ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ಸ್ ದೊರಕಿದೆ. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೊಂದೆಡೆಯಲ್ಲಿ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೀಗ ಸಂತ್ರಸ್ತ ಯುವತಿಯ ವಿರುದ್ದವೇ ಪ್ರಕರಣ ದಾಖಲಾಗಿದೆ.

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದ ಯುವತಿ ತನ್ನ ಸ್ನೇಹಿತರ ಜೊತೆಗೆ ಮೊನ್ನೆ ಪಬ್‌ಗೆ ತೆರಳಿದ್ದಳು. ಪಬ್‌ನಿಂದ ವಾಪಾಸಾಗುವ ವೇಳೆಯಲ್ಲಿ ಆಕೆ ಬೈಕ್ ಚಾಲಕನ ಬಳಿ ಡ್ರಾಪ್ ಕೇಳಿದ್ದಾಳೆ. ಆದರೆ ಬೈಕ್ ಚಾಲಕ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಕೋರಮಂಗಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿಯೇ ಅತ್ಯಾಚಾರದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆಯಲ್ಲಿ ಯುವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅತ್ಯಾಚಾರದ ಆರೋಪಿ ಕುಡಿದ ಮತ್ತಿನಲ್ಲಿ ಈ ಕೃತ್ಯವನ್ನು ಎಸಗಿದ್ದಾನೆ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆದ್ರೀಗ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಯುವತಿಯ ವಿರುದ್ದವೇ ದಾಖಲಾಯ್ತು ಪ್ರಕರಣ
ಕೋರಮಂಗಲದಲ್ಲಿ ನಡೆದಿದ್ದ ಅತ್ಯಾಚಾರ ಸಂತ್ರಸ್ತೆಯ ವಿರುದ್ದವೇ ಇದೀಗ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಆ ದಿನ ನಡೆದಿದ್ದೇನು ಅಂತಾ ನೋಡೋದಾದ್ರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದ ಯುವತಿ ತನ್ನ ಸ್ನೇಹಿತ ಜೊತೆಗೆ ಪಬ್‌ಗೆ ತೆರಳಿದ್ದಳು. ಆದರೆ ಕಾರಿನಲ್ಲಿ ಯುವತಿ ತೆರಳುತ್ತಿದ್ದ ವೇಳೆ, ಮಂಗಳ ಸರ್ಕಲ್ ಬಳಿಯಲ್ಲಿ ಎರಡು ರಿಕ್ಷಾ ಹಾಗೂ ಒಂದು ಬೈಕ್‌ಗೆ ಆಕೆಯ ಕಾರು ಢಿಕ್ಕಿ ಹೊಡೆದಿತ್ತು.
ಇದನ್ನೂ ಓದಿ : Jio offer : ರಿಲಯನ್ಸ್ ಜಿಯೋ ಬಂಪರ್ ಆಫರ್ : ಕೇವಲ ರೂ 75 ಅನ್‌ಲಿಮಿಟೆಡ್ ರಿಚಾರ್ಜ್
ಆಕೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಆದರೆ ರಿಕ್ಷಾ ಚಾಲಕರು ಕಾರನ್ನು ಅಡ್ಡತಟ್ಟಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಅತ್ಯಾಚಾರದ ಸಂತ್ರಸ್ತೆ ರಿಕ್ಷಾದಲ್ಲಿ ಪಬ್‌ಗೆ ತೆರಳಿದ್ದಳು. ಪಬ್‌ನಲ್ಲಿ ಪಾರ್ಟಿ ಮುಗಿಸಿ ಹೊರಬಂದ ಯುವತಿ ಮೊಬೈಲ್ ಬಿಟ್ಟು ಬಂದಿದ್ದೇನೆ ಅಂತಾ ಮತ್ತೆ ಪಬ್‌ಗೆ ತೆರಳಿದ್ದಳು.

ಪಬ್ ಹೊರಗೆ ಬಂದು ನೋಡಿದಾಗ ಅಲ್ಲಿ ಆಕೆಯ ಸ್ನೇಹಿತ ಇರಲಿಲ್ಲ. ಸ್ನೇಹಿತ ಈಕೆಗಾಗಿ ಹುಡುಕಾಟ ನಡೆಸಿ ಮನೆಗೆ ತೆರಳಿದ್ದ. ನಂತರ ಸಂತ್ರಸ್ತೆ ಅಪರಿಚಿತ ವ್ಯಕ್ತಿಯ ಬಳಿಯಲ್ಲಿ ಬೈಕ್‌ನಲ್ಲಿ ಡ್ರಾಪ್ ಕೇಳಿದ್ದಾಳೆ. ಆದರೆ ಆತ ಆಕೆಯನ್ನು ನಿರ್ಜನ ಸ್ಥಿತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದ ಕುರಿತು ಕೋರಮಂಗಲ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ಆದರೆ ಯುವತಿ ಅತ್ಯಾಚಾರಕ್ಕೆ ಮೊದಲು ಆಕೆ ನಡೆಸಿರುವ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ವಿರುದ್ದ ಇದೀಗ ಆಟೋ ಚಾಲಕರೋರ್ವರು ದೂರು ನೀಡಿದ್ದು, ಆಡುಗೋಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ಚೇತರಿಸಿಕೊಂಡ ನಂತರದಲ್ಲಿ ಆಕೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Bengaluru Rape Case File a case against the Koramangala rape case victim