟೇಸ್ಟಿ ಮತ್ತು ಆರೋಗ್ಯಕರ ಹಣ್ಣು. ಇದು ತುಂಬಾ ಸಿಹಿ ಮತ್ತು ಹೆಚ್ಚಿನ ಕ್ಯಾಲೋರಿ ಹೊಂದಿದೆ.ಈ ಹಣ್ಣಿನ ಕೃಷಿಯೂ ಬಹಳ ಸುಲಭ. ನೀರು ಹಾಗೂ ಸ್ಥಳ ಕಡಿಮೆ ಸಾಕಾಗಿದ್ದು, ಬಹಳ ಬೇಗ ಫಲ ನೀಡುತ್ತದೆ.ಈ ಪುಟ್ಟ ಹಣ್ಣಿನ ಅನೇಕ ಪ್ರಯೋಜನಗಳನ್ನು ಇಲ್ಲಿ ಕೊಡಲಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಚಿಕೂವು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಅನ್ನು ಹೊಂದಿದ್ದು ಅದು ಆಹಾರ ಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಕರುಳಿನ ಕ್ಯಾನ್ಸರ್, ಡೈವರ್ಟಿಕ್ಯುಲೈಟಿಸ್ ಮತ್ತು ಉರಿಯೂತದ ಕರುಳಿನಂತಹ ಅನೇಕ ಆರೋಗ್ಯ ಪರಿಸ್ಥಿತಿಗಳಿಂದ ರಕ್ಷಿಸಲು ಚಿಕೂ ಸಹಕಾರಿ.

ಉರಿಯೂತ ಶಮನಕಾರಿ

ಟ್ಯಾನಿನ್‌ಗಳ ಹೆಚ್ಚಿನ ಅಂಶವು ಚಿಕೂವನ್ನು ಪ್ರಮುಖ ಉರಿಯೂತ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಊತ ಮತ್ತು ಕೀಲು ನೋವಿನ ಸಮಸ್ಯೆಯನ್ನು ಕಡಿಮೆ ಮಾಡುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತದೆ

ಈ ಜನಪ್ರಿಯ ಹಣ್ಣು “ಮೂಗಿನ ಮತ್ತು ಉಸಿರಾಟದ ಪ್ರದೇಶದಿಂದ ಕಫ ಮತ್ತು ಲೋಳೆಯನ್ನು ತೆಗೆದುಹಾಕುವ ಮೂಲಕ ಕೆಮ್ಮು ನಿಯಂತ್ರಣದಲ್ಲಿ ಇರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ

ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಿಂದ ಸಮೃದ್ಧವಾಗಿರುವ ಸಪೋಟಾ ಹಣ್ಣು ಮೂಳೆಗಳನ್ನು ವರ್ಧಿಸಲು ಮತ್ತು ಬಲಪಡಿಸಲು ಹೆಚ್ಚು ಸಹಾಯ ಮಾಡುತ್ತದೆ.

ಇದನ್ನೂ ಓದಿ : Benefits of Fruit Peels: ಹಣ್ಣಿನ ಸಿಪ್ಪೆ ಎಸಿಯೋ ಮುನ್ನ ಇದನ್ನೊಮ್ಮೆ ಓದಿ; ಹಣ್ಣು ತರಕಾರಿಗಳ ಸಿಪ್ಪೆಯಲ್ಲಿ ಅಡಗಿದೆ ಹೇರಳ ಪೋಷಕಾಂಶಗಳು

(Chikoo health benefits shared by experts)

Comments are closed.