ಭಾನುವಾರ, ಏಪ್ರಿಲ್ 27, 2025
HomeCrimeacid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

- Advertisement -

ಬೆಂಗಳೂರು : acid attack victim : ಬೆಂಗಳೂರಿನಲ್ಲಿ ಆ್ಯಸಿಡ್​ ದಾಳಿಗೆ ಒಳಗಾಗಿದ್ದ ಯುವತಿಗೆ ನಿನ್ನೆ ಐದನೇ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈ ವೇಳೆಯಲ್ಲಿ ಸಂತ್ರಸ್ತ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಐಸಿಯುವಿಗೆ ಶಿಫ್ಟ್​ ಮಾಡಲಾಗಿದೆ. ಹಾಗೂ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಆ್ಯಸಿಡ್​ ದಾಳಿಗೆ ಒಳಗಾಗಿರುವ ಯುವತಿಯ 36 ಪ್ರತಿಶತ ದೇಹದ ಭಾಗಗಳು ಸುಟ್ಟು ಹೋಗಿವೆ. ಕಳೆದ ಒಂದು ತಿಂಗಳಿನಿಂದ ಯುವತಿಯು ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಗೆ ಈವರೆಗೆ ಐದು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಯುವತಿ ಈಗ ಪ್ರಜ್ಞೆಯ ಸ್ಥಿತಿಯಲ್ಲಿ ಇದ್ದಾರೆ. ಆದರೆ ಐದನೇ ಶಸ್ತ್ರ ಚಿಕಿತ್ಸೆ ಬಳಿಕ ಯುವತಿಯ ದೇಹದಲ್ಲಿ ಆಮ್ಲಜನಕದ ಕೊರತೆ ಹಾಗೂ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸೇಂಟ್​ ಜಾನ್ಸ್​ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಅರವಿಂದ ಕಸ್ತೂರಿ ಈ ವಿಚಾರವಾಗಿ ಮಾತನಾಡಿದ್ದು ಸಂತ್ರಸ್ತೆಯ ದೇಹದ ಮೂರನೇ ಒಂದು ಭಾಗ ಸುಟ್ಟು ಹೋಗಿದೆ. ಮುಂದಿನ ದಿನಗಳಲ್ಲಿ ಈ ಗಾಯಗಳಲ್ಲಿ ಕೀವು ತುಂಬಿಕೊಳ್ಳಬಹುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎರಡು ಬಾರಿ ದಾನ ಮಾಡಿದ ಚರ್ಮವನ್ನು ಡ್ರೆಸ್ಸಿಂಗ್​ ಆಗಿ ಬಳಸಲಾಗಿದೆ. ಆದರೆ ಈ ಚರ್ಮವು ಮುಂದಿನ ದಿನಗಳಲ್ಲಿ ಕಿತ್ತು ಹೋಗುತ್ತದೆ. ಸಂತ್ರಸ್ತೆ ಈಗ ಆಹಾರ ಸೇವನೆ ಮಾಡುತ್ತಿದ್ದಾರೆ. ಇನ್ನೊಂದು ತಿಂಗಳು ಯುವತಿಯು ಆಸ್ಪತ್ರೆಯಲ್ಲಿ ಇರಬೇಕು ಎಂದು ಹೇಳಿದರು.

ಇದನ್ನು ಓದಿ : Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ

ಇದನ್ನೂ ಓದಿ : IPL 2022 ನಿಂದ RCB Out : ಫೈನಲ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

acid attack victims health fluctuates in icu again

RELATED ARTICLES

Most Popular