ಮಂಗಳವಾರ, ಏಪ್ರಿಲ್ 29, 2025
HomeCrimeದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದೌರ್ಜನ್ಯ

ದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದೌರ್ಜನ್ಯ

- Advertisement -

ಬೆಂಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದ ದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ಹಾಗೂ ನಟ ರಕ್ಷಕ್ ಮೇಲೆ ಮಂಗಳಮುಖಿಯರು ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ.

ಬೆಂಗಳೂರಿನ ಹೆಬ್ಬಾಳ ಫ್ಲೈ ಒವರ್ ಬಳಿ ಘಟನೆ ನಡೆದಿದ್ದು, ಬೈಕ್ ಮೇಲೆ ತೆರಳುತ್ತಿದ್ದ ರಕ್ಷಕ್ ನನ್ನು ಅಡ್ಡ ಹಾಕಿದ ಮಂಗಳಮುಖಿಯರು ಬ್ಯಾಗ್ ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ,ಅಪರಾಧಗಳ ಸಂಖ್ಯೆ ಶೇ.46ರಷ್ಟು ಹೆಚ್ಚಳ : ಮಹಿಳಾ ಆಯೋಗ

ಇದರಿಂದ ಬೈಕ್ ನಿಂದ ನಟ ರಕ್ಷಕ್ ಕೆಳಕ್ಕೆ ಬಿದ್ದಿದ್ದು ಕಾಲಿಗೆ ಪೆಟ್ಟಾಗಿದೆ. ಬಳಿಕ ರಕ್ಷಕ್ ಸಹಾಯಕ್ಕಾಗಿ ಹೆಬ್ಬಾಳ ಪೊಲೀಸರನ್ನು ಸಂಪರ್ಕಿಸಿದ್ದು ಹೆಬ್ಬಾಳ ಪೊಲೀಸರ ನೆರವಿನಿಂದ ಬೈಕ್ ತೆಗೆದುಕೊಂಡು ರಕ್ಷಕ್ ಮನೆಗೆ ತೆರಳಿದ್ದಾರೆ.

ಹಣಕ್ಕಾಗಿ ಮಂಗಳಮುಖಿಯರು ರಕ್ಷಕ್ ಪ್ರಕಾಶ್ ರನ್ನು ಪೀಡಿಸಿದ್ದು ಹಣ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Disha Rapecase: ದಿಶಾ ಅತ್ಯಾಚಾರ ಪ್ರಕರಣ:ಸಲ್ಮಾನ್ ಖಾನ್ ಸೇರಿ 38 ಜನರಿಗೆ ಎದುರಾಯ್ತು ಸಂಕಷ್ಟ

(Transgender abuse Comedian Bullet Prakash’s son)

RELATED ARTICLES

Most Popular