ಏಲೂರು : ರಾಸಾಯನಿಕ ಕಾರ್ಖಾನೆಯಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ (Fire Chemical Factory) ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh ) ಕೃಷ್ಣಾ ಜಿಲ್ಲೆಯ ಮುಸುನೂರು ಗ್ರಾಮದ ಪೊರಸ್ ಪ್ರೈವೇಟ್ ಲಿಮಿಟೆಡ್ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದೆ.
ಕಂಟೇನರ್ ಸೋರಿಕೆಯಾದ ನಂತರ ಕಾರ್ಖಾನೆಯಲ್ಲಿ ಪಾಲಿಮರ್ ಕಚ್ಚಾ ವಸ್ತುವನ್ನು ತಲುಪಿಸುವ ಬೆಂಕಿ ಕಾಣಿಸಿಕೊಂಡಿತು ಮತ್ತು ತೆರೆದ ಮ್ಯಾನ್‌ಹೋಲ್ ಮೂಲಕ ಬೆಂಕಿ ಕಾರ್ಖಾನೆಯನ್ನು ತಲುಪಿದೆ ಎನ್ನಲಾಗುತ್ತಿದೆ. ಕಾರ್ಖಾನೆಗೆ ಬೆಂಕಿ ತಗಲುತ್ತಿದ್ದಂತೆಯೇ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ಡಿಎಸ್ಪಿ ಶ್ರೀನ್ವಾಸುಲು ತಿಳಿಸಿದ್ದಾರೆ.
ಏಲೂರು ಎಸ್ಪಿ ರಾಹುಲ್ ದೇವ್ ಶರ್ಮಾ ಮಾತನಾಡಿ, ಅಪಘಾತದ ವೇಳೆ 18 ಕಾರ್ಮಿಕರು ಕರ್ತವ್ಯದಲ್ಲಿದ್ದರು. ಸಂತ್ರಸ್ತರನ್ನು ಉತ್ತಮ ಚಿಕಿತ್ಸೆಗಾಗಿ ವಿಜಯವಾಡ ಮತ್ತು ನುಜಿವೀಡಿಗೆ ರವಾನಿಸಲಾಗಿದೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಬೆಂಕಿಯಲ್ಲಿ ಎರಡು ಮಹಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಮೃತಪಟ್ಟ ಆರು ಮಂದಿಯಲ್ಲಿ ಒಟ್ಟು ನಾಲ್ವರು ಬಿಹಾರ ರಾಜ್ಯದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ದಿಯೋಘರ್ ರೋಪ್‌ವೇ ದುರಂತ : 2 ಸಾವು, ಅಪಾಯದಲ್ಲಿ14 ಮಂದಿ
ಇದನ್ನೂ ಓದಿ : ಸಂತೋಷ್ ಪಾಟೀಲ್ ಆತ್ಮಹತ್ಯೆ : ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ಉಡುಪಿಯಲ್ಲಿ ಪ್ರಕರಣ ದಾಖಲು
6 Killed, Over 10 Injured in Fire Chemical Factory in Andhra Pradesh