BMTC conductor burnt alive: BMTC ಬಸ್ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು : (BMTC conductor burnt alive) ಬಿಎಂಟಿಸಿ ಬಸ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಂಡಕ್ಟರ್‌ ಬಸ್‌ ನಲ್ಲಿಯೇ ಸಜೀವ ದಹನವಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗಳು ನಡೆದಿದ್ದು, ತನಿಖೆಯ ವೇಳೆ ಕಂಡಕ್ಟರ್‌ ಸಜೀವ ದಹನಕ್ಕೆ ಟ್ವಿಸ್ಟ್‌ ಒಂದು ದೊರೆತಿದೆ. ಗದಗ ಜಿಲ್ಲೆಯ ಹಾಲೂರಿನ ಮುತ್ತಯ್ಯಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ತನಿಖೆಯ ವೇಳೆ ವ್ಯಕ್ತವಾಗಿದೆ.

ಪ್ರಾಥಮಿಕ ತನಿಖೆಯ ವೇಳೆ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಬಸ್‌ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ತನಿಖೆಯ ಬಳಿಕ ಒಂದೊಂದೆ ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಮೊದಲಿಗೆ ಬಸ್‌ ಚಾಲಕನ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು. ಅವಘಡ ನಡೆದ ದಿನ ಕೊಠಡಿಯಲ್ಲಿ ಮಲಗಿದ್ದ ಡ್ರೈವರ್ ಪ್ರಕಾಶ್ ಮುಂಜಾನೆ 3 ಗಂಟೆ ಹಾಗೂ 4 ಗಂಟೆಗೊಮ್ಮೆ ಎದ್ದಿರೋದು ಬಸ್ ನಿಲ್ದಾಣದಲ್ಲಿರೋ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಗೊತ್ತಾಗಿದೆ. ಹೀಗಾಗಿ ಬಸ್‌ ನ ಚಾಲಕ ಪ್ರಕಾಶ್‌ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ ಪೊಲೀಸರಿಗೆ ದಿನಕ್ಕೊಂದು ಅನುಮಾನಗಳು ವ್ಯಕ್ತವಾಗುತ್ತಿದೆ. ಇದೀಗ ತನಿಖೆಯ ವೇಳೆ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದ್ದು, ಬಸ್‌ ನ ಕಂಡಕ್ಟರ್‌ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಮಾರ್ಗ ಸಂಖ್ಯೆ- 243/1, ಬಸ್‌ ರಾತ್ರಿ ರೂಟ್​ ಮುಗಿಸಿ ಲಿಂಗದೀರನಹಳ್ಳಿ ಬಸ್​ ನಿಲ್ದಾಣದಲ್ಲಿ ನಿಂತಿತ್ತು. ನಿಂತಿದ್ದ ಬಸ್‌ ನಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದು, ಮಲಗಿದ್ದ ಮುತ್ತಯ್ಯಸ್ವಾಮಿ ಬಸ್ಸಿನಲ್ಲಿ ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ದಾವಿಸಿದ ಪೊಲೀಸರು ತನಿಖೆಗಿಳಿದಿದ್ದು, ತನಿಖೆಯ ವೇಳೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಮೊದಲಿಗೆ ಡ್ರೈವರ್‌ ನ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದರೂ ಕೂಡ, ಮತ್ತಷ್ಟು ತನಿಖೆಯ ವೇಳೆ ಕಂಡಕ್ಟರ್‌ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : BMTC ಬಸ್‌ನಲ್ಲಿ ಅಗ್ನಿ ದುರಂತ, ಕಂಡಕ್ಟರ್‌ ಸಜೀವ ದಹನ

ಇದನ್ನೂ ಓದಿ : Bengaluru Police: ದೂರುದಾರರ ಜೊತೆಗೆ ಚೆಲ್ಲಾಟ, ಬೆಂಗಳೂರು ಪೊಲೀಸರಿಗೆ ಸಂಕಷ್ಟ

ಇದನ್ನೂ ಓದಿ : ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

BMTC conductor burnt alive: A twist to the BMTC bus conductor burnt alive case

Comments are closed.