smoke like KGF’s Yash : ಕೆಜಿಎಫ್​ 2 ಸಿನಿಮಾದಿಂದ ಪ್ರೇರಣೆ:1 ಪ್ಯಾಕ್​ ಸಿಗರೇಟ್​ ಸೇದಿ ಆಸ್ಪತ್ರೆ ಸೇರಿದ ಬಾಲಕ

ಹೈದರಾಬಾದ್​ : smoke like KGF’s Yash : ಮೊಟ್ಟ ಮೊದಲ ಬಾರಿಗೆ ಒಂದು ಪ್ಯಾಕ್​ ಸಿಗರೇಟ್​ ಸೇದಿದ ಹೈದರಬಾದ್​ನ 15 ವರ್ಷದ ಬಾಲಕ ತೀವ್ರ ಕೆಮ್ಮು ಹಾಗೂ ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ವರದಿಯಾಗಿದೆ. ವೈದ್ಯರು ಹಾಗೂ ಪೋಷಕರ ಎದುರು ಈ ಬಾಲಕ ತಾನು ಕೆಜಿಎಫ್​ 2 ಸಿನಿಮಾದಲ್ಲಿ ರಾಕಿ ಭಾಯ್​ ಸಿಗರೇಟ್​ ಸೇದಿದ ಸೀನ್​ಗಳಿಂದ ಪ್ರೇರಣೆ ಪಡೆದು ಸಿಗರೇಟ್​ ಸೇದಲು ಆರಂಭಿಸಿದೆ ಎಂದು ಹೇಳಿದ್ದಾನೆ.


ಹೈದರಾಬಾದ್​ನ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಹೆಲ್ತ್​ಕೇರ್​​ ಪ್ರೊವೈಡರ್​ ಆಗಿರುವ ಸೆಂಚುರಿ ಆಸ್ಪತ್ರೆಯ ವೈದ್ಯರು ಕೆಜಿಎಫ್​ 2 ಸಿನಿಮಾದಲ್ಲಿ ರಾಕಿ ಭಾಯ್​ ಪಾತ್ರದಿಂದ ಪ್ರೇರಣೆ ಪಡೆದು ಸಿಗರೇಟ್​ ಸೇದಿ ಅಸ್ವಸ್ಥನಾದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಒಂದೇ ಸಮನೆ ಬಾಲಕ ಅತಿಯಾಗಿ ಸಿಗರೇಟ್​ ಸೇವನೆ ಮಾಡಿದ್ದರಿಂದ ಆತನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು ಎಂದು ವೈದ್ಯರು ಹೇಳಿದ್ದಾರೆ.

ಹೈದರಾಬಾದ್​ನ ರಾಜೇಂದ್ರ ನಗರ ನಿವಾಸಿಯಾಗಿರುವ 15 ವರ್ಷದ ಬಾಲಕ ಎರಡು ದಿನಗಳಲ್ಲಿ ಮೂರು ಬಾರಿ ಕೆಜಿಎಫ್​ 2 ಸಿನಿಮಾವನ್ನು ವೀಕ್ಷಣೆ ಮಾಡಿದ್ದ. ಈ ಸಿನಿಮಾದಲ್ಲಿ ನಟ ಯಶ್​ ಪಾತ್ರದಿಂದ ಪ್ರೇರಣೆ ಪಡೆದ ಈತ 1 ಪ್ಯಾಕ್​ ಸಿಗರೇಟ್​ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಹಾಗೂ ಅದನ್ನು ರಾಕಿ ಭಾಯ್​ ಸ್ಟೈಲ್​ನಲ್ಲಿ ಸೇದಿದ್ದಾನೆ. ಬಾಲಕನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದಂತೆಯೇ ಪೋಷಕರು ಈತನನ್ನು ಸೆಂಚುರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.


ಬಾಲಕನ ಕೈ ಬೆರಳುಗಳಲ್ಲಿ ಸಿಗರೇಟ್​ ಸೇದಿದ ಗುರುತು ಪತ್ತೆಯಾದ ಬಳಿಕ ಆತನನ್ನು ಕೌನ್ಸೆಲಿಂಗ್​ಗೆ ಒಳಪಡಿಸಿದ ವೇಳೆಯಲ್ಲಿ ಬಾಲಕ ತಾನು ಕೆಜಿಎಫ್​ 2 ಸಿನಿಮಾದಲ್ಲಿ ರಾಕಿಭಾಯ್​ ಪಾತ್ರದಿಂದ ಪ್ರೇರಿತನಾಗಿ ಒಂದು ಪ್ಯಾಕ್​ ಸಿಗರೇಟ್​ ಸೇದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.


ಈ ಪ್ರಕರಣದ ಕುರಿತು ಮಾತನಾಡಿದ ಸೆಂಚುರಿ ಆಸ್ಪತ್ರೆಯ ಶ್ವಾಸಕೋಶತಜ್ಞ ಡಾ. ರೋಹಿತ್​ ರೆಡ್ಡಿ ಪಥೂರಿ, ಹದಿಹರೆಯದ ಮಕ್ಕಳು ರಾಕಿ ಭಾಯ್​ನಂತಹ ಪಾತ್ರಗಳಿಂದ ಬಹುಬೇಗ ಪ್ರೇರಣೆ ಪಡೆಯುತ್ತಾರೆ. ಚಲನಚಿತ್ರಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಹೀಗಾಗಿ ಚಲನಚಿತ್ರ ತಯಾರಕರು ನೈತಿಕ ಜವಾಬ್ದಾರಿಯನ್ನು ಹೊತ್ತು ಇಂತಹ ದೃಶ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು .

ಇದನ್ನು ಓದಿ : IPL 2022 ನಿಂದ RCB Out : ಫೈನಲ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್‌

15-year-old boy hospitalised after trying to smoke like KGF’s Yash aka Rocky Bhai

Comments are closed.