ಹುಬ್ಬಳ್ಳಿ : Chandrasekhar Guruji : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹಾಡ ಹಗಲೇ ಬರ್ಬರವಾಗಿ ಕೊಲೆಯಾಗಿದ್ದಾರೆ. ಚಂದ್ರಶೇಖರ್ ಗುರೂಜಿಗಳ ಜೊತೆಯಲ್ಲೇ ಗುರುತಿಸಿಕೊಂಡಿದ್ದ ಆಪ್ತರೇ ಇವರ ಸಾವಿಗೆ ಮುಹೂರ್ತವನ್ನಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಂದ್ರಶೇಖರ್ ಗುರೂಜಿ ಇದೇ ಹೋಟೆಲ್ನಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಬಂದಿದ್ದ ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದ್ದಾರೆ. ಹೋಟೆಲ್ನ ರೂಮ್ ನಂಬರ್ 220ಯಲ್ಲಿ ತಂಗಿದ್ದ ಚಂದ್ರಶೇಖರ್ ಗುರೂಜಿ ಯಾವುದೋ ಫೋನ್ ಕರೆ ಬಂದ ಬಳಿಕ ಕೆಳಗೆ ಇಳಿದು ಬಂದಿದ್ದರು. ಇದೇ ವೇಳೆ ರಿಸೆಪ್ಶನ್ ಕಾದು ಕುಳತಿದ್ದ ದುಷ್ಕರ್ಮಿಗಳು ಗುರುಜಿಗಳ ಕಾಲಿಗೆ ಎರಗಿದಂತೆ ಮಾಡಿ ಬಳಿಕ 70 ಬಾರಿ ಬರ್ಬರವಾಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿದ ಪೊಲೀಸರು ಈ ಕೊಲೆಯನ್ನು ಮಾಡಿದ್ದು ಚಂದ್ರ ಶೇಖರ್ ಗುರೂಜಿ ಆಪ್ತ ಮಹಂತೇಶ್ ಶಿರೋಳ್ ಹಾಗೂ ಮಂಜುನಾಥ್ ದುಮ್ಮವಾಡ ಎಂದು ಗುರುತಿಸಿದ್ದಾರೆ. ಪ್ರಸ್ತುತ ಇಬ್ಬರೂ ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ಮಹಂತೇಶ್ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ್ ರೋಡ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಈ ಕೊಲೆ ನಡೆಯಲು ಮೂಲ ಕಾರಣವೇ ವನಜಾಕ್ಷಿ ಎಂದು ಹೇಳಲಾಗ್ತಿದೆ. ಸರಳ ವಾಸ್ತು ಸಂಸ್ಥೆಯಲ್ಲಿ 2019ರವರೆಗೆ ಕೆಲಸ ಮಾಡಿದ್ದ ವನಜಾಕ್ಷಿ ಆರೋಪಿ ಮಹಂತೇಶ್ ಶಿರೋಳ್ರ ಪತ್ನಿ. ವಿಪರ್ಯಾಸ ಅಂದರೆ ಮಹಂತೇಶ್ ಶಿರೋಳ್ ಹಾಗೂ ವನಜಾಕ್ಷಿಗೆ ಕೊಲೆಯಾದ ಚಂದ್ರಶೇಖರ್ ಗುರೂಜಿಯೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಅಲ್ಲದೇ ಇವರಿಗೆ ಗೋಕುಲ್ ರೋಡ್ನಲ್ಲಿ ಫ್ಲ್ಯಾಟ್ ಒಂದನ್ನು ವಾಸಿಸಲು ಸಹ ನೀಡಿದ್ದರು. ಮಾತ್ರವಲ್ಲದೇ ವನಜಾಕ್ಷಿ ಹೆಸರಲ್ಲಿ ಇನ್ನೂ ಹತ್ತು ಹಲವು ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ.
ವನಜಾಕ್ಷಿ ಸರಳ ಸಂಸ್ಥೆಯಲ್ಲಿ ಉದ್ಯೋಗವನ್ನು ನಿಲ್ಲಿಸಿದ ಬಳಿಕ ಗುರೂಜಿ ಫ್ಲ್ಯಾಟ್ ಹಾಗೂ ಆಸ್ತಿಯನ್ನು ವಾಪಸ್ ಮಾಡುವಂತೆ ಕೇಳುತ್ತಿದ್ದರು ಎನ್ನಲಾಗಿದೆ.ಇದೇ ವಿಚಾರವಾಗಿ ಚಂದ್ರಶೇಖರ್ ಗುರೂಜಿ ಹಾಗೂ ಮಹಂತೇಶ್ ಶಿರೋಳ್ ವನಜಾಕ್ಷಿ ದಂಪತಿ ನಡುವೆ ವೈಮನಸ್ಯ ಮೂಡಿತ್ತು ಎನ್ನಲಾಗಿದೆ. ಇದೇ ವಿವಾದವು ದ್ವೇಷಕ್ಕೆ ತಿರುಗಿ ಇಂದು ಚಂದ್ರಶೇಖರ್ ಗುರೂಜಿ ಕೊಲೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇವರಿಬ್ಬರಿಗೂ ಸಹಾಯ ಮಾಡಲು ಹೋಗಿ ಚಂದ್ರಶೇಖರ್ ಗುರೂಜಿ ತಮ್ಮ ಸಾವಿಗೆ ತಾವೇ ಮುನ್ನಡಿ ಬರೆದುಕೊಂಡ್ರಾ ಎಂಬ ಮಾತು ಕೇಳಿ ಬರ್ತಿದೆ.
ಇದನ್ನು ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು
ಇದನ್ನೂ ಓದಿ : murder of Chandrasekhar Guruji : ಚಂದ್ರಶೇಖರ್ ಗುರೂಜಿ ಸಾವಿಗೆ ಆ ಮಹಿಳೆಯೇ ಕಾರಣ..? ಅನುಮಾನಕ್ಕೆಡೆ ಮಾಡಿದ ಬೇನಾಮಿ ಆಸ್ತಿ
Chandrasekhar Guruji performed marriage for Vanajakshi and Mahantesh