ಮಾವನ ಜೊತೆ ಪ್ರೀತಿಗೆ ಬಿದ್ದು ಓಡಿ ಹೋದ ಸೊಸೆ : 2 ವರ್ಷದ ನಂತರ ಮನೆಗೆ ಬಂದ ಜೋಡಿ, ಮಗ ಮಾಡಿದ್ದೇನು ಗೊತ್ತಾ!

ಉತ್ತರ ಪ್ರದೇಶ : ಪ್ರೀತಿ ಯಾವಾಗ, ಯಾರ ಜೊತೆ ಹುಟ್ಟುತ್ತೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಇಲ್ಲೊಬ್ಬ ಸೊಸೆಗೆ ಮಾವನೊಂದಿಗೆ ಪ್ರೇಮಾಂಕುರವಾಗಿದೆ. ಪತಿಗೆ ಸೋಡಾ ಚೀಟಿಕೊಟ್ಟು ಮಾವನೊಂದಿಗೆ ಓಡಿ ಹೋಗಿದ್ದಾಳೆ. ಇದೀಗ ಎರಡು ವರ್ಷದ ನಂತರ ಜೋಡಿ ಮಗುವಿನೊಂದಿಗೆ ಮನೆಗೆ ಬಂದಿದೆ.

ಉತ್ತರ ಪ್ರದೇಶದ ಬಡೌನ್‌ನ ಬಿಸೌಲಿ ಕೊತ್ವಾಲಿ ಪ್ರದೇಶದ ದಬ್ಬರಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ದೇವೆಂದ್ರ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆಯಾದ ಆರು ತಿಂಗಳ ಬಳಿಕ ಪತಿಯ ಜೊತೆಗೆ ಸಂಸಾರದಲ್ಲಿ ಬಿರುಕು ಮೂಡಿದೆ. ಇದೇ ಹೊತ್ತಲ್ಲೇ ಮಾವನ ಜೊತೆಗೆ ಮಹಿಳೆಗೆ ಪ್ರೇಮಾಂಕುರವಾಗಿದೆ.

ಪತಿಯ ಜೊತೆಗೆ ಒಂದಿಲ್ಲೊಂದು ಕಾರಣಕ್ಕೆ ಜಗಳವಾಗುತ್ತಿತ್ತು. ಇನ್ನೊಂದೆಡೆಯಲ್ಲಿ ಮಾವನ ಜೊತೆಗಿನ ಅತ್ಯಾಪ್ತತೆ ಹೆಚ್ಚುತ್ತಾ ಹೋಗಿತ್ತು. ನಂತರದಲ್ಲಿ ಪತಿಗೆ ವಿಚ್ಚೇಧನವನ್ನು ನೀಡಿದ್ದ ಮಹಿಳೆ ಮಾವನೊಂದಿಗೆ ಪರಾರಿಯಾಗಿದ್ದಾಳೆ. ಸುಮಾರು ಎರಡು ವರ್ಷಗಳ ಕಾಲ ಇಬ್ಬರ ಸುಳಿವೇ ಇಲ್ಲದಾಗಿತ್ತು. ಇತ್ತ ಪತಿ ಪತ್ನಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾನೆ.

ಆದರೆ ಎರಡು ವರ್ಷಗಳ ನಂತರ ದಂಪತಿ ಮಗುವಿನೊಂದಿಗೆ ಊರಿಗೆ ಬಂದಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ಇಬ್ಬರನ್ನೂ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಮಹಿಳೆ ಪತಿಯ ಜೊತೆಗೆ ಹೋಗುವುದಕ್ಕೆ ಒಪ್ಪಿಗೆ ನೀಡಲಿಲ್ಲ. ಸಾಲದಕ್ಕೆ ರಾಜಿ ಪಂಚಾಯಿತಿ ನಡೆಸಲಾಯಿತು. ನಂತರದಲ್ಲಿ ಮಹಿಳೆಯ ಇಚ್ಚೆಯಂತೆಯೇ ಮಾವನ ಜೊತೆಗೆ ಸಂಸಾರ ಮಾಡುವುದಕ್ಕೆ ಪಂಚಾಯಿತಿ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ನಂತರದಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ : ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತನ ಹೇಳಿದ್ದೇನು ಗೊತ್ತಾ ?

Comments are closed.