ಬೆಂಗಳೂರು : ಅಟ್ಟಿಕಾ ಕಂಪೆನಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಆ ಸಂಸ್ಥೆಗೆ ರಾಜೀನಾಮೆಯನ್ನು ನೀಡಿ 4 ವರ್ಷಗಳೇ ಕಳೆದಿದೆ. ಪೊಲೀಸರು ಮಾಹಿತಿಯ ಕೊರತೆಯಿಂದ ನನ್ನನ್ನು ಬಂಧಿಸಿದ್ದಾರೆ ಎಂದು ಅಟ್ಟಿಕಾ ಬಾಬು ಹೇಳಿದ್ದಾರೆ.

ಮಾದನಾಯಕನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿ 15 ಲಕ್ಷ ರೂಪಾಯಿಯ ಚಿನ್ನವನ್ನು ಅಟ್ಟಿಕಾ ಕಂಪೆನಿಗೆ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬುವನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದರು. ಇದೀಗ ಬಾಬು ಮಾದನಾಯಕಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ.

ನಾನು ಅಟ್ಟಿಕಾ ಸಂಸ್ಥೆಯಲ್ಲಿ ಇಲ್ಲಾ. ಪೊಲೀಸರು ಮಾಹಿತಿ ಕೊರತೆಯಿಂದ ನನ್ನನ್ನು ಬಂಧಿಸಿದ್ದರು. ಇದಕ್ಕೆ ಬೇಕಾದ ದಾಖಲೆಗಳನ್ನು ನಾನು ಪೊಲೀಸರಿಗೆ ನೀಡಿದ್ದೇನೆ. ನನ್ನ ಹೇಳಿಕೆಯನ್ನು ಪಡೆದು ವಾಪಾಸ್ ಕಳುಹಿಸಿದ್ದಾರೆ ಎಂದು ಬಾಬು ಹೇಳಿದ್ದಾರೆ.