ಚೆನ್ನೈ: (Building Collapses In Chennai) ಹಳೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ಮಹಿಳೆ ಗಾಯಗೊಂಡಿರುವ ಘಟನೆ ಚೆನ್ನೈನ ಅಣ್ಣಾಸಲೈನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಚೆನ್ನೈನ ಜೆಮಿನಿ ಬ್ರಿಡ್ಜ್ ಬಳಿ ಕ್ರೀಮ್ಸ್ ರಸ್ತೆ ಮತ್ತು ಅಣ್ಣಾಸಲೈಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಅಣ್ಣಾಸಲೈನಲ್ಲಿರುವ ಹಳೆಯ ಶಿಥಿಲ ಕಟ್ಟಡವನ್ನು ಕೆಡವುವ ಕಾರ್ಯ ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿತ್ತು. ಅದೇ ರೀತಿ ಇಂದು ಕೂಡ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿದ್ದು, ಕಾರ್ಮಿಕರು ಜೆಸಿಪಿ ಮೂಲಕ ಕಟ್ಟಡದ ಒಂದು ಭಾಗವನ್ನು ಕೆಡವುತ್ತಿದ್ದಾಗ ಇದ್ದಕ್ಕಿದ್ದಂತೆ ಗೋಡೆ ಕುಸಿದು ಫುಟ್‌ಪಾತ್ ಬಳಿ ದಾರಿಹೋಕರ ಮೇಲೆ ಬಿದ್ದಿತು. ಈ ವೇಳೆ ಇಬ್ಬರು ಅವಶೇಷಗಳಡಿ ಸಿಲುಕಿದ್ದಾರೆ.
ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಅವಶೇಷದಡಿಯಲ್ಲಿ ಸಿಕ್ಕಿಬಿದ್ದ ಮಹಿಳೆಯರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಮಹಿಳೆಯನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾವುದೇ ಸೂಚನಾ ಫಲಕ, ನಿಲುಗಡೆ ಫಲಕಗಳಿಲ್ಲದೆ ಬಿಡುವಿಲ್ಲದ ದಿನದಲ್ಲಿ ಕಾಮಗಾರಿ ನಡೆಸಲಾಗಿದ್ದು, ರಾತ್ರಿ ವೇಳೆ ಕಾಮಗಾರಿ ನಡೆಸಿರಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತ ಸಂಭವಿಸಿದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಸದ್ಯ ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : 3 year old boy death: ಪತಿ ಪತ್ನಿಯ ಜಗಳಕ್ಕೆ ಬಲಿಯಾಯ್ತು 3 ವರ್ಷದ ಕಂದ
ಪತಿ ಪತ್ನಿಯ ಜಗಳಕ್ಕೆ ಬಲಿಯಾಯ್ತು 3 ವರ್ಷದ ಕಂದಮ್ಮ
ಉತ್ತರ ಪ್ರದೇಶ: ಪತ್ನಿಯೊಂದಿಗೆ ಜಗಳವಾಡಿದ ಪತಿ ಕೋಪದ ಬರದಲ್ಲಿ ತನ್ನ ಮೂರು ವರ್ಷದ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ಹೊಲದಲ್ಲಿ ಹೂತು ಹಾಕಿದ ಘಟನೆ ಉತ್ತರ ಪ್ರದೇಶದ ಪತೇಪುರ್ ನಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಕಂದಮ್ಮನನ್ನು ರಾಜ್ ( 3 ವರ್ಷ) ಎಂದು ಗುರುತಿಸಲಾಗಿದೆ.
ಆರೋಪಿ ಚಂದ್ರಕಿಶೋರ್ ಲೋಧಿ ರಾತ್ರಿಯ ವೇಳೆ ಮನೆಗೆ ಕಂಠಪೂರ್ತಿಯಾಗಿ ಕುಡಿದು ಬಂದಿದ್ದು, ಪತ್ನಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಕೊನೆಗೆ ಇಬ್ಬರ ಜಗಳ ಅತಿರೇಕಕ್ಕೇರಿದ್ದು, ಲೋಧಿ ಕೋಪದ ಭರದಲ್ಲಿ ತನ್ನ ಮೂರು ವರ್ಷದ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ಮಗನ ಶವವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ.
ಇದನ್ನೂ ಓದಿ : Auto driver murder: ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆಗೈದ ಪ್ರಯಾಣಿಕರು
ಇದನ್ನೂ ಓದಿ : Murder for electricity bill: 3,000 ವಿದ್ಯುತ್ ಬಿಲ್ ಪಾವತಿಸದಿದ್ದಕ್ಕೆ ವ್ಯಕ್ತಿಯ ಕೊಲೆ
Building Collapses In Chennai: A woman died in a building collapse in Chennai