ಸೋಮವಾರ, ಏಪ್ರಿಲ್ 28, 2025
HomeCoastal Newsಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

- Advertisement -

ಬೈಂದೂರು : (Byndur) ಫಾಲ್ಸ್‌ ನಲ್ಲಿ ಸ್ನಾನಕ್ಕಿಳಿದ ವೇಳೆ ಮುಳುಗಿ ವಿದ್ಯಾರ್ಥಿ ನಾಪತ್ತೆಯಾದ ಘಟನೆ ನಿನ್ನೆ ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್‌ ನಲ್ಲಿ ನಡೆದಿದ್ದು, ಇದೀಗ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.‌ಐ ಕುಮಾರ್‌ ಶೆಟ್ಟಿ ಎನ್ನುವವರ ಪುತ್ರ ಚಿರಾಂತ್‌ ಶೆಟ್ಟಿ ( 20 ವರ್ಷ) ಮೃತ ವಿದ್ಯಾರ್ಥಿ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಜೊತೆಗೆ ಏವಿಯೇಷನ್‌ ಕೋರ್ಸ್‌ ಓದುತ್ತಿದ್ದ ಚಿರಾಂತ್‌ ಶೆಟ್ಟಿ ಪಿಜಿಯಲ್ಲಿ ಉಳಿದುಕೊಂಡಿದ್ದನು. ಏ. ೭ ರಂದು ಗುಡ್‌ ಫ್ರೈಡೇ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಕಾರಣ ಚಿರಾಂತ್‌ ತನ್ನ ಸ್ನೇಹಿತರಾದ ಬೈಂದೂರಿನ ಕೀರ್ತನ್‌ ದೇವಾಡಿಗ ಹಾಗೂ ಅಕ್ಷಯ್‌ ಆಚಾರ್‌ ಎನ್ನುವವರ ಮನೆಗೆ ತನ್ನ ಮೂವರು ಗೆಳೆಯರೊಂದಿಗೆ ಗುರುವಾರ ರಾತ್ರಿ ತೆರಳಿದ್ದರು.

ಮರುದಿನ ಅಂದರೆ ಶುಕ್ರವಾರ ಮಧ್ಯಾಹ್ನ ಕೀರ್ತನ್‌ ಎನ್ನುವ ಸ್ನೇಹಿತನ ಮನೆಯಲ್ಲೇ ಊಟ ಮುಗಿಸಿಕೊಂಡು ಕೊಸಳ್ಳಿ ಫಾಲ್ಸ್‌ ಗೆ ತೆರಳಿದ್ದರು. ಈ ವೇಳೆ ಈಜು ಬರುತ್ತಿದ್ದ ಚಿರಾಂತ್‌ ಶೆಟ್ಟಿ ನೀರಿಗಿಳಿದಿದ್ದು, ಮತ್ತುಳಿದವರು ಈಜು ಬರದ ಕಾರಣ ದಂಡೆಯಲ್ಲೇ ಕುಳಿತಿದ್ದರು. ನೀರಿಗಿಳಿದ ಚಿರಾಂತ್‌ ಶೆಟ್ಟಿ ನೀರಿನಲ್ಲಿ ಮುಳುಗಿದ್ದು, ನಂತರ ನಾಪತ್ತೆಯಾಗಿದ್ದನು. ಮಾಹಿತಿ ಮೇರೆಗೆ ಸ್ಥಳೀಯರು ಹಾಗೂ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಇಂದು ಚಿರಾಂತ್‌ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Rape case- lady died: ಅತ್ಯಾಚಾರವೆಸಗಿ ಮಹಿಳೆಗೆ ಬೆಂಕಿ ಹಚ್ಚಿದ ಕಾಮುಕ : ಚಿಕಿತ್ಸೆ ಫಲಿಸದೇ ಮಹಿಳೆ ಸಾವು

ಇದನ್ನೂ ಓದಿ : ಪಿವಿಸಿ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ

ಇದನ್ನೂ ಓದಿ : Belthangady crime : ಬೆಳ್ತಂಗಡಿ : ಅಕ್ಕಪಕ್ಕದ ‌ಮನೆಯ ಇಬ್ಬರು ಯುವತಿಯರು ಅನುಮಾ‌ನಾಸ್ಪದವಾಗಿ ಸಾವು

Bynduru: Dead body of a student found in Kosalli falls

RELATED ARTICLES

Most Popular