ಸೋಮವಾರ, ಏಪ್ರಿಲ್ 28, 2025
HomeCrimeBMW Car Accident Live : ಬಿಎಂಡಬ್ಲ್ಯು ಕಾರಲ್ಲಿ 230 kM ವೇಗದ ಡ್ರೈವಿಂಗ್, ವಿಡಿಯೋ...

BMW Car Accident Live : ಬಿಎಂಡಬ್ಲ್ಯು ಕಾರಲ್ಲಿ 230 kM ವೇಗದ ಡ್ರೈವಿಂಗ್, ವಿಡಿಯೋ ಹುಚ್ಚಿಗೆ 4 ಬಲಿ

- Advertisement -

ಲಕ್ನೋ:(BMW Car Accident Live) ಬಿಎಂಡಬ್ಲ್ಯು ಕಾರನ್ನು ಬರೋಬ್ಬರಿ 230 ಕಿ.ಮೀ. ವೇಗವಾಗಿ ಚಲಾಯಿಸುತ್ತಾ, ವಿಡಿಯೋ ಮಾಡುವ ಹುಚ್ಚಿಗೆ ನಾಲ್ವರು ಯುವಕರು ದುರಂತ ಅಂತ್ಯ ಕಂಡಿರುವ ಘಟನೆ ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ. ವಿಡಿಯೋ ಮಾಡುವ ಕಾರಣಕ್ಕೆ ಕಾರಿನ ವೇಗವನ್ನು ಹೆಚ್ಚಿಸಿದ್ದಾರೆ. ಕಾರಿನ ವೇಗ ಗಂಟೆಗೆ 230 ಕಿ.ಮೀ. ತಲುಪುತ್ತಿದ್ದಂತೆಯೇ ಕಾರು ಚಾಲಕ ನಿಯಂತ್ರಣ ತಪ್ಪಿ, ಎದುರಿನಿಂದ ಸಾಗುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

(BMW Car Accident Live)ದುರಂತದಲ್ಲಿ ಮೃತಪಟ್ಟವರನ್ನು ಬಿಹಾರದ ರೋಹ್ಟಾಸನ್‌ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾದ ಆನಂದ್‌ ಪ್ರಕಾಶ್‌ , ಅಖಿಲೇಶ್‌ ಸಿಂಗ್‌, ಬಿಹಾರದ ಔರಂಗಬಾದ್‌ ನ ಇಂಜಿನಿಯರ್‌ ದೀಪಕ್‌ ಕುಮಾರ್‌ ಮತ್ತು ಉದ್ಯಮಿ ಮುಕೇಶ್‌ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಪ್ರಕಾಶ್ ಕಾರನ್ನು ವೇಗವಾಗಿ ಚಲಿಸುತ್ತೇನೆ, ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದಿರುವ ವಿಡಿಯೋ ಇದೀಗ ರೆಕಾರ್ಡ್ ಆಗಿದ್ದು, ಕಾರು ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಬಿಎಂಡಬ್ಲ್ಯು ಐಶಾರಾಮಿ ಕಾರಿನಲ್ಲಿದ್ದ ನಾಲ್ವರು ಕೂಡ ವೇಗ ಡ್ರೈವಿಂಗ್ ರೆಕಾರ್ಡ್ ಮಾಡುವ ಉದ್ದೇಶ ಹೊಂದಿದ್ದರು ಅನ್ನೋದು ಬಯಲಾಗಿದೆ. ಕಾರು ಚಾಲಕ ವೇಗವನ್ನು ಹೆಚ್ಚಿಸುತ್ತಿದ್ದಂತೆಯೇ ಇನ್ನಷ್ಟು ವೇಗವಾಗಿ ಚಲಾಯಿಸುವಂತೆ ಕಾರಿನಲ್ಲಿದ್ದವರು ಪ್ರಚೋದನೆ ನೀಡಿದ್ದರು. ವೇಗವಾಗಿ ಕಾರು ಚಲಾಯಿಸುತ್ತಿದ್ದಂತೆಯೇ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ವ್ಯಕ್ತಿ ವಿಡಿಯೋವನ್ನು ಲೈವ್ ಸ್ಟ್ರೀಮ್ ಮಾಡಿದ್ದಾನೆ. ಗಂಟೆಗೆ 300 ಕಿಲೋಮೀಟರ್‌ ವೇಗದಲ್ಲಿ ಸಾಗುವ ಉದ್ದೇಶ ಹೊಂದಿದ್ದರು. ಆದರೆ ಗಂಟೆಗೆ 230 ಕಿಲೋಮೀಟರ್‌ ತಲುಪುವಷ್ಟರಲ್ಲಿಯೇ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ:Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು

ಇದನ್ನೂ ಓದಿ:Bangalore Traffic Police : ಬೆಂಗಳೂರಲ್ಲಿ 500 ಕಡೆ ಹಂಪ್ಸ್ ನಿರ್ಮಾಣ : ಅಪಘಾತ ತಪ್ಪಿಸಲು ಸಂಚಾರಿ ಪೊಲೀಸರ್ ಪ್ಲ್ಯಾನ್

ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಚ್ಚುನುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಕೂಡ ಕಾರಿನಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಉತ್ತರ ಪ್ರದೇಶದ ಎಕ್ಸಪ್ರೆಸ್‌ ಇಂಡಸ್ಟ್ರಿಯಲ್‌ ಡೆವಲಪ್ ಮೆಂಟ್‌ ಅಥಾರಿಟಿ (UPEIDA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸದ್ಯ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

230 kM speed driving in BMW car, 4 victims of video madness

RELATED ARTICLES

Most Popular