ಮಧ್ಯಪ್ರದೇಶ : ಮಧ್ಯಪ್ರದೇಶದ ಧಾತಿಯಾ ಜಿಲ್ಲೆಯ ಸಂಕುವಾದಲ್ಲಿ (Accident Case)ಸೋಮವಾರ ತಡರಾತ್ರಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ತೀವ್ರ ಗಾಯಗೊಂಡಿರುತ್ತಾರೆ. ಘಟನೆ ನಡೆದ ಸ್ಥಳಕ್ಕೆ ಸ್ಥಳಿಯ ಪೊಲೀಸರು ಆಗಮಿಸಿದ್ದು, ಗಾಯಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧಾತಿಯಾ ಎಸ್ಪಿಯಾದ ಅಮನ್ ಸಿಂಗ್ ರಾಥೋಡ್ ಹೇಳಿರುವಂತೆ ” ಟ್ರ್ಯಾಕ್ಟರ್ ಟ್ರಾಲಿಯು ಭಿಂಡ್ ಜಿಲ್ಲೆಯ ಜಖೋಲಿ ಗ್ರಾಮದ ನಿವಾಸಿಗಳಾಗಿದ್ದು, ರತನ್‌ಗಢ್ ಮಾತಾ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆಂದು ಯಾತ್ರಿಕರನ್ನು ಹೊತ್ತೊಯ್ಯುತ್ತಿರುವಾಗ ಧಾತಿಯಾ ಜಿಲ್ಲೆಯ ಸೇತುವೆಯ ಮೇಲೆ ಉರುಳಿ ಬಿದ್ದಿರುತ್ತದೆ. ಸ್ಥಳಕ್ಕೆ ಆಗುಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಧಾತಿಯಾ ಜಿಲ್ಲೆಯಲ್ಲಿ ನಡೆದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾದ ಅಪಘಾತದ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಅವರು ತಮ್ಮ ಸಂತಾಪದಲ್ಲಿ “ಟ್ರ್ಯಾಕ್ಟರ್-ಟ್ರಾಲಿ ಅಪಘಾತದಿಂದಾಗಿ ಡಾಟಿಯಾದಲ್ಲಿ ಅಮೂಲ್ಯ ಜೀವಗಳ ಅಕಾಲಿಕ ಮರಣದ ದುಃಖದ ಸುದ್ದಿ ನನಗೆ ಬಂದಿತು. ಅಗಲಿದ ಆತ್ಮಗಳಿಗೆ ದೇವರ ಪಾದದಡಿಯಲ್ಲಿ ಸ್ಥಾನ ನೀಡಲೆಂದು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ದುಃಖತಪ್ತ ಕುಟುಂಬ ಸದಸ್ಯರಿಗೆ ಈ ಆಳವಾದ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಬರೆದಿದ್ದಾರೆ.
ಇದನ್ನೂ ಓದಿ : Accident – 4 died : ಆಟೋ ಮೇಲೆ ಮರಳು ಡಂಪರ್ ಪಲ್ಟಿ ; 3 ವಿದ್ಯಾರ್ಥಿಗಳು ಸೇರಿ 4 ಮಂದಿ ಸಾವು
ಇದನ್ನೂ ಓದಿ : Murder case : ಬಿಸಿ ನೀರು, ಮೆಣಸಿನ ಪುಡಿ ಎರಚಿ ಮಾವನನ್ನು ಕೊಂದ ಸೊಸೆ
ಇದನ್ನೂ ಓದಿ : Rape incident : 70 ರ ವೃದ್ದೆ ಮೇಲೆ 28 ರ ಯುವಕನಿಂದ ಅತ್ಯಾಚಾರ
ಇದನ್ನೂ ಓದಿ : The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಡೆದ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಹಾಗೆ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಡಾಟಿಯಾ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದಾರೆ.
Accident Case: Tractor trolley overturned: 3 dead, 25 injured