ಥಾಯ್ಲೆಂಡ್: (Cambodia Fire accident) ಥಾಯ್ಲೆಂಡದ ನ ಗಡಿಭಾಗದಲ್ಲಿರುವ ಕಾಂಬೋಡಿಯನ್ ಹೋಟೆಲ್ ಕ್ಯಾಸಿನೊದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು. ಈ ಅವಘಡದಲ್ಲಿ ಸರಿಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದು, ಮೂವತ್ತು ಮಂದಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.
ಬುಧವಾರ ರಾತ್ರಿ 11:30 ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ (Cambodia Fire accident) ಕಾಣಿಸಿಕೊಂಡಿದ್ದು, ಸರಿಸುಮಾರು 50 ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ವರದಿಗಳ ಪ್ರಕಾರ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್-ಕ್ಯಾಸಿನೊದ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನರು ಮಹಡಿಯ ಮೇಲಿನಿಂದ ನೆಲಕ್ಕೆ ದುಮುಕುತ್ತಿರುವ ಆಘಾತಕಾರಿ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು, ರಕ್ಷಣಾ ತಂಡಗಳು ಧಾವಿಸಿದ್ದು, ಬೆಂಕಿಯನ್ನು ನಂದಿಸಿ ಬೆಂಕಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಚಾರಣೆಯನ್ನು ನಡೆಸಿದ್ದಾರೆ. ಬೆಳಿಗ್ಗೆ ಸರಿಸುಮಾರು 8.30 ರ ಹೊತ್ತಿಗೆ ಕಾರ್ಯಚರಣೆ ಮುಗಿದಿದ್ದು, ಬೆಂಕಿಯಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Stampede at Roadshow: ಆಂಧ್ರದ ನೆಲ್ಲೂರಿನಲ್ಲಿ ರೋಡ್ ಶೋ ವೇಳೆ ಕಾಲ್ತುಳಿತ: 7 ಸಾವು, ಹಲವರಿಗೆ ಗಾಯ
ಇದನ್ನೂ ಓದಿ : 17 year old girl murdered: ಮನೆಯ ಮುಂಭಾಗದಲ್ಲೇ ಕತ್ತು ಸೀಳಿ 17 ವರ್ಷದ ಬಾಲಕಿಯ ಹತ್ಯೆ; ಪ್ರಿಯಕರ ಅರೆಸ್ಟ್
ಇದನ್ನೂ ಓದಿ : ಲಕ್ನೋದಲ್ಲೊಂದು ದುರಂತ ಘಟನೆ: ಮಗುವಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯ ಖಾಸಗಿ ಅಂಗಕ್ಕೆ ಗಾಯಗೊಳಿಸಿದ ಪತಿ
ಥಾಯ್-ಕಾಂಬೋಡಿಯನ್ ಗಡಿಯುದ್ದಕ್ಕೂ ಇರುವ ಹಲವಾರು ಕ್ಯಾಸಿನೊ-ಹೋಟೆಲ್‌ಗಳಲ್ಲಿ ಗ್ರ್ಯಾಂಡ್ ಡೈಮಂಡ್ ಸಿಟಿ ಕೂಡ ಒಂದಾಗಿದ್ದು, ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್ ಕ್ಯಾಸಿನೊದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಇದನ್ನೂ ಓದಿ : Scooter collision: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಬೈಕ್ ಢಿಕ್ಕಿ: ಸ್ಥಳದಲ್ಲೇ ಮಗು ಸಾವು
A fire incident occurred at the Cambodian Hotel Casino on the border of Thailand. Around ten people died in this accident and thirty others suffered severe burns.