ಸೋಮವಾರ, ಏಪ್ರಿಲ್ 28, 2025
HomeCrimeಚಲಿಸುತ್ತಿದ್ದ ಟ್ರಕ್‌ಗಳ ಮೇಲೆ DNNA ಉಗ್ರರ ಗುಂಡಿನ ದಾಳಿ ! ಐವರು ಸ್ಥಳದಲ್ಲೇ ಸಾವು, ಓರ್ವ...

ಚಲಿಸುತ್ತಿದ್ದ ಟ್ರಕ್‌ಗಳ ಮೇಲೆ DNNA ಉಗ್ರರ ಗುಂಡಿನ ದಾಳಿ ! ಐವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

- Advertisement -

ಅಸ್ಸಾಂ : ಚಲಿಸುತ್ತಿದ್ದ ಹಲವು ಟ್ರಕ್ ಗಳ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾನೆ.

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಗುರುವಾರ ರಾತ್ರಿ 8.30ರ ಗಂಟೆಯ ಸುಮಾರಿಗೆ ಈ ದಾಳಿ ನಡೆದಿದೆ. ಗುಂಡಿನ ದಾಳಿ ಬಳಿಕ ಟ್ರಕ್ ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ ಡಿಎನ್ ಎಲ್ ಎ ಉಗ್ರರು ಗುಂಡಿನ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಉಗ್ರ ಸಂಘಟನೆಗಳಿಂದ ಮೂರನೇ ಬಾರಿ ಬಾಂಬ್ ಬ್ಲಾಸ್ಟ್‌ ; 40 ಕ್ಕೂ ಅಧಿಕ ಮಂದಿ ಸಾವು

ಗುಂಡಿನ ದಾಳಿಯಲ್ಲಿ ಟ್ರಕ್ ಚಾಲಕರು ಮತ್ತು ಕೆಲಸಗಾರರು ಸಾವನ್ನಪ್ಪಿರುವುದಾಗಿ ದಿಮಾ ಹಸಾವೊ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ಮಾಹಿತಿ ನೀಡಿದ್ದಾರೆ. ಸಿಮೆಂಟ್ ಕಾರ್ಖಾನೆ ಮಾಲೀಕರು ಡಿಎನ್ ಎಲ್ ಎ ಉಗ್ರರ ಹಣದ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳು ತೆರಳಿದ್ದು, ಉಗ್ರರ ಶೋಧ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Kabul Blast : ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಬಾರೀ ಸ್ಪೋಟ : ಆತ್ಮಾಹುತಿ ದಾಳಿ ಶಂಕೆ

RELATED ARTICLES

Most Popular