ಪೊಲೀಸ್, ನಮ್ಮ ದೇಶದ ರಕ್ಷಣೆ ಮಾಡೋಕೆ ಅಂತಾನೆ ಇರುವ ಒಂದು ಅಂಗ. ಯಾವುದೇ ಸಮಸ್ಯೆ ಆದ್ರೂನೂ ನಮ್ಮನ್ನು ರಕ್ಷಿಸು ತ್ತಾರೆ ಅನ್ನೋ ಭಾವನೆ ನಮ್ಮಲ್ಲಿದೆ. ಕೊಲೆ ಸುಲಿಗೆಯಿಂದ ಹಿಡಿದು ಪ್ಯಾಮಿಲಿ ಪ್ರಾಬ್ಲೆಮ್ ಆದ್ರೂನೂ ನಾವು ಹೋಗೋದು ಪೊಲೀಸ್ ಹತ್ರನೇ. ಆದ್ರೆ ಅವರೇ ತಪ್ಪು ಮಾಡಿದ್ರೆ. ಇಲ್ಲೊಪ್ಪ ಪೋಲೀಸ್ ಮಾಡಬಾರದ ಕೆಲಸ ಮಾಡಿ ಕೆಲಸ ಕಳೆದುಕೊಂಡಿದ್ದಾನೆ.

ಹೀಗೆ ಕೆಲಸ ಕಳೆದುಕೊಂಡವರು ಕೇವಲ ಸಾಧರಣ ಪೋಲೀಸ್ ಅಲ್ಲ ಬದಲಾಗಿ ಎಡಿಜಿಪಿ . ಮಧ್ಯಪ್ರದೇಶದ ಎಡಿಜಿ ಯಾಗಿದ್ದ ಪುರುಶೋತ್ತಮ ಶರ್ಮ ತಮ್ಮ ಪತ್ನಿಗೆ ಥಳಿಸಿದ ಆರೋಪದಲ್ಲಿ ಈಗ ಕೆಲಸ ಕಳೆದುಕೊಂಡಿದ್ದಾರೆ.

ಪುರುಶೋತ್ತಮ ಶರ್ಮ ತಮ್ಮ ಭೂಪಾಲ್ ನಿವಾಸದಲ್ಲಿ ಪತ್ನಿಗೆ ಥಳಿಸಿದ್ದಾರೆ . ಅದು ಅಲ್ಲೇ ಇದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಮಧ್ಯಪ್ರದೇಶ ಸರ್ಕಾರ ಪುರುಶೋತ್ತಮ ಶರ್ಮರನ್ನು ಕೆಲಸದಿಂದ ತೆಗೆದು ಹಾಕಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರೋ ಪುರುಶೋತ್ತಮ ಶರ್ಮ ತಮಗೆ ಮದುವೆಯಾಗಿ 32 ವರ್ಷಗಳಾಗಿದೆ. 2008 ರಲ್ಲಿ ಪತ್ನಿ ನನ್ನ ವಿರುದ್ದ ದೂರು ನೀಡಿದ್ರು . ಅದರ ನಂತವೂ ಆಕೆ ನನ್ನೊಂದಿಗಿದ್ದಾಳೆ. ಜೊತೆಗೆ ನನ್ನ ಸವಲತ್ತುಗಳನ್ನು ಬಳಸುತ್ತಿದ್ದಾಳೆ. ಮತ್ತು ಸ್ವತಹ ತನ್ನನ್ನು ಅಪರಾಧಿಯಾಗಿಸಲು ಪತ್ನಿ ಮನೆಯಲ್ಲಿ ಕ್ಯಾಮರಾ ಇರಿಸಿದ್ದಳು ಅಂತ ಆರೋಪಿಸಿದ್ದಾರೆ .

ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಪುರುಶೋತ್ತಮ ಶರ್ಮ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿದೆ. ಉನ್ನತ ಹುದ್ದೆಯಲ್ಲಿದ್ದು ಈ ರೀತಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸೋದು ಎಷ್ಟು ಸರಿ ಅಂತ ಛೀಮಾರಿ ಹಾಕ್ತಿದ್ದಾರೆ.