KSRTC : ಹಬ್ಬಕ್ಕೆ ಸಜ್ಜಾದ ಸಾರಿಗೆ ಇಲಾಖೆ: ಬೆಂಗಳೂರಿನಿಂದ 1 ಸಾವಿರ ಹೆಚ್ಚುವರಿ ಬಸ್ ಸಂಚಾರ

ಕೊರೋನಾ ಸಂಕಷ್ಟದ ನಡುವೆಯೇ ಗೌರಿ ಗಣೇಶ್ ಹಬ್ಬದ ಸಂಭ್ರಮ ರಾಜ್ಯದಲ್ಲಿ ನಿಧಾನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರಿಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಒಂದು ಸಾವಿರ ಹೆಚ್ಚಿನ ಬಸ್ ಗಳನ್ನು ಓಡಿಸಲು ನಿರ್ಧರಿಸಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮವೂ ಸಪ್ಟೆಂಬರ್ 8 ಹಾಗೂ 9 ರಂದು ರಾಜಧಾನಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಸಪ್ಟೆಂಬರ್ 12 ರಂದು ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್ ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ವಿಶೇಷ ಬಸ್ ಗಳಲ್ಲಿ ಸಂಚರಿಸುವ ವೇಳೆ ಕೊವೀಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಹೇಳಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಿದೆ. ಮಾತ್ರವಲ್ಲ ಒಟ್ಟಿಗೆ ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರು ಟಿಕೇಟ್ ಬುಕ್ ಮಾಡಿದರೇ ಶೇಕಡಾ 5 ರಷ್ಟು ಹಾಗೂ ಹೋಗಿ ಬರುವ ಟಿಕೇಟ್ ನ್ನು ಒಟ್ಟಿಗೆ ಬುಕ್ ಮಾಡಿದರೇ ಶೇಕಡಾ 10 ರಷ್ಟು ರಿಯಾಯತಿ ಸಿಗಲಿದೆ.

ಪ್ರಯಾಣಿಕರು  https://ksrtc.karnataka.gov.in/   ವೆಬ್ ಸೈಟ್ ನಲ್ಲಿ ತಮ್ಮ ಮುಂಗಡ ಟಿಕೇಟ್ ಕಾಯ್ದಿರಿಸಬಹುದಾಗಿದ್ದು, ಪಿಕ್ ಪಾಯಿಂಟ್, ಬಸ್ ಗಳ ವೇಳಾಪಟ್ಟಿ ಸೇರಿ ಎಲ್ಲ ವಿವರಗಳಿಗೆ ವೆಬ್ ಸೈಟ್ ಸಂಪರ್ಕಿಸುವಂತೆ ಸಾರಿಗೆ ಇಲಾಖೆ ಹೇಳಿದೆ.

ಇದನ್ನೂ ಓದಿ :

ಇದನ್ನೂ ಓದಿ : ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌ : ಸರಕಾರ ವಿಧಿಸಿದೆ ಹಲವು ಷರತ್ತು

ಇದನ್ನೂ ಓದಿ : ಗಡಿ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ಕೊಟ್ಟ ಸಿಎಂ ಬೊಮ್ಮಾಯಿ

(for festival ksrtc decided to run 1 thousand extra buses)

Comments are closed.