- Advertisement -
ಮಂಗಳೂರು : ಬೈಕ್ ಸವಾರನೊಬ್ಬನಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಮೇತ ಸಜೀವ ದಹನಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಪಂಜ ವ್ಯಾಪ್ತಿಯ ನಿಂತಿಕಲ್ಲಿನ ಕಲ್ಲೇರಿ ಗುಳಿಗನಕಟ್ಟೆ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಇನ್ಸುಲೇಟರ್ ಕಳಚಿ ಬಂದ ಹಿನ್ನೆಲೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೂಲತಃ ಸುಳ್ಯ ತಾಲೂಕಿನ ಯುವಕ ಎಂದು ಹೇಳಲಾಗುತ್ತಿದ್ದು, ಬೆಳಗಿನ ಜಾವ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.