Car-Bus collision : ಕಾರು ಬಸ್‌ ಮುಖಾಮುಖಿ ಢಿಕ್ಕಿ 6 ಮಂದಿ ಸಾವು

ದೆಹಲಿ : ಬೆಳ್ಳಂಬೆಳಗ್ಗೆ ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ಮತ್ತು ಬಸ್‌ ಮುಖಾಮುಖಿಯಾದ (Car-Bus collision) ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜು ಆಗಿದೆ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ (Delhi-Meerut Expressway accident) ಮಂಗಳವಾರ ಬೆಳಿಗ್ಗೆ ಕಾರು ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಸ್ಟೇಷನ್ ಪ್ರದೇಶದ ಬಳಿ ಎನ್‌ಹೆಚ್ 9 ನಲ್ಲಿ ಲಾಲ್ಕುವಾನ್‌ನಿಂದ ದೆಹಲಿಗೆ ಹೋಗುವ ಲೇನ್‌ನಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : Gas leak : ಕುಮಟಾದ ಕಡೇಕೋಡಿ ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ

ಇದನ್ನೂ ಓದಿ : China Crime News‌ : ಶಿಶುವಿಹಾರದಲ್ಲಿ ಚೂರಿ ಇರಿತದಿಂದ 6 ಮಂದಿ ಸಾವು, ಒಬ್ಬರಿಗೆ ಗಾಯ

ಅಪಘಾತವು ಎಷ್ಟು ಭೀಕರವಾಗಿದೆ ಎಂದರೆ ಮೃತ ದೇಹಗಳು ಕಾರಿನಲ್ಲಿ ತೀವ್ರವಾಗಿ ಸಿಕ್ಕಿಹಾಕಿಕೊಂಡಿದ್ದು, ಕಾರಿನಲ್ಲಿ ಸಿಲುಕಿಕೊಂಡ ಮೃತದೇಹಗಳನ್ನು ಹೊರತರಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಅಪಘಾತದ ನಂತರ ಸ್ಥಳದಲ್ಲಿ ಭಾರೀ ಜನಸಂದಣಿಯೂ ಕಂಡು ಬಂದಿತು. ಸಿಕ್ಕಿದ ಮಾಹಿತಿಯ ಪ್ರಕಾರ, ಕಟರ್‌ನಿಂದ ಗೇಟ್ ಕತ್ತರಿಸಿ ಕಾರಿನಿಂದ ಮೃತ ದೇಹವನ್ನು ಹೊರತೆಗೆಯಲಾಯಿತು. ಇದೇ ವೇಳೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

6 people died in Delhi-Meerut Expressway car-bus collision

Comments are closed.