ತಮಿಳುನಾಡು :grandma burnt to death: ಮೊಮ್ಮಕ್ಕಳು ಹಾಗೂ ಅಜ್ಜಿ – ತಾತಂದಿರ ನಡುವಿನ ಬಂಧ ಅದು ವಿಶೇಷವಾಗಿದೆ. ಮಕ್ಕಳಿಗೆ ತಮ್ಮ ತಂದೆ- ತಾಯಿಗಿಂತಲೂ ಅಜ್ಜ- ಅಜ್ಜಿಯಂದಿರ ಮೇಲೆ ವಿಶೇಷವಾದ ಅಕ್ಕರೆ ಇರುತ್ತದೆ. ಆದರೆ ಈ ಮಾತಿಗೆ ವಿರುದ್ಧ ಎಂಬಂತೆ ಅಜ್ಜಿಯನ್ನು ಸಾಕಲು ಇಷ್ಟವಿಲ್ಲದ ಇಬ್ಬರು ಮೊಮ್ಮಕ್ಕಳು ಸೇರಿ ವೃದ್ಧೆಯನ್ನು ಜೀವಂತ ಸುಟ್ಟು ಕೊಲೆ ಮಾಡಿದ್ದಾರೆ. ಈ ಬೆಚ್ಚಿ ಬೀಳಿಸುವ ಘಟನೆಯು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೇಟ್ಟೈ ಎಂಬಲ್ಲಿ ನಡೆದಿದೆ. ಮೇ 3ರಂದು ಸುಟ್ಟ ಸ್ಥಿತಿಯಲ್ಲಿ ಆಧಾಂ ನಗರದ ಕಸದ ರಾಶಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶವ ಪತ್ತೆಯಾದ ಬಳಿಕ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಸಿಸಿ ಕ್ಯಾಮಾರಗಳ ಪರಿಶೀಲನೆ, ಸಾಕ್ಷ್ಯಗಳ ವಿಚಾರಣೆಯ ಬಳಿಕ ಇದು 90 ವರ್ಷದ ಸುಬ್ಬಮ್ಮಳ್ ಎಂಬವರ ಮೃತ ದೇಹ ಎಂಬುದು ಪೊಲೀಸರಿಗೆ ತಿಳಿದಿತ್ತು. ಈ ವೃದ್ಧೆಯನ್ನು ಮೊಮ್ಮಕ್ಕಳಾದ ಮರಿಯಮ್ಮಾಳ್ ಹಾಗೂ ಮೇರಿ ಎಂಬವರು ನೋಡಿಕೊಳ್ಳುತ್ತಿದ್ದರು. ಆದರೆ ವೃದ್ಧೆಯನ್ನು ನೋಡಿಕೊಂಡು ಬೇಸತ್ತಿದ್ದ ಈ ಇಬ್ಬರು ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ. ಅಧಾಂ ನಗರದಲ್ಲಿ ಸುಬ್ಬಮ್ಮಳ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ್ದ ಮರಿಯಮ್ಮಳ್ ಹಾಗೂ ಮೇರಿ ಬಳಿಕ ಶವವನ್ನು ಕಸದ ತೊಟ್ಟಿಗೆ ಎಸೆದಿದ್ದರು.
ಆದರೆ ಸಾಕ್ಷ್ಯಗಳ ಸಂಗ್ರಹಗಳ ಬಳಿಕ ಈ ಇಬ್ಬರು ಮೊಮ್ಮಕ್ಕಳ ಕಳ್ಳಾಟ ಪೊಲೀಸರ ಎದುರು ಬಟಾ ಬಯಾಲಾಗಿದೆ. ಇದೀಗ ಪೊಲೀಸರು ಮರಿಯಮ್ಮಳ್ ಹಾಗೂ ಮೇರಿಯನ್ನು ಬಂಧಿಸಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ : MI vs GT IPL 2022 : ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್
ಇದನ್ನೂ ಓದಿ : Akshaya Tritiya : ಧರ್ಮಸಂಘರ್ಷಕ್ಕೆ ಕ್ಯಾರೇ ಎನ್ನದ ಜನರು : ರಾಜ್ಯದಲ್ಲಿ 1680 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟ
90 year grandma burnt to death by her own granddaughters