Bomb blast target:‌ ಧರ್ಮಸ್ಥಳ ಮತ್ತು ಕೃಷ್ಣ ಮಠವನ್ನೂ ಟಾರ್ಗೆಟ್‌ ಮಾಡಿದ್ನಾ ಉಗ್ರ ಶಾರೀಖ್‌ ?

ಮಂಗಳೂರು: (Bomb blast target) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರು ಮಂಗಳೂರಿನ ಹಲವು ಪ್ರಸಿದ್ದ ಜನಜಂಗುಳಿ ಇರುವ ಪ್ರದೇಶಗಳನ್ನು ಟಾರ್ಗೆಟ್‌ ಮಾಡಿದ್ದರು. ಮಂಗಳೂರಿನ ಹಿಂದು ದೇವಾಲಯಗಳು, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣವನ್ನು ಟಾರ್ಗೆಟ್‌ ಮಾಡಿದ್ದರು. ಇದೀಗ ಉಗ್ರರ ಟಾರ್ಗೆಟ್‌ ಬಗ್ಗೆ ಇನ್ನೊಂದು ಭಯಾನಕ ಮಾಹಿತಿ ಹೊರಬಿದ್ದಿದೆ. ಉಗ್ರ ಶಾರೀಖ್‌ ಉಡುಪಿಯ ಪ್ರಸಿದ್ದ ದೇಗುಲವಾದ ಕೃಷ್ಣ ಮಠ ಹಾಗೂ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳವನ್ನು ಕೂಡ ಟಾರ್ಗೆಟ್‌ ಮಾಡಿದ್ನಾ ಅನ್ನೋ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇದೇ ಕಾರಣಕ್ಕೆ ಚಾರ್ಮಾಡಿ ತಪ್ಪಲಿನಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರಾ ಎನ್ನುವ ಸಂಶಯ ವ್ಯಕ್ತವಾಗಿದೆ.

ಉಗ್ರರು ಮಂಗಳೂರನ್ನು ಸ್ಮಶಾನವನ್ನಾಗಿ ಮಾಡಲು ದೊಡ್ಡ ಹುನ್ನಾರವನ್ನೇ ನಡೆಸಿದ್ದರು. ಇವರ ಹುನ್ನಾರಕ್ಕೆ ಮಂಗಳೂರಿನ ಪ್ರಸಿದ್ದ ಹಿಂದೂ ದೇವಾಲಯಗಳು, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳನ್ನು ಟಾರ್ಗೆಟ್‌ (Bomb blast target) ಮಾಡಿದ್ದರು ಎನ್ನುವ ಮಾಹಿತಿ ತಿಳಿದು ಬಂದಿತ್ತು.ಈ ಪ್ರದೇಶಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಜನದಟ್ಟಣೆಯಿಂದ ತುಂಬಿರುತ್ತದೆ.ಅದ್ದರಿಂದ ಹಿಂದೂ ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನೇ ಟಾರ್ಗೆಟ್‌ ಮಾಡಿದ್ದರು. ಇದೀಗ ಉಗ್ರರು ಟಾರ್ಗೆಟ್‌ ಮಾಡಿದ ಪ್ರದೇಶಕ್ಕೆ ಸಂಬಂಧಿಸಿದಂತೆ ಇನ್ನೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನಿಖೆಯ ವೇಳೆ ಉಗ್ರ ಶಾರೀಖ್‌ ಪ್ರಸಿದ್ದ ಧಾರ್ಮಿಕ ಸ್ಥಳವಾದ ಧರ್ಮಸ್ಥಳ ಹಾಗೂ ಉಡುಪಿಯ ಕೃಷ್ಣ ಮಠವನ್ನೂ ಕೂಡ ಟಾರ್ಗೆಟ್‌ ಮಾಡಿದ್ನಾ ಎನ್ನುವ ಬಗ್ಗೆ ಮಾಹಿತಿಗಳು ಹೊರಬೀಳುತ್ತಿವೆ.

ಧರ್ಮಸ್ಥಳವನ್ನೂ ಟಾರ್ಗೆಟ್‌ ಮಾಡಿದ್ದರಾ ಉಗ್ರರು..?

ಧರ್ಮಸ್ಥಳದಲ್ಲಿ ಈಗಾಗಲೇ ಲಕ್ಷದೀಪೋತ್ಸವ ನಡೆದಿತ್ತು. ಇದೇ ವೇಳೆ ಉಗ್ರರು ಧರ್ಮಸ್ಥಳದಲ್ಲಿ ದುಷ್ಕ್ರತ್ಯ ನಡೆಸಲು ಮುಂದಾಗಿದ್ದರಾ ಎನ್ನುವ ಸಂಶಯಗಳು ಕಾಡುತ್ತಿವೆ. ಧರ್ಮಸ್ಥಳ ಕೂಡ ದೇಶದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ದೇವಾಲಯ. ಇಲ್ಲಿಗೆ ಪ್ರತಿದಿನ ಬೇರೆ ಬೇರೆ ರಾಜ್ಯಗಳಿಂದ ಜನರು ಧಾವಿಸಿ ಬರುತ್ತಾರೆ. ಹಿಂದೂ ದೇವಾಲಯಗಳನ್ನೇ ಟಾರ್ಗೆಟ್‌ ಮಾಡಿದ್ದ ಶಾರೀಖ್‌ ಧರ್ಮಸ್ಥಳವನ್ನೂ ಟಾರ್ಗೆಟ್‌ ಮಾಡಿದ್ದ ಎನ್ನುವುದು ಶಾರೀಖ್‌ ನ ಮೊಬೈಲ್‌ ಮೂಲಕ ತಿಳಿದುಬಂದಿದೆ. ಲಕ್ಷ ದೀಪೋತ್ಸವದ ವೇಳೆ ಪ್ರತಿದಿನಕ್ಕಿಂತ ಹೆಚ್ಚು ಜನರು ಕ್ಷೇತ್ರಕ್ಕೆ ಬರುತ್ತಾರೆ. ಇದೇ ವೇಳೆಯಲ್ಲಿ ಬಾಂಬ್‌ ಬ್ಲಾಸ್ಟ್‌ ನಡೆಸಲು ಸಂಚು ರೂಪಿಸಿದ್ದ ಎನ್ನುವ ಬಗ್ಗೆ ಅಧಿಕಾರಿಗಳಿಗೆ ಅನುಮಾನಗಳು ಮೂಡಿವೆ.

ಕಷ್ಣಾನಗರಿಯನ್ನೂ ಟಾರ್ಗೆಟ್‌ ಮಾಡಿದ್ನಾ ಉಗ್ರ ಶಾರೀಖ್‌..?

ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೂ ಮೊದಲು ಉಗ್ರ ಶಾರೀಖ್‌ ಕೃಷ್ಣ ಮಠದ ರಥಬೀದಿಯಲ್ಲಿ ಸುತ್ತಾಟ ನಡೆಸಿದ್ದನು ಎನ್ನುವ ಮಾಹಿತಿ ಶಾರೀಖ್‌ ನ ಮೊಬೈಲ್‌ ಫೋನ್‌ ನಿಂದ ಪತ್ತೆಯಾಗಿದೆ. ಶಾರೀಕ್‌ ಮೊಬೈಲ್‌ ಫೋನ್ ಲೊಕೇಷನ್‌ ಪತ್ತೆ ಮಾಡಿದ ವೇಳೆಯಲ್ಲಿ ಶಾರೀಖ್‌ ಉಡುಪಿಯಲ್ಲೂ ಓಡಾಡಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ. ಹಾಗಿದ್ದರೆ ಉಗ್ರ ಶಾರೀಖ್‌ ಕೃಷ್ಣನಗರಿಯನ್ನು ಟಾರ್ಗೆಟ್‌ ಮಾಡಿದ್ನಾ ಎನ್ನುವ ಅನುಮಾನಗಳು ಹೆಚ್ಚಾಗಿದೆ.

ಇದನ್ನೂ ಓದಿ : ಮಂದಾರ್ತಿಯ ಮೇಲೂ ಉಗ್ರರ ಕಣ್ಣು : ಕಾಡಿನಲ್ಲಿ ರಿಂಗಣಿಸಿದ ಸ್ಯಾಟಲೈಟ್ ಪೋನ್ ?

ಇದನ್ನೂ ಓದಿ : Charmadi bomb blast:‌ ಮಂಗಳೂರು ಚಾರ್ಮಾಡಿಯಲ್ಲೂ ಬಾಂಬ್ ಬ್ಲಾಸ್ಟ್

ಏಳು ದಿನಗಳ ಹಿಂದೆ ಚಾರ್ಮಾಡಿಯ ತಪ್ಪಲಿನಲ್ಲಿ ಟ್ರಯಲ್‌ ಬಾಂಬ್‌ ಬ್ಲಾಸ್ಟ್‌ ನಡೆದಿತ್ತು ಎನ್ನುವ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿದೆ. ಧರ್ಮಸ್ಥಳ ಮತ್ತು ಕೃಷ್ಣಮಠದಲ್ಲಿ ಬ್ಲಾಸ್ಟ್‌ ನಡೆಸಲೆಂದೇ ಈ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರಾ..? ಇವೆಲ್ಲ ಪ್ರಶ್ನೆಗಳಿಗೆ ತನಿಖೆ ನಂತರವಷ್ಟೇ ಉತ್ತರ ಸಿಗಬೇಕಾಗಿದೆ.

(Bomb blast target) In connection with the Mangalore bomb blast case, the terrorists had targeted many famous crowded areas of Mangalore. Mangalore’s Hindu temples, railway station and airport were targeted. Now another scary information has come out about the target of terrorists.

Comments are closed.