Namma Metro : ಪ್ರಯಾಣಿಕರಿಗೆ ಬರೆ ಎಳೆದ ನಮ್ಮ ಮೆಟ್ರೋ : ಹೆಚ್ಚಳವಾಯ್ತು ಪಾಸ್ ದರ

ಬೆಂಗಳೂರು : ಮೆಟ್ರೋ ಬೆಂಗಳೂರು (Namma Metro) ನಗರದ ಸಂಚಾರ ಪ್ರಿಯರ ಆಪ್ತಮಿತ್ರ. ಕಾಡುವ ಟ್ರಾಫಿಕ್ ನಿಂದ ಬಿಡುಗಡೆಗೊಳಿಸಿದ ಮೆಟ್ರೋ ಗೆ ಜನರು ಮರುಳಾಗಿದ್ದರು. ಹೀಗಾಗಿ ಪ್ರತಿನಿತ್ಯ ಮೆಟ್ರೋವನ್ನು ಸಂಚಾರಕ್ಕಾಗಿ ಆಶ್ರಯಿಸಿದವರ ಸಂಖ್ಯೆಯೂ ದೊಡ್ಡದಿತ್ತು. ಆದರೆ ಈಗ ಮೆಟ್ರೋ ಜಾರಿಗೊಳಿಸಿದ ಪಾಸ್ ವ್ಯವಸ್ಥೆ (metro pass) ಜನರ ಜೇಬಿಗೆ ಕತ್ತರಿ ಹಾಕುವಂತಿದ್ದು ಪ್ರಯಾಣಿಕರ ನಿದ್ದೆಗೆಡಿಸಿದೆ.

ಹೌದು ನಮ್ಮ ಮೆಟ್ರೋ (Namma Metro) ದರದ ವಿಚಾರದಲ್ಲಿ ಮಾತ್ರ ನಮ್ಮ ದಾಗಿ ಉಳಿದಿಲ್ಲ. ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಡೇ ಪಾಸ್ ದರ ನಿಗದಿಯಾಗಿಲ್ಲ. BMTC ಡೇ ಪಾಸ್ ಕನಿಷ್ಠ ₹70, ಗರಿಷ್ಠ ₹147 ಆದರೆ. ಮೆಟ್ರೋ ಡೈಲಿ ಪಾಸ್ ಗೆ ₹200. ಮೂರು ದಿನದ ಪಾಸ್ ಗೆ ₹400 ಬೇಕು. ಮೆಟ್ರೋ ಡೇ ಪಾಸ್ ಮಾಡಿಸಲು ₹50 ಸಮಯ ಭದ್ರತಾ ಠೇವಣಿ ಕಟ್ಟಬೇಕು. ಮೆಟ್ರೋ ಡೇ ಪಾಸ್ ದರ ₹150 ನಿಗದಿ ಪಡಿಸಲಾಗಿದೆ. ಒಂದೊಮ್ಮೆ ದಿನದ ಪ್ರಯಾಣ ಮುಗಿದ ಬಳಿಕ ಪಾಸ್ ಹಿಂತಿರುಗಿಸಿದರೇ, ಪಾಸ್ ಗುಣಮಟ್ಟದಲ್ಲಿ ಸರಿಯಾಗಿದ್ದರೇ, ₹50 ಭದ್ರತಾ ಠೇವಣಿ ವಾಪಸ್ ನೀಡಲಾಗುತ್ತೆ.‌

3 ದಿನದ ಪಾಸ್ ಕೊಂಡರೆ ಪ್ರತಿದಿನದ ಸರಾಸರಿ ಮೆಟ್ರೋ ದರ ₹117 ಆದರೆ, ದಿನದ ಪಾಸ್ ಗಿಂತ ₹33 ಕಡಿಮೆ ಖರ್ಚಾಗುತ್ತೆ. ಏನೇ ಇದ್ದರೂ ಪ್ರತಿನಿತ್ಯ ಮೆಟ್ರೋದಲ್ಲಿ ಓಡಾಡಿದರೇ ಜೇಬು ಖಾಲಿಯಾಗೋದು ಗ್ಯಾರಂಟಿ ಅಂತ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗ ಮೆಟ್ರೋ ದರ ಏರಿಕೆಯಾಗಿರೋದು ಮಾತ್ರವಲ್ಲ, ಸದ್ಯ ಮೆಟ್ರೋ 55 ಕಿ.ಮೀ ಜಾಲ ಹೊಂದಿದೆ. ನಮ್ಮ ಮೆಟ್ರೋ.‌ 2 ನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಮೆಟ್ರೋ ವಾಣಿಜ್ಯ ಸೇವೆಗೆ ಸೇರ್ಪಡೆಯಾಗಲಿದೆ. ಆಗ ನಿಗದಿ ಆಗಿರುವ ಪಾಸ್ ದರ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.‌

ಇನ್ನೂ ಮೆಟ್ರೋ ಪಾಸ್ ರೇಟ್ ಏರಿಕೆ ಕುರಿತು ಪ್ರತಿಕ್ರಿಯಿಸಿರೋ ಬಿಎಂಆರ್ಸಿಎಲ್ (BMRCL )ಎಂಡಿ, ಅಂಜುಂ ಪರ್ವೇಜ್, ಮೆಟ್ರೋವನ್ನು ಬಿಎಂಟಿಸಿಗೆ ಹೋಲಿಸುವಂತಿಲ್ಲ. ಎಸಿ ಮತ್ತು ಸುವ್ಯವಸ್ಥಿತ ಪ್ರಯಾಣ ಮೆಟ್ರೋ ನೀಡುತ್ತದೆ. ಪಾಸ್ ದರ ನಿಗದಿ ಪಡಿಸುವಾಗ ಪ್ರಯಾಣಿಕರ ಹಿತದೃಷ್ಟಿ ಮತ್ತು ನಿಗಮದ ಹಿತದೃಷ್ಟಿ ಎರಡು ಗಮನದಲ್ಲಿದೆ. ಸರಾಸರಿ ಪ್ರಯಾಣಿಸುವ ದೂರ, ಸದ್ಯ ಲಭ್ಯ ಇರುವ ಮೆಟ್ರೋ ಸೇವೆ ಪರಿಗಣಿಸಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಪೆಟ್ರೋಲ್, ಡಿಸೇಲ್, ವಿದ್ಯುತ್ , ಆಹಾರ ಉತ್ಪನ್ನ, ಹೊಟೇಲ್ ಉತ್ಪನ್ನದ ಬಳಿಕ ಈಗ ಮೆಟ್ರೋ ದರ ಏರಿಕೆಯಾಗಿದ್ದು ಪ್ರಯಾಣಿಕರು‌ ಅಸಮಧಾನಗೊಂಡಿದ್ದಾರೆ‌‌ ‌.

ಇದನ್ನೂ ಓದಿ : ಸಿಲಿಕಾನ್‌ ಸಿಟಿ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

ಇದನ್ನೂ ಓದಿ : ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಜೀವನಾಡಿ: ಬಿಎಂಟಿಸಿ ಬಸ್ ಟಿಕೇಟ್ ದರ‌ ಹೆಚ್ಚಳ

Namma Metro Daily Pass Rate increased BMRCL

Comments are closed.