Bangalore Traffic Police : ಬೆಂಗಳೂರಲ್ಲಿ 500 ಕಡೆ ಹಂಪ್ಸ್ ನಿರ್ಮಾಣ : ಅಪಘಾತ ತಪ್ಪಿಸಲು ಸಂಚಾರಿ ಪೊಲೀಸರ್ ಪ್ಲ್ಯಾನ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿಗೆ ಆಕ್ಸಿಡೆಂಟ್ ಸಿಟಿ ಎನ್ನಿಸುವಷ್ಟರ ಮಟ್ಟಿಗೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಡ್ರಿಂಕ್ ಆಂಡ್ ಡ್ರೈವ್ ನಿಂದ ಆರಂಭಿಸಿ ರಸ್ತೆಗುಂಡಿಯವರೆಗೆ ನಾನಾ ಕಾರಣಕ್ಕೆ ನಗರದ ರಸ್ತೆಗಳಲ್ಲಿ ಜನರು ಜೀವ ಚೆಲ್ಲುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಅಪಘಾತಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ (Bangalore Traffic Police) ಸಂಚಾರಿ ಪೊಲೀಸರು ವೇಗ ನಿಯಂತ್ರಕ ಅಥವಾ ಹಂಪ್ ಅಳವಡಿಕೆಗೆ ನಿರ್ಧರಿಸಿದ್ದು, ಈ ಬಗ್ಗೆ ನಗರಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ ಅಂದಾಜು 500 ಕ್ಕೂ ಹೆಚ್ಚು ಸ್ಥಳದಲ್ಲಿ ರೋಡ್ ಹಂಪ್ ನಿರ್ಮಿಸಲು ಪೊಲೀಸರು ಬಿಬಿಎಂಪಿ ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವೈಟ್‌ಫೀಲ್ಡ್, ಕೆಂಗೇರಿ, ಜಯನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂಪ್ಸ್ ನಿರ್ಮಿಸಲು ಬೇಡಿಕೆ ಸಲ್ಲಿಸಿರುವ ಪೊಲೀಸರು ಇದಕ್ಕಾಗಿ ಸಿದ್ಧತೆ ಕೂಡ ನಡೆಸಿದ್ದಾರೆ. ಈ ಬಗ್ಗೆ ನಗರದಲ್ಲಿ ಅಪಘಾತ ಹೆಚ್ಚು ಸಂಭವಿಸುವ 524 ಸ್ಥಳಗಳನ್ನು ಗುರುತಿಸಿರುವ ಸಂಚಾರಿ ಪೊಲೀಸರು (Bangalore Traffic Police) ರೋಡ್ ಹಂಪ್ ಅಳವಡಿಕೆ ಸೂಕ್ತ ಎಂದಿದ್ದು, ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಬಿಬಿಎಂಪಿ ಕೈ ಸೇರಿವೆ.

Bangalore Traffic Police : ಯಾವ ಯಾವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂಪ್ಸ್ ನಿರ್ಮಾಣ

  1. ವೈಟ್ ಫೀಲ್ಡ್ ಸಂಚಾರಿ ವ್ಯಾಪ್ತಿಯಲ್ಲಿ 49,
  2. ಜಯನಗರ – 47
  3. ಕೆಂಗೇರಿ – 44
  4. ಹುಳಿಮಾವು – 33
  5. ಆರ್.ಟಿ.ನಗರ – 32
  6. ಬಾನಸವಾಡಿ – 2
  7. ಹೂಡಿ – 22
  8. ಮಹದೇವರ ಹಾಗೂ ಜೆಪಿನಗರ ತಲಾ – 19
  9. ಹಲಸೂರು ಗೇಟ್, ಜಾಲಹಳ್ಳಿ – 17
  10. ರಾಜಾಜಿನಗರ – 16
  11. ಮಲ್ಲೇಶ್ವರ – 14
  12. ವಿವಿಪುರ – 12
  13. ದೇವನಹಳ್ಳಿ – 11
  14. ಯಶವಂತಪುರ – 10
  15. ವಾರ್ಡ್ ರಸ್ತೆಗಳಲ್ಲಿ – 9
  16. ಚಿಕ್ಕಪೇಟೆ – 8
  17. ಯಲಹಂಕ – 6
  18. ಹಲಸೂರು, ಮೈಕೋ ಲೇಔಟ್, ಪುಲಕೇಶಿನಗರ, ವಿಜಯನಗರ ಹಾಗೂ ಎಚ್‌.ಎಸ್. ಆರ್ ಲೇಔಟ್ – 4
  19. ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ 3
  20. ಚಿಕ್ಕಜಾಲ, ಎಚ್‌ಎಎಲ್, ಹೆಬ್ಬಾಳೆ, ಉಪ್ಪಾರು ಪೇಟೆ ಹಾಗೂ ವಿಲ್ಸನ್ ಗಾರ್ಡನ್ ತಲಾ – 2
  21. ಶಿವಾಜಿ ನಗರ, ಪೀಣ್ಯ, ಹೈಗೌಂಡ್ಸ್, ಕೆಆರ್‌ಪುರ ಹಾಗೂ ಹೂಡಿ ಪೊಲೀಸರು – 1
  22. ಈ ವೇಗ ನಿಯಂತ್ರಕಗಳ ಅಳವಡಿಕೆಗಾದರೂ ಬಿಬಿಎಂಪಿ ಮನಸ್ಸು ಮಾಡಿ ಜನರ ಜೀವ ಉಳಿಸುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ : BJP MOCK RAHUL : ‘ಖತಂ.. ಟಾ ಟಾ ಬೈ ಬೈ’ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಲೇವಡಿ ಮಾಡಿದ್ದು ಹೀಗೆ

ಇದನ್ನೂ ಓದಿ : Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು

ಇದನ್ನೂ ಓದಿ : The Halal Cut Controversy : ದೀಪಾವಳಿ ಹೊತ್ತಲೇ ಹಲಾಲ್ ಕಟ್ ವಿವಾದ : ಹಿಂದೂ ಸಂಘಟನೆಗಳಿಂದ ಜಾಗೃತಿ ಅಭಿಯಾನ

Construction of humps at 500 places in Bangalore: Traffic police plan to avoid accidents

Comments are closed.