Crime News : ಹೆಂಡತಿಗೆ ರೀಲ್ಸ್‌ ಹುಚ್ಚು : ರೊಚ್ಚಿಗೆದ್ದ ಪತಿ ಪತ್ನಿಯನ್ನೇ ಕೊಂದ

ಚೆನ್ನೈ : (Crime News )ಹೆಂಡತಿ ಸದಾ ಕಾಲ ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್​ ಮಾಡುತ್ತಿರುವುದನ್ನು ನೋಡಿ ಬೇಸತ್ತ ಗಂಡನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶಾಲಿನಿ ಎನ್ನುವಾಕೆ ಮೃತ ಮಹಿಳೆ .

ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ(Crime News ) ನಡೆದಿದ್ದು, ಅಮೃತಲಿಂಗಂ ಎನ್ನುವಾತ ಭಾನುವಾರ ರಾತ್ರಿ ತನ್ನ ಪತ್ನಿಯನ್ನು ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಆಕೆ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್‌ ಮಾಡುವುದರಲ್ಲೇ ದಿನದ ಹೆಚ್ಚು ಸಮಯವನ್ನು ಕಳೆಯುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಅಮೃತಲಿಂಗಂನ ಪತ್ನಿ ಚಿತ್ರಾ ಅವರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದಳು. ರೀಲ್​ಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ಬಗ್ಗೆ ಅಸಮಾಧಾನಗೊಂಡಿದ್ದ ಅಮೃತಲಿಂಗಂ ತನ್ನ ಹೆಂಡತಿ ಚಿತ್ರಾ ಜೊತೆ ಹಲವಾರು ಬಾರಿ ಜಗಳವಾಡಿದ್ದ. ಚಿತ್ರಾಳ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್​ಗಳ ಸಂಖ್ಯೆ ಹೆಚ್ಚಾದ ನಂತರ ಆಕೆ ಇನ್ನಷ್ಟು ಅದರಲ್ಲಿಯೇ ಮುಳುಗಿ​ ಹೋಗಿದ್ದಳು. ತಾನು ದೊಡ್ಡ ನಟಿಯಾಗಬೇಕು ಎಂದು ಬಯಸಿದ ಆಕೆ ಹೆಚ್ಚೆಚ್ಚು ರೀಲ್ಸ್​ಗಳನ್ನು ಮಾಡತೊಡಗಿದಳು.

ಇದನ್ನೂ ಓದಿ : Accident Case : ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿ : 3 ಸಾವು 25 ಮಂದಿಗೆ ಗಾಯ

ಇದನ್ನೂ ಓದಿ : Murder case : ಬಿಸಿ ನೀರು, ಮೆಣಸಿನ ಪುಡಿ ಎರಚಿ ಮಾವನನ್ನು ಕೊಂದ ಸೊಸೆ

ಇದನ್ನೂ ಓದಿ : Accident – 4 died : ಆಟೋ ಮೇಲೆ ಮರಳು ಡಂಪರ್ ಪಲ್ಟಿ ; 3 ವಿದ್ಯಾರ್ಥಿಗಳು ಸೇರಿ 4 ಮಂದಿ ಸಾವು

ಗಂಡನಿಂದ ದೂರ ಹೋಗಿ ಚೆನ್ನೈನಲ್ಲಿದ್ದ ಆಕೆ ಕಳೆದ ವಾರ ತನ್ನ ಮಗಳ ಮದುವೆಗೆಂದು ಊರಿಗೆ ವಾಪಾಸ್ ಬಂದಿದ್ದಳು. ಆದರೆ ಅಮೃತಲಿಂಗಂಗೆ ಅವಳು ಪುನಃ ಚೆನ್ನೈಗೆ ಹೋಗುವುದು ಇಷ್ಟವಿರಲಿಲ್ಲ. ಚಿತ್ರಾ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬಯಸಿದ್ದಕ್ಕೆ ಭಾನುವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದಾಗ ಅಮೃತಲಿಂಗಂ ಚಿತ್ರಾಳ ಕುತ್ತಿಗೆಯನ್ನು ಅವಳ ಶಾಲಿನಿಂದ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಆಕೆ ಮೂರ್ಛೆ ಹೋದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಎದುರು ಸಿಕ್ಕ ಮಗಳ ಬಳಿ ತಾನು ಚಿತ್ರಾಗೆ ಹೊಡೆದಿರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ.

ಅಪ್ಪ-ಅಮ್ಮನ ಜಗಳದ ಬಗ್ಗೆ ತಿಳಿದಿದ್ದ ಮಗಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಸ್ವಲ್ಪ ಹೊತ್ತಾದ ಬಳಿಕ ಅಮ್ಮನನ್ನು ಸಮಾಧಾನ ಮಾಡಲೆಂದು ರೂಮಿಗೆ ಹೋದ ಮಗಳು ಚಿತ್ರಾಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸಾವನ್ನಪ್ಪಿರುವುದು ಬಯಲಾಗಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ತನ್ನ ತಂದೆಯ ವಿರುದ್ಧ ಮಗಳು ದೂರು ನೀಡಿದ್ದಾಳೆ.

ಈ ಕುರಿತು ಪೆರುಮಾನಲ್ಲೂರು ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಮೃತಲಿಂಗಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

(Crime News) A shocking incident has taken place in Tamil Nadu where a husband got tired of seeing his wife making reels on social media all the time and strangled her to death. Shalini is the dead woman.

Comments are closed.