Car accident : ಕಾಲುವೆಗೆ ಕಾರು ಉರುಳಿ ಬಿದ್ದು ಮೂವರು ವಿದ್ಯಾರ್ಥಿಗಳು ಸಾವು

ಆಂಧ್ರಪ್ರದೇಶ: ರಜೆಯ ಮೋಜಿಗಾಗಿ ಸುತ್ತಾಟಕ್ಕೆಂದು ಹೋರಟಿದ್ದ ಮೂವರು ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ (Car accident) ಸಾವನ್ನಪ್ಪಿದ್ದಾರೆ ಎಂದು ಪೊಲೀಸರ್‌ ಅಧಿಕಾರಿಗಳು ತಿಳಿಸಿದ್ದಾರೆ. ಅತಿವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಕಾರೊಂದು ಉರುಳಿ ಕಾಲುವೆಗೆ ಬಿದ್ದಿರುವ ಘಟನೆ ನಡೆದಿದೆ. “ಸಮೀಪದ ಎಲೂರು ಜಿಲ್ಲೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ 10 ವಿದ್ಯಾರ್ಥಿಗಳ ಗುಂಪು ಶನಿವಾರ ರಾತ್ರಿ ಜಲಪಾತಗಳು ಮತ್ತು ಸಮೃದ್ಧ ಜೀವವೈವಿಧ್ಯವನ್ನು ಹೊಂದಿರುವ ಪೂರ್ವ ಗೋದಾವರಿ ಜಿಲ್ಲೆಯ ಪ್ರಕೃತಿ ಕೇಂದ್ರವಾದ ಮರೆಡುಮಿಲ್ಲಿಗೆ ಜಾಯ್ ರೈಡ್ ಮಾಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Bomb Threat Call : ರೈಲಿನಲ್ಲಿ ಸರಣಿ ಬಾಂಬ್ ಸ್ಫೋಟದ ಬೆದರಿಕೆ : ಪೊಲೀಸರಿಂದ ತನಿಖೆ ಚುರುಕು

ಇದನ್ನೂ ಓದಿ : Bus Accident : ಬಸ್ ನದಿಗೆ ಉರುಳಿದ ಬಸ್‌ : 3 ಮಂದಿ ಸಾವು, ಹಲವರು ಗಂಭೀರ

ಶನಿವಾರ ಮಧ್ಯರಾತ್ರಿ ಪೂರ್ವ ಗೋದಾವರಿ ಜಿಲ್ಲೆಯ ಬುರುಗುಪುಡಿ ಗೇಟ್‌ನಲ್ಲಿ ಅವರ ಕಾರು ರಸ್ತೆಯಿಂದ ಸ್ಕಿಡ್ ಆಗಿ ಕಾಲುವೆಗೆ ಬಿದ್ದಿದೆ ಎಂದು ಹೇಳಿದರು. ಮೃತರನ್ನು ಹರ್ಷವರ್ಧನ್, ಹೇಮಂತ್ ಮತ್ತು ಉದಯ್ ಕಿರಣ್ ಎಂದು ಗುರುತಿಸಲಾಗಿದ್ದು, ವಾಹನದಲ್ಲಿದ್ದ ಉಳಿದವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

Car accident: Three students died when the car fell into the canal

Comments are closed.