ಬೆಂಗಳೂರು : (Bangalore Crime News) ಹೊತ್ತು ಹೆತ್ತು ಸಾಕಿ ಸಲುಹಿತ ವೃದ್ಧ ತಾಯಿಯನ್ನು 39 ವರ್ಷದ ಮಗಳೊಬ್ಬಳು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
MICO ಲೇಔಟ್ ಪೊಲೀಸರ ಪ್ರಕಾರ, ಬಿಳೇಕಹಳ್ಳಿ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಸೆನಾಲಿ ಸೇನ್ ಎಂಬ ಆರೋಪಿಯು ತನ್ನ 70 ವರ್ಷದ ತಾಯಿ ಬೀವಾ ಪಾಲ್‌ನನ್ನು ಕೋಪದ ಭರದಲ್ಲಿ ಕೊಂದಿದ್ದಾಳೆ. ಆರೋಪಿ ಸೆನಾಲಿ ಸೇನ್ ತನ್ನ ಅಪರಾಧವನ್ನು ಪೊಲೀಸ್ ಎದರು ಒಪ್ಪಿಕೊಂಡಿದ್ದಾಳೆ.
ಕೊಲೆ ಮಾಡಿದ ನಂತರ ಆರೋಪಿ ಮಗಳು ತನ್ನ ತಾಯಿಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಠಾಣೆಗೆ ಬಂದಿದ್ದಾಳೆ. ಅಲ್ಲಿ ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮೃತದೇಹವನ್ನು ನಿನ್ನೆ ಪೊಲೀಸ್ ಠಾಣೆಗೆ ತರಲಾಗಿದ್ದು, ಮಗಳು ಸೆನಾಲಿ ಸೇನ್ (39) ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು MICO ಲೇಔಟ್ ಪೊಲೀಸರು ತಿಳಿಸಿದ್ದಾರೆ.
#WATCH | Karnataka | Case registered against a 39-year-old woman, Senali Sen for allegedly killing her mother and stuffing her body in a trolley bag. The incident occurred at a residential apartment in Bengaluru.
— ANI (@ANI) June 13, 2023
MICO layout Police say, "Body was brought to the Police Station… pic.twitter.com/pzlry6WB0M
ಇದನ್ನೂ ಓದಿ : Janardhana Reddy couple : ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ : ಮತ್ತೆ ಸಂಕಷ್ಟದಲ್ಲಿ ಜನಾರ್ದನ ರೆಡ್ಡಿ ದಂಪತಿ
ಸೆನಾಲಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ವೇಳೆ ಜಗಳದ ವೇಳೆ ಆಕೆಯ ತಾಯಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಕೋಪದ ಭರದಲ್ಲಿ ಸೋನಾಲಿ ತನ್ನ ತಾಯಿಗೆ 20 ನಿದ್ರೆ ಮಾತ್ರೆಗಳನ್ನು ತಿನ್ನಿಸಿದ್ದಾರೆ. ಸ್ವಲ್ಪ ಸಮಯದ ನಂತರ ತಾಯಿ ಹೊಟ್ಟೆ ನೋವಿನಿಂದ ಕಿರುಚಲು ಪ್ರಾರಂಭಿಸಿದಾಗ, ಸೆನಾಲಿ ಕೋಪಗೊಂಡು ತಾಯಿಯ ಕತ್ತು ಹಿಸುಕಿ ಸಾಯಿಸಿದ್ದಾಳೆ. ಸೆನಾಲಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Bangalore Crime News : The daughter who killed her mother and stuffed her body in a suitcase filed a complaint with the police