floating bridge malpe : ಮಲ್ಪೆ ಸಮುದ್ರದಲ್ಲಿ ತೇಲುತ್ತಿದೆ ಸೇತುವೆ : ಕೃಷ್ಣನಗರಿ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ

ಯುವಕರಿಂದ ಹಿಡಿದು ಮಕ್ಕಳು, ವೃದ್ಧರ ತನಕ ಎಲ್ಲರಿಗೂ ಇಷ್ಟವಾಗೋದು ಸಮುದ್ರ ತೀರ. ಅಲೆ ಅಲೆಯಾಗಿ ಬರೋ ನೀರಿನಲ್ಲಿ ಆಟವಾಡೋದು ಎಲ್ಲರಿಗೂ ಇಷ್ಟವೇ. ಹೀಗೆ ನೀರಾಟವಾಡಿ ಎಂಜಾಯ್ ಮಾಡೋರಿಗೆ ಸಮುದ್ರ ತೀರದಲ್ಲಿ ನೀರಿಗೂ ದಡಕ್ಕೂ ನಂಟು ಕಲ್ಪಿಸೋಕೆ ಒಂದು ಬೋಟ್ ಇದ್ದರೇ ಹೇಗಿರುತ್ತೇ ಹೇಳಿ ? ಅಂತಹ ದೊಂದು ಅದ್ಬುತ ಅನುಭವಕ್ಕೆ ನೀವು ಕೃಷ್ಣ ನಗರಿ ಉಡುಪಿಯಲ್ಲಿರೋ ಮಲ್ಪೆ ಕಡಲ ಕಿನಾರೆಗೆ (floating bridge malpe) ಬರಬೇಕು.

ಹೌದು, ಶ್ರೀಕೃಷ್ಣನ ನಗರೀ ಉಡುಪಿಯಲ್ಲೇ ರಾಜ್ಯದಲ್ಲೇ ಮೊದಲ ಫ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ. ಪ್ರವಾಸಿತಾಣ ಮಲ್ಪೆ ಕಡಲಕಿನಾರೆಯಲ್ಲಿ ತೇಲುವ ಸೇತುವೆ ಆರಂಭವಾಗಿದ್ದು ಇದರಲ್ಲಿ ನಡೆದುಕೊಂಡು ಹೋಗುವ ಮೂಲಕ ಪ್ರವಾಸಿಗರು ಸಮುದ್ರದ ಮೇಲೆ‌ ನಡೆದುಕೊಂಡು ಹೋಗುವ ಅನುಭವ ಪಡೆದುಕೊಳ್ಳಬಹುದು. ಇನ್ನೂ ಇದೇ ಮೊದಲ ಬಾರಿಗೆ ಸಮುದ್ರದಲ್ಲಿ ತೇಲುವ ಸೇತುವೆಯೊಂದು ಉಡುಪಿಯಲ್ಲಿ ಆರಂಭವಾಗಿದ್ದು, ಉಡುಪಿಯ ಜನತೆ ತೇಲುವ ಸೇತುವೆ ಅನುಭವ ಪಡೆದು ಖುಷಿ ಪಡುತ್ತಿದ್ದಾರೆ. ಉಡುಪಿಯ ಮೂವರು ಉದ್ಯಮಿಗಳು ಸಹಭಾಗಿತ್ವದಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯ ಅನುಮತಿ ಪಡೆದು ಥಾಯ್ ಲ್ಯಾಂಡ್ ದೇಶದಿಂದ ಸೇತುವೆ ಆಮದು ಮಾಡಿ ಪ್ರವಾಸಿಗಳಿಗಾಗಿ ಅಳವಡಿಸಿದ್ದಾರೆ.

ಅಂದಾಜು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ಆಮದು ಮಾಡಲಾಗಿದ್ದು, ಮೂರು ದಿನಗಳಲ್ಲಿ ಮಲ್ಪೆಯ ಅರಬ್ಬೀ ‌ಸಮುದ್ರದಲ್ಲಿ ಸೇತುವೆ ನಿರ್ಮಾಣವಾಗಿದೆ. 100 ಮೀಟರ್ ಉದ್ದ ಹಾಗೂ 3.50 ಮೀಟರ್ ಅಗಲ ಹೊಂದಿರುವ ಸೇತುವೆ ಜನರ ಬಳಕೆಗೆ ಸಿಕ್ಕಿದೆ. ಸೇತುವೆಗೆ 30 ಲೈಫ್ ಗಾಯ್ ಅಳವಡಿಕೆ ಹಾಗೂ ಪ್ರವಾಸಿಗರ ರಕ್ಷಣೆಗೆ 10 ಮಂದಿ ಲೈಫ್ ಗಾರ್ಡ್ ನೇಮಿಸಲಾಗಿದೆ. ಲೈಫ್ ಜ್ಯಾಕೆಟ್ ಕಡ್ಡಾಯದೊಂದಿಗೆ ಸೇತುವೆ ಮೇಲೆ ಹೋಗಲು ಅನುಮತಿ ನೀಡಲಾಗಿದ್ದು, ಏಳು ವರ್ಷ ಮೇಲಿನ ವಯಸ್ಸಿನವರೆಗೆ ಮಾತ್ರ ಅವಕಾಶ ಜೊತೆಗೆ 100 ರೂಪಾಯಿ ಟಿಕೆಟ್ ಶುಲ್ಕ ನೀಡಬೇಕು. ಥ್ರಿಲ್ಲಿಂಗ್ ಅನುಭವ ಇರುವ ಜಲಕ್ರೀಡೆಯಾಗಿರೋ ಈ ಪ್ಲೋಟಿಂಗ್ ಬೋಟ್ ಏರುವವರಿಗೆ ಲೈಫ್ ಜಾಕೆಟ್ ಕಡ್ಡಾಯವಾಗಿದ್ದು, ತುಂಬ ಖುಷಿಕೊಡುವ ಜೊತೆಗೆ ಅಷ್ಟೇ ಜಾಗೃತೆ ವಹಿಸಬೇಕೆಂಬ ಸೂಚನೆ ನೀಡಲಾಗಿದೆ.

ಈಗ ತೇಲಾಡುವ ಬೋಟ್ ಏರುವ ವೇಳೆ ಜನರ ರಕ್ಷಣೆಗೆ ಕನಿಷ್ಠ 20 ಲೈಫ್ ಗಾರ್ಡ್ ಗಳು ಸ್ಥಳದಲ್ಲಿರಬೇಕೆಂದು ಆದೇಶಿಸಲಾಗಿದೆ. ಈಗಾಗಲೇ ಬೇಸಿಗೆ ಹಾಗೂ ರಜಾ ಕಾಲ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಈಗಂತೂ ಪ್ಲೋಟಿಂಗ್ ಬೋಟ್ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ 20 ರಿಂದ 25 ಮಂದಿ ರಕ್ಚಕರು ಇರಬೇಕು ಎಂದು ಸೂಚನೆ ಕೊಡಲಾಗಿದೆ.

ಇದನ್ನೂ ಓದಿ : ವಿದೇಶಕ್ಕೆ ಹೊರಟಿದ್ದೀರಾ ? ಹಾಗಾದರೆ ನಿಮ್ಮ ಪಾಸ್‌ಪೋರ್ಟ್‌ನ ರಕ್ಷಣೆ ಹೀಗೆ ಮಾಡಿ

ಇದನ್ನೂ ಓದಿ : Mullayanagiri : ಮಂಜಿನ ಓಟ ಹಚ್ಚ ಹಸಿರ ವನರಾಶಿ : ಇದು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

Karnataka Firts Floating Bridge Malpe inaugurated

Comments are closed.