ಮಂಡ್ಯ : ಆತ ದೇವರ ದರ್ಶನಕ್ಕೆಂದು ಬಂದಿದ್ದ. ದೇವರ ದರ್ಶನಕ್ಕೆ ಮುನ್ನ ಹೇಮಾವತಿ ಬಲದಂಡೆ ನಾಲೆಯಲ್ಲಿ ಸ್ನಾನಕ್ಕೆ ಇಳಿದಿದ್ದಾನೆ. ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಣೆಗೆ ಇಳಿದ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೈಸೂರು ಮೂಲದ ರವಿ, ಯೋಗೀಶ್ ಹಾಗೂ ಸೀನೂ ಎಂಬವರೇ ಮೃತ ದುರ್ದೈವಿಗಳಾಗಿದ್ದಾರೆ. ಮೈಸೂರಿನಿಂದ ಎಂಟು ಮಂದಿ ಸ್ನೇಹಿತರು ದೇವರ ದರ್ಶನಕ್ಕೆಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆಯಲ್ಲಿ ಹೇಮಾವತಿ ಬಲದಂಡೆ ನಾಲೆಯಲ್ಲಿ ಈಜಲು ಇಳಿದಿದ್ದಾರೆ. ಆದರೆ ಈ ಪೈಕಿ ರವಿ ಎಂಬಾತ ನೀರಿನಲ್ಲಿ ಮುಳುಗಡೆಯಾಗಿದ್ದಾನೆ. ಇದನ್ನು ಅರಿತು ಅಲ್ಲಿಯೇ ಇದ್ದ ಯೋಗೀಶ್ ಕೂಡ ನೀರುಪಾಲಾಗಿದ್ದಾನೆ. ನಂತರದಲ್ಲಿ ಇಬ್ಬರ ರಕ್ಷಣೆಗೆ ಇಳಿದ ನೀನೂ ಸೇರಿ ಮೂವರು ನೀರಿನಲ್ಲಿ ಮಳುಗಡೆಯಾಗಿದ್ದಾರೆ.
ಮೂವರು ಸ್ನೇಹಿತರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಕುರಿತು ಕೆ.ಆರ್.ಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಆತ್ಮಹತ್ಯೆಗೆಂದು ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡ : ಮುಂದೇನಾಯ್ತು ಗೊತ್ತಾ !
ಇದನ್ನೂ ಓದಿ : ಪಾಗಲ್ ಪ್ರೇಮಿಯ ಅವಾಂತರಕ್ಕೆ ಬಲಿಯಾಯ್ತು ಜೀವ: ಪ್ರೀತಿ ವಿರೋಧಿಸಿದ್ದಕ್ಕೆ ಬಿತ್ತು ಹುಡುಗಿ ತಂದೆ ಹೆಣ