Bhopal-Delhi Vande Bharat Express : ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲ್‌ನಲ್ಲಿ ಬೆಂಕಿ ಅವಘಡ

ಮಧ್ಯಪ್ರದೇಶ : ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಸಾಗುತ್ತಿದ್ದ (Bhopal-Delhi Vande Bharat Express) ರಾಣಿ ಕಮಲಾಪತಿ (ಭೋಪಾಲ್) – ಹಜರತ್ ನಿಜಾಮುದ್ದೀನ್ (ದೆಹಲಿ) ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ರೈಲಿನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ರೈಲನ್ನು ತಕ್ಷಣವೇ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ನಂತರ ರೈಲನ್ನು ಕುರ್ವೈ ಕೆಥೋರಾ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ಘಟನೆಯ ದೃಶ್ಯಗಳಲ್ಲಿ ರೈಲು ಇಂಜಿನ್‌ನಲ್ಲಿ ಬೆಂಕಿ ಹೊತ್ತಿ ಉರಿಯುವುದನ್ನು ಕಾಣಬಹುದು. ಕೆಲವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಇತರ ದೃಶ್ಯಗಳು ಕುರ್ವೈ ಕೆಥೋರಾ ನಿಲ್ದಾಣದಲ್ಲಿ ರೈಲಿನ ಹೊರಗೆ ಕಾಯುತ್ತಿರುವ ಪ್ರಯಾಣಿಕರನ್ನು ತೋರಿಸುತ್ತವೆ.

ಇದನ್ನೂ ಓದಿ : Crime News : ಬಸ್ ಕಂದಕಕ್ಕೆ ಬಿದ್ದು 12 ಸಾವು, 10 ಜನರಿಗೆ ಗಾಯ

ಇದನ್ನೂ ಓದಿ : Mumbai Crime : 5 ಬಾಲಕರು ನೀರಿನಲ್ಲಿ ಮುಳುಗಿ ಸಾವು, ಮೂವರು ನಾಪತ್ತೆ

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯಗಳು ವರದಿಯಾಗಿಲ್ಲ. ಬೆಂಕಿಯು ಬ್ಯಾಟರಿ ಬಾಕ್ಸ್‌ಗೆ ಮಾತ್ರ ಸೀಮಿತವಾಗಿದೆ. ಪರೀಕ್ಷೆಯ ನಂತರ ರೈಲನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಭಾರತೀಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.

Bhopal-Delhi Vande Bharat Express : Fire accident in Vande Bharat Express train

Comments are closed.