Suzuki Hayabusa : ಹೊಸ ಬಣ್ಣಗಳ ಸರಣಿ ಮತ್ತು ನವೀಕರಣಗಳೊಂದಿಗೆ ಸುಜುಕಿ ಹಯಾಬುಸಾ ಬೈಕ್‌ ಬಿಡುಗಡೆ

ದ್ವಿಚಕ್ರ ವಾಹನ ತಯಾರಕ ಬ್ರ್ಯಾಂಡ್ ಸುಜುಕಿ ಮೋಟಾರ್‌ಸೈಕಲ್ಸ್ ತನ್ನ ಮೂರನೇ ತಲೆಮಾರಿನ ಹಯಬುಸಾ (Suzuki Hayabusa) ಮೋಟಾರ್‌ಸೈಕಲ್‌ನಲ್ಲಿ ಹೊಸ ಬಣ್ಣದ ಸರಣಿ ಮತ್ತು ಕೆಲವು ಅಪ್ಡೇಟ್‌ಗಳನ್ನು ಮಾಡಿ ಬಿಡುಗಡೆ ಮಾಡಿದೆ. ಇದರಲ್ಲಿ ಹೊಸ ಶ್ರೇಣಿಯ ಬಣ್ಣಗಳನ್ನು ಪರಿಚಯಿಸಲಾಗಿದೆ. ಇದು ಈಗ ಎರಡನೇ ತಲೆಮಾರಿನ ಆನ್-ಬೋರ್ಡ್ ಡಯಾಗ್ನೋಸ್ಟಿಕ್ ಸಿಸ್ಟಮ್ ಅನ್ನು ಸಹ ಹೊಂದಿದೆ. ದೆಹಲಿಯಲ್ಲಿ ಈ ಬೈಕಿನ ಎಕ್ಸ್ ಶೋ ರೂಂ ಬೆಲೆಯನ್ನು 16,90,000 ರೂ. ಆಗಿದೆ.

ಸೇರ್ಪಡೆಯಾದ ಹೊಸ ಬಣ್ಣಗಳು:
2023 ರ ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌ನ ಬಾಡಿಯನ್ನು ಡ್ಯುಯಲ್-ಟೋನ್ ಬಣ್ಣದ ಸ್ಕೀಮ್‌ನಲ್ಲಿ ನೀಡಲಾಗಿದೆ. ಅದರ ಮುಂಭಾಗದ ಏರ್ ಇನ್‌ಟೇಕ್‌ಗಳು, ಸೈಡ್ ಕೌಲಿಂಗ್ ಮತ್ತು ಹಿಂಭಾಗದ ಭಾಗಗಳಿಗೆ ವಿವಿಧ ಬಣ್ಣಗಳೊಂದಿಗೆ ಪರಿಚಯಿಸಲಾಗಿದೆ. ಇದರೊಂದಿಗೆ, ಹಯಬುಸಾ, ಈಗ 3 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ – ಮೆಟಾಲಿಕ್ ಥಂಡರ್ ಗ್ರೇ/ಕ್ಯಾಂಡಿ ಡೇರಿಂಗ್ ರೆಡ್, ಮೆಟಾಲಿಕ್ ಮ್ಯಾಟ್ ಬ್ಲಾಕ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಮತ್ತು ಪರ್ಲ್ ವಿಗರ್ ಬ್ಲೂ/ಪರ್ಲ್ ಬ್ರಿಲಿಯಂಟ್ ವೈಟ್.

ಹಯಬುಸಾದ ಮುಂಭಾಗದ ಫೇರಿಂಗ್ ಅನ್ನು ಲೋಹೀಯ ಬೂದು ಬಣ್ಣದಲ್ಲಿ ಕ್ಯಾಂಡಿ ರೆಡ್ ಹೈಲೈಟ್‌ಗಳೊಂದಿಗೆ ಮತ್ತು ಹಿಂಭಾಗದ ವಿಭಾಗದೊಂದಿಗೆ ಸೈಡ್ ಫೇರಿಂಗ್ ಅನ್ನು ನೀಡಲಾಗಿದೆ. ಇದರಲ್ಲಿ, ಪರ್ಲ್ ವೈಟ್ ಬಣ್ಣದ ಸ್ಕೀಮ್ ಅನ್ನು ವಿಗರ್ ಬ್ಲೂನ ಫಿನಿಶ್‌ ನೀಡಲಾಗಿದೆ. ‌ಗ್ರೇ ಬಣ್ಣದ ಅಕ್ಷರಗಳು ಮತ್ತು ಒಳಗೆ ಕ್ರೋಮ್ ಸ್ಟ್ರಿಪ್‌ ನೊಂದಿಗೆ ಫುಲ್‌ ಬ್ಲಾಕ್‌ ಪೇಂಟ್‌ ಸ್ಕೀಮ್‌ ಸಹ ಇರುತ್ತದೆ.

ಎಂಜಿನ್ ಹೇಗಿದೆ:
2023 ರ ಸುಜುಕಿ ಹಯಾಬುಸಾದಲ್ಲಿ 1340cc ಇನ್ಲೈನ್-ಫೋರ್ ಸಿಲಿಂಡರ್ ಎಂಜಿನ್ ಅನ್ನು ಬಳಸಲಾಗಿದೆ. ಇದು 190bhp ಪವರ್ ಮತ್ತು 142Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 4-ಪಿಸ್ಟನ್, ಟ್ವಿನ್ ಫ್ರಂಟ್ ಬ್ರೇಕ್ ಜೊತೆಗೆ ಬ್ರೆಂಬೊ ಸ್ಟೈಲ್ಮಾ ಸಿಸ್ಟಮ್, 1-ಪಿಸ್ಟನ್, ಸಿಂಗಲ್ ಪಿಸ್ಟನ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ. ಈ ಮೋಟಾರ್‌ಸೈಕಲ್‌ನಲ್ಲಿ 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆನಿಚಿ ಉಮೇದಾ ಮಾತನಾಡಿ, ‘ಭಾರತದಲ್ಲಿ ಮೂರನೇ ತಲೆಮಾರಿನ ಹಯಬುಸಾ ಮೇಲೆ ಜನರು ತೋರುತ್ತಿರುವ ಪ್ರೀತಿಗೆ ನಾವು ಕೃತಜ್ಞರಾಗಿರುತ್ತೇವೆ. ಈ ಮೋಟಾರ್‌ಸೈಕಲ್ ತನ್ನ ಸ್ಟೈಲಿಂಗ್ ಜೊತೆಗೆ ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಪ್ರಾರಂಭವಾದಾಗಿನಿಂದ, ಗುರ್ಗಾಂವ್ ಪ್ಲಾಂಟ್‌ನಲ್ಲಿ ಅಸೆಂಬಲ್‌ ಮಾಡಲಾದ ಬಹುತೇಕ ಎಲ್ಲಾ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಅದ್ಭುತ ಪ್ರತಿಕ್ರಿಯೆಯನ್ನು ನೋಡಿದ ಕಂಪನಿಯು ಈ ಬೈಕ್ ಅನ್ನು ಹೊಸ ಬಣ್ಣ ಶ್ರೇಣಿ ಮತ್ತು OBD2-A ಗೆ ಅನುಗುಣವಾಗಿ ಪರಿಚಯಿಸಿದೆ. ಇದರಿಂದಾಗಿ ಇದು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ : Alto K10 Vs Kwid : 5 ಲಕ್ಷದೊಳಗೆ ಖರೀದಿಸಬಹುದಾದ ಎರಡು ಕಾರುಗಳು; ಅಲ್ಟೊ ಕೆ10 Vs ಕ್ವಿಡ್‌

ಇದನ್ನೂ ಓದಿ : AC For Rented House : ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ? ಯಾವ ಎಸಿ ಖರೀದಿಸುವುದು ಎಂಬ ಗೊಂದಲವಿದ್ದರೆ ಇಲ್ಲಿದೆ ಪರಿಹಾರ

(Suzuki Hayabusa motorcycle launched with new color series)

Comments are closed.