ಇನ್ಮುಂದೆ ಇರಲ್ಲ ಅಂಕಪಟ್ಟಿ ಆಧಾರಿತ ಶಿಕ್ಷಣ : ಪ್ರಧಾನಿ ಮೋದಿ

0

ನವದೆಹಲಿ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯೇ ಸ್ವಾತಂತ್ರ್ಯವೇ ಇಲ್ಲವಾಗಿದೆ. ಪೋಷಕರಿಗೆ ಅಂಕಪಟ್ಟಿಯೇ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಆದರೆ ಇನ್ಮುಂದೆ ಇಂತಹ ಶಿಕ್ಷಣ ವ್ಯವಸ್ಥೆ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ದೇಶದಾದ್ಯಂತ ಜಾರಿಗೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ , 21ನೇ ಶತಮಾನದಲ್ಲಿ ಶಾಲಾ ಶಿಕ್ಷಣ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಜ್ಞಾನಿ, ಕಲೆ, ವಾಣಿಜ್ಯ ವಿಭಾಗಗಳೆಂಬ ಪರಿದಿಯೊಳಗೆ ವಿದ್ಯಾರ್ಥಿಗಳು ಸಲುಕಿದ್ದಾರೆ.

ಇಂದಿನ ಶಿಕ್ಷಣ ವ್ಯವಸ್ಥೆ ಅಂಕಗಳ ಮೇಲಷ್ಟೇ ಗಮನ ಹರಿಸುತ್ತಿದೆ. ಅದ್ರಲ್ಲೂ ಪೋಷಕರಿಗೆ ಮಕ್ಕಳ ಅಂಕಪಟ್ಟಿಯೇ ಪ್ರತಿಷ್ಠೆಯ ಸಂಕೇತವಾಗಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಓದಿಗಾಗಿ-ಕಲಿಕೆ, ಕಲಿಕೆಗಾಗಿ ಓದು ಎಂಬ ಉದ್ದೇಶ ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಆಗಬೇಕು. ಸಾಕ್ಷರತೆಯ ಬುನಾದಿ ಭದ್ರವಾಗಬೇಕು ಎಂದಿದ್ದಾರೆ.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ನಾಲ್ಕು ಗೋಡೆಗಳ ನಡುವಿನ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇದು ಸರಿಯಾದ ಶಿಕ್ಷಣ ಕ್ರಮವಲ್ಲ. ಬದಲಾಗಿ ಗೋಡೆಯಾಚೆಗಿನ ಪ್ರಪಂಚವನ್ನು ವಿದ್ಯಾರ್ಥಿಗಳು ನೋಡಬೇಕು. ಗಣಿತಶಾಸ್ತ್ರೀಯ ಮತ್ತು ವೈಜ್ಞಾನಿಕ ಯೋಚನೆಯನ್ನು ಬೆಳೆಸುವ ಕೆಲಸ ನೂತನ ಶಿಕ್ಷಣ ನೀತಿಯಲ್ಲಾಗಬೇಕಿದೆ. ಪೂರ್ವ ತರಗತಿ ಮನೆಯಿಂದ ಹೊರಗಿನ ಅನುಭವ ಪಡೆದುಕೊಳ್ಳಲು ಮಕ್ಕಳಿಗೆ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು.

ನಾಲ್ಕೈದು ವರ್ಷಗಳಲ್ಲಿ ಶಿಕ್ಷಣ ನೀತಿಗೆ ಸಂಬಂಧಪಟ್ಟವರ ಸತತ ಪರಿಶ್ರಮ, ಅವಿರತ ಕಠಿಣ ಕೆಲಸದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇನ್ನೂ ಇದರ ಕೆಲಸ ಮುಗಿದಿಲ್ಲ. ಇದು ಕೇವಲ ಆರಂಭವಷ್ಟೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮಾರ್ಗ ನಮ್ಮ ಮುಂದಿದೆ ಎಂದಿದ್ದಾರೆ.

ವಿನೋದದ ಮೂಲಕ ಕಲಿಕೆ, ಚಟುವಟಿಕೆ ಮೂಲಕ ಕಲಿಕೆ ಮತ್ತು ಶೋಧನೆ ಮೂಲಕ ಒಂದು ಕೇಂದ್ರಿತವಾಗಿ ಮಕ್ಕಳು ಕಲಿಯಲು ಸಾಧ್ಯವಾಗುವುದು. ಇದನ್ನೆಲ್ಲವನ್ನೂ ಹೊಸ ಶಿಕ್ಷಣ ನೀತಿ ಕಲಿಸಿಕೊಡಲಿದೆ. ನೂತನ ಶಿಕ್ಷಣ ನೀತಿ ನವ ಭಾರತ ಉದಯಕ್ಕೆ ಬೀಜ ಬಿತ್ತಲಿದ್ದು 21ನೇ ಶತಮಾನಕ್ಕೆ ಹೊಸ ದಿಕ್ಕು ನೀಡಬೇಕು.

ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನ ಪ್ರವೃತ್ತಿ ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ವಿದ್ಯಾರ್ಥಿಗಳು 21ನೇ ಶತಮಾನದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

Leave A Reply

Your email address will not be published.