Bus accident: ಕ್ರಿಶ್ಚಿಯನ್ ಸ್ಮಶಾನಕ್ಕೆ ಬಸ್‌ ಢಿಕ್ಕಿ : ಸಮಾಧಿಗಳಿಗೆ ಹಾನಿ

ದೆಹಲಿ: (Bus accident) ಇಲ್ಲಿನ ಪೃಥ್ವಿರಾಜ್ ರಸ್ತೆ ಪ್ರದೇಶದ ಕ್ರಿಶ್ಚಿಯನ್ ಸ್ಮಶಾನದ ಕಾಂಪೌಂಡ್ ಗೋಡೆಗೆ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ನುಗ್ಗಿ ಗೋಡೆ ಮತ್ತು ಸಮಾಧಿಗಳಿಗೆ ಹಾನಿಯಾದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 6:50ಕ್ಕೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ ಡಿಟಿಸಿ ಬಸ್‌ ಸ್ಮಶಾನದ ಕಾಂಪೌಂಡ್‌ ಗೋಡೆಗೆ ಢಿಕ್ಕಿ ಹೊಡೆದಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ಅಪಘಾತದ ಸಮಯದಲ್ಲಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಮಾತ್ರ ವಾಹನದಲ್ಲಿದ್ದರು. ಹೀಗಾಗಿ ಘಟನೆಯಲ್ಲಿ ಯಾವುದೇ ಸಾವು- ನೋವುಗಳು ಸಂಭವಿಸಿಲ್ಲ. ಸದ್ಯ ಬಸ್ಸನ್ನು ಸ್ಮಶಾನದಿಂದ ಹೊರ ತೆಗೆಯಲಾಗುತ್ತಿದೆ. ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅಪಘಾತದ ನಿಖರ ಕಾರಣವಿನ್ನೂ ಸ್ಪಷ್ಟವಾಗಿಲ್ಲ.

ದೆಹಲಿ ಸಾರಿಗೆ ನಿಗಮ (DTC)ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ಪೂರೈಕೆದಾರರಾಗಿದ್ದು, ಇದು ಬಸ್ ಅನ್ನು ನಿರ್ವಹಿಸುತ್ತದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಸಿಎನ್‌ಜಿ ಚಾಲಿತ ಬಸ್ ಸೇವಾ ನಿರ್ವಾಹಕವಾಗಿದೆ. ಇತ್ತೀಚೆಗೆ, ದೆಹಲಿ ಸರ್ಕಾರವು 216 ಡಿಟಿಸಿ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ಸಹಾಯಕ ಟ್ರಾಫಿಕ್ ಇನ್‌ಸ್ಪೆಕ್ಟರ್ ಸ್ಥಾನಕ್ಕೆ ಏರಿಸಿದೆ. ಈ ಕ್ರಮದೊಂದಿಗೆ, ಜನರು ಮಾನ್ಯ ಟಿಕೆಟ್‌ಗಳು ಮತ್ತು ಬಸ್ ಪಾಸ್‌ಗಳನ್ನು ಬಳಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ದೆಹಲಿ ಸಾರಿಗೆ ನಿಗಮದ ವಿವಿಧ ಮಾರ್ಗಗಳಲ್ಲಿ ಕಾರ್ಯಪಡೆಯನ್ನು ಬಲಪಡಿಸಲಾಗುತ್ತದೆ.

ಪೃಥ್ವಿರಾಜ್ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನವು 2,000 ಕ್ಕೂ ಹೆಚ್ಚು ಸಮಾಧಿಗಳಿಗೆ ನೆಲೆಯಾಗಿದೆ. ಭಾರತದ ಹತ್ತನೇ ರಾಷ್ಟ್ರಪತಿ ಕೆಆರ್ ನಾರಾಯಣನ್ ಅವರ ಚಿತಾಭಸ್ಮವನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಅವರ ಪತ್ನಿಯನ್ನೂ ಅದೇ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Bus truck accident: ಬಸ್‌ಗೆ ಟ್ರಕ್ ಢಿಕ್ಕಿ: ಒಂದೇ ಕುಟುಂಬದ 4 ಮಂದಿ ಸೇರಿದಂತೆ 7 ಸಾವು

ಇದನ್ನೂ ಓದಿ : ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷಾ ಹಾಲ್ ಪ್ರವೇಶ ನಿರಾಕರಣೆ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಇದನ್ನೂ ಓದಿ : ಬ್ರಿಸ್ಬೇನ್‌ನ ಹಿಂದೂ ದೇವಾಲಯ ಧ್ವಂಸ: ಖಲಿಸ್ತಾನಿ ಬೆಂಬಲಿಗರಿಂದ ಕೃತ್ಯ

Bus accident: Bus hit Christian cemetery: Damage to graves

Comments are closed.