Byndoor Groom escapes : ಬೈಂದೂರು : ಮದುವೆಯ ಹೊತ್ತಲ್ಲೇ ಮದುಮಗ ಎಸ್ಕೇಪ್ ಆಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅಳಿವೆಕೋಡಿ ಎಂಬಲ್ಲಿ ನಡೆದಿದೆ. ಮೆಹಂದಿ ಕಾರ್ಯಕ್ರಮಕ್ಕೂ ಮುನ್ನ ವರ ನಾಪತ್ತೆಯಾದ ಬೆನ್ನಲ್ಲೇ ಇದೀಗ ಮದುವೆಯನ್ನು ರದ್ದು ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅಳಿವೆಕೋಡಿಯ ಯುವಕನ ಜೊತೆಗೆ ಉಪ್ಪುಂದದ ಯುವತಿಗೆ ಮದುವೆ ನಿಶ್ಚಯವಾಗಿದ್ದು, ನಾಗೂರಿನಲ್ಲಿ ಮದುವೆ ಸಮಾರಂಭ ನಡೆಯಬೇಕಾಗಿತ್ತು. ಆದರೆ ವರನ ಮನೆಯಲ್ಲಿ ಮೆಹಂದಿ ಕಾರ್ಯವನ್ನು ನಡೆಸಲು ಬೇಕಾದ ಸಿದ್ದತೆಯನ್ನು ನಡೆಸಲಾಗಿತ್ತು.
ಮನೆ ಮಂದಿಯೆಲ್ಲಾ ಮದುವೆಯ ಸಂಭ್ರಮದಲ್ಲಿದ್ದರು. ಆದರೆ ಮೆಹಂದಿಯ ದಿನ ಮದುಮಗ ಕೆಲವು ವಸ್ತುಗಳನ್ನು ತರಲು ತಾನು ಹೊರಗೆ ಹೋಗವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ. ಆದರೆ ರಾತ್ರಿಯಾದರೂ ಆತ ಮನೆಗೆ ವಾಪಾಸ್ ಬಂದಿಲ್ಲ. ವರನ ಕಡೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಪ್ರಯೋಜನವಾಗಿಲ್ಲ.
ಇದನ್ನೂ ಓದಿ : ಕೋರಮಂಗಲ ಅತ್ಯಾಚಾರ ಪ್ರಕರಣ : ಸಂತ್ರಸ್ತೆಯ ವಿರುದ್ದವೇ ಕೇಸ್ ದಾಖಲು
ಮದುವೆಗೆ ಬೇಕಾದ ಚಿನ್ನಾಭರಣ, ವಸ್ತ್ರಗಳನ್ನು ಯುವಕ ಖರೀದಿ ಮಾಡಿ ಮನೆಯಲ್ಲಿ ತಂದಿಟ್ಟಿದ್ದ. ಆದರೆ ಮನೆಯಿಂದ ಹೊರಗೆ ಹೋಗುವ ವೇಳೆಯಲ್ಲಿ ತನ್ನ ಬಳಿಯಲ್ಲಿದ್ದ ಮೊಬೈಲ್ ಹಾಗೂ ಬ್ರಾಸ್ಲೈಟ್ ಅನ್ನು ಮನೆಯಲ್ಲಿಯೇ ಬಿಚ್ಚಿಟ್ಟು ತೆರಳಿದ್ದಾನೆ. ಇದು ಅನುಮಾನವನ್ನು ಮೂಡಿಸಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ಮದುಮಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಶಾಂತ ಸ್ವಭಾವದವನಾಗಿದ್ದ ತಿಳಿದು ಬಂದಿದೆ. ಸದ್ಯ ನಿಗದಿಯಾಗಿದ್ದ ಮದುವೆಯನ್ನು ರದ್ದುಗೊಳಿಸಲಾಗಿದೆ. ಆದರೆ ಯುವಕ ನಾಪತ್ತೆ ಆಗಿರುವುದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ :
Byndoor Groom escapes during mehndi shastra, marriage is cancelled